ಚನ್ನಗಿರಿಯಲ್ಲಿ ಲೋಕಾ ಗಾಳಕ್ಕೆ ಗ್ರಾಪಂ ಬಿಲ್ ಕಲೆಕ್ಟರ್, ನೀರುಗಂಟಿ

KannadaprabhaNewsNetwork |  
Published : Jun 20, 2025, 12:34 AM ISTUpdated : Jun 20, 2025, 12:06 PM IST
Lokayukta raid Mysuru CESC AEE engeneers trapped while accepting bribe

ಸಾರಾಂಶ

ಇಂದಿರಾ ಗ್ರಾಮೀಣ ವಸತಿ ನಿವೇಶನದಡಿ 2016ನೇ ಸಾಲಿನಲ್ಲಿ ಮಂಜೂರಾಗಿದ್ದ ವಸತಿ ಯೋಜನೆಯ ನಿವೇಶನದ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಗ್ರಾಪಂ ಬಿಲ್ ಕಲೆಕ್ಟರ್‌ ಹಾಗೂ ನೀರುಗಂಟಿ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಚನ್ನಗಿರಿ ತಾ. ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.

 ಚನ್ನಗಿರಿ :  ಇಂದಿರಾ ಗ್ರಾಮೀಣ ವಸತಿ ನಿವೇಶನದಡಿ 2016ನೇ ಸಾಲಿನಲ್ಲಿ ಮಂಜೂರಾಗಿದ್ದ ವಸತಿ ಯೋಜನೆಯ ನಿವೇಶನದ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಗ್ರಾಪಂ ಬಿಲ್ ಕಲೆಕ್ಟರ್‌ ಹಾಗೂ ನೀರುಗಂಟಿ ಲೋಕಾಯುಕ್ತರ ಗಾಳಕ್ಕೆ ಸಿಕ್ಕಿ ಬಿದ್ದ ಘಟನೆ ಚನ್ನಗಿರಿ ತಾ. ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚನ್ನಗಿರಿ ತಾ. ದೇವರಹಳ್ಳಿ ಗ್ರಾಪಂ ಹಂಗಾಮಿ ಬಿಲ್ ಕರೆಕ್ಟರ್ ಲೋಕೇಶ ಹಾಗೂ ನೀರುಗಂಟಿ ಶೇಖರಪ್ಪ ಲೋಕಾಯುಕ್ತ ಗಾಳಕ್ಕೆ ಸಿಕ್ಕಿ ಬಿದ್ದ ಆರೋಪಿಗಳು. ದೇವರಹಳ್ಳಿ ಗ್ರಾಮದ ಆರ್‌.ಲಕ್ಷ್ಮಿದೇವಿ ಲಕ್ಷ್ಮೀಪತಿ ಎಂಬುವರಿಗೆ ಇಂದಿರಾ ಗ್ರಾಮೀಣ ವಸತಿ ನಿವೇಶನ ಯೋಜನೆಯಡಿ 2016ನೇ ಸಾಲಿನಲ್ಲಿ ವಸತಿ ನಿವೇಶನ ಮಂಜೂರಾಗಿದ್ದು, ಅದರ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚ ಪಡೆಯುತ್ತಿದ್ದ ವೇಳೆ ಹಂಗಾಮಿ ಬಿಲ್ ಕಲೆಕ್ಟರ್‌ ಲೋಕೇಶ, ನೀರುಗಂಟಿ ಶೇಖರಪ್ಪ ಸಿಕ್ಕಿ ಬಿದ್ದಿದ್ದಾರೆ.

ಫಲಾನುಭವಿ ಲಕ್ಷ್ಮೀದೇವಿ ಲಕ್ಷ್ಮೀಪತಿ ದೇವರಹಳ್ಳಿ ಗ್ರಾಪಂನಲ್ಲಿ ಜೂ.18ರಂದು ಹಕ್ಕುಪತ್ರದ ಬಗ್ಗೆ ವಿಚಾರಿಸಿದಾಗ ಬಿಲ್ ಕಲೆಕ್ಟರ್‌ ಲೋಕೇಶ ಹಕ್ಕುಪತ್ರ ನೀಡಲು 5 ಸಾವಿರ ರು. ಲಂಚದ ಬೇಡಿಕ ಇಟ್ಟಿದ್ದಾರೆ. ಲಂಚ ಕೊಡಲು ಇಷ್ಟವಿಲ್ಲದ ಲಕ್ಷ್ಮೀದೇವಿ ಗ್ರಾಪಂ ಹಂಗಾಮಿ ಬಿಲ್ ಕಲೆಕ್ಟರ್‌ ಲೋಕೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು ಮೊಕದ್ದಮೆ ನಂ:07/2025 ಕಲಂ 7(ಎ) ಪಿ.ಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018)ರ ರೀತಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪಿರ್ಯಾದಿ ಲಕ್ಷ್ಮೀದೇವಿ ಲಕ್ಷ್ಮೀಪತಿ ಅವರಿಗೆ ದೇವರಹಳ್ಳಿ ಗ್ರಾಪಂ ಕಚೇರಿಗೆ ಗುರುವಾರ ಲಂಚದ ಹಣ ತರುವಂತೆ ತಿಳಿಸಿದಂತೆ ಆ ಕಚೇರಿಗೆ ಹೋದಾಗ ಹಂಗಾಮಿ ಬಿಲ್ ಕಲೆಕ್ಟರ್ ಲೋಕೇಶ ಹಾಗೂ ನೀರುಗಂಟಿ ಶೇಖರಪ್ಪ ಪಿರ್ಯಾದಿಗೆ 5 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟು, 5 ಸಾವಿರ ರು. ಹಣ ಪಡೆಯುತ್ತಿದ್ದರು. ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕೋಗಿಲು ಅಕ್ರಮ ಮನೆಗಳ ತೆರವು ಎನ್‌ಐಎ ತನಿಖೆಗೆ ನೀಡಲು ಆಗ್ರಹ
ಒಳ್ಳೆ ರಿಸಲ್ಟ್‌ಗಾಗಿ ಶಿಕ್ಷಕರಿಂದ್ಲೇಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಲೀಕ್