ಸ್ವಾತಂತ್ರ್ಯಸ ದಿನಾಚರಣೆಯಂದು ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದ ಸರ್ವಜ್ಞ ಸರ್ಕಲ್ ಎದುರು ಬಿಜೆಪಿ ಯುವ ಮೋರ್ಚಾ ಹಿರೇಕೆರೂರು ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಿರೇಕೆರೂರು: ಸ್ವಾತಂತ್ರ‍್ಯ ದಿನಾಚರಣೆಯಂದು ವಂದೇ ಮಾತರಂ ಗೀತೆಗೆ ಅಗೌರವ ತೋರಿದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಸೋಮವಾರ ಪಟ್ಟಣದ ಸರ್ವಜ್ಞ ಸರ್ಕಲ್ ಎದುರು ಬಿಜೆಪಿ ಯುವ ಮೋರ್ಚಾ ಹಿರೇಕೆರೂರು ಮಂಡಲದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಬಿ.ಸಿ. ಪಾಟೀಲ್, ಸ್ವಾತಂತ್ರ‍್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಗೀತೆಯ ಪೂರ್ಣ ಗಾಯನಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ತಡೆಯೊಡ್ಡಿರುವುದು ವಂದೇ ಮಾತರಂ ಗೀತೆಗೆ ಮಾಡಿದ ಅವಮಾನವಾಗಿದೆ. ರಾಷ್ಟ್ರಗೀತೆಯ ಸ್ಥಾನಮಾನ ನೀಡಲಾದ ವಂದೇ ಮಾತರಂ ಗೀತೆಗೆ ಅಗೌರವ ತೋರಿದ್ದಕ್ಕಾಗಿ ಕಾಂಗ್ರೆಸ್ ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂತಿಮಠ, ಯುವ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಪ್ರದೀಪ್ ಪಾಟೀಲ್, ಯುವ ಮೋರ್ಚಾ ಮಂಡಲ ಅಧ್ಯಕ್ಷರಾದ ಜಗದೀಶ್ ದೊಡ್ಡಗೌಡ್ರ, ರವಿಶಂಕರ್ ಬಾಳಿಕಾಯಿ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪಾಟೀಲ, ಶಿವರಾಜ್ ಪ್ಯಾಟಿ, ಅಖಿಲ ಪಾಟೀಲ್, ಉಮೇಶ್ ಮೂದಿಗೌಡ್ರ, ಬಸವರಾಜ್ ಚಿಂದಿ, ಜಯಣ್ಣ ಕಾಲ್ವಿಹಳ್ಳಿ, ಉಮೇಶ ಬಣಕಾರ, ಬಸನಗೌಡ ದೊಡ್ಡಗೌಡ್ರ, ಮಹೇಂದ್ರ ಈಟೆರ್, ಶಂಕರಗೌಡ ಪೊಲೀಸಗೌಡ್ರ ಕುಬೇರಗೌಡ ಮರೀಗೌಡ, ಚೆನ್ನವೀರಯ್ಯ ಹಿರೇಮಠ್ ಹಾಗೂ ಬಿಜೆಪಿ ಕಾರ್ಯಕರ್ತರು ಬಾಗವಹಿಸಿದರು,