ಶಿಗ್ಗಾವಿ: ತಾಲೂಕಿನ ಶ್ಯಾಡಂಬಿ ಗ್ರಾಮದಲ್ಲಿ ನಾಳೆಯಿಂದ ಗ್ರಾಮದೇವಿಯ ನೂತನ ದೇವಸ್ಥಾನ ಕಳಸಾರೋಹಣ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಕಾರ್ಯಕ್ರಮ ಏ. ೨೨ರಿಂದ ೨೬ ರವರೆಗೆ ಜರುಗಲಿದೆ.
ನೂತನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಕುನ್ನೂರ ಗ್ರಾಮದಿಂದ ಮಹಿಳೆಯರಿಂದ ಕುಂಭ ಮೇಳದೊಂದಿಗೆ ಸಕಲ ವಾದ್ಯ ವೈಭವದೊಂದಿಗೆ ನೂತನ ಗ್ರಾಮದೇವಿಯ ಮೂರ್ತಿ ಮೆರವಣಿಗೆ ನಡೆಯಲಿದ್ದು, ಮೂರ್ತಿಯ ಮೆರವಣಿಗೆಯು ಶ್ಯಾಡಂಬಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ೨೨ರಂದು ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಜಾತ್ರಾ ಮಂಟಪದಲ್ಲಿ ಪ್ರತಿಷ್ಠಾಪನೆಗೊಳ್ಳುವುದು. ಸಾಯಂಕಾಲ ೬ ಘಂಟೆಗೆ ಧರ್ಮಸಭೆ ಜರುಗಲಿದ್ದು, ದಿವ್ಯ ಸಾನಿಧ್ಯವನ್ನು ಅಗಡಿ ಆನಂದವನ ಮಠದ ವಿಶ್ವನಾಥ ಚಕ್ರತೀರ್ಥ ಮಹಾಸ್ವಾಮೀಜಿಗಳು ಹಾಗೂ ಕುನ್ನೂರ ಗ್ರಾಮದ ಸೋಮಯ್ಯನವರು ಹಿರೇಮಠ ಅವರು ದಿವ್ಯ ಸಾನಿಧ್ಯ ವಹಿಸುವರು.ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನೆರವೇರಿಸುವರು. ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ ಜೋಶಿಯವರು ಜ್ಯೋತಿ ಬೆಳಗಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲ್ಯಾಂಡ ಲಾರ್ಡ್ ಹಾಗೂ ಗ್ರಾಮದೇವಿ ದೇವಸ್ಥಾನದ ಗೌರವಾಧ್ಯಕ್ಷರಾದ ಕಿರಣ ಪಾಟೀಲ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಮಡ್ಲಿ ಗ್ರಾ.ಪಂ. ಅಧ್ಯಕ್ಷೆ ಕವಿತಾ ಚಂ. ಸೊಲಬಕ್ಕನವರ, ಉಪಾಧ್ಯಕ್ಷೆ ಲಕ್ಷ್ಮವ್ವ ನಡಗೇರಿ, ಸದಸ್ಯರಾದ ರುದ್ರಗೌಡ ಪಾಟೀಲ ಬಸನಗೌಡ ಪಾಟೀಲ, ಹಾವೇರಿ ಕಾ.ನಿ.ಪ.ಸಂಘ ಉಪಾಧ್ಯಕ್ಷ ಬಿ.ಎಸ್. ಹಿರೇಮಠ, ಶಿಗ್ಗಾಂವ ಕಾ.ನಿ.ಪ. ಸಂಘದ ಅಧ್ಯಕ್ಷ ಪರಮೇಶ ಲಮಾಣಿ , ಕುನ್ನೂರ ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ ಚಿಕ್ಕವೀರಮಠ, ಶಿಗ್ಗಾವಿಯ ಡಾ. ಪ್ರಶಾಂತ ನಾಯಕ ಅವರು ಹಾಗೂ ಶ್ಯಾಡಂಬಿ ಗ್ರಾಮದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಲಿದ್ದಾರೆ.ಏ. ೨೫ರಿಂದ ೨೬ರ ವರೆಗೆ ನೂತನ ದೇವಸ್ಥಾನದಲ್ಲಿ ಅರ್ಚಕರಿಂದ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಜರುಗುವವು ಎಂದು ಗ್ರಾಮದೇವಿ ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ಕೋರಿದ್ದಾರೆ.
೨೧ಎಸ್ಜಿವಿ೧ತಾಲೂಕಿನ ಶ್ಯಾಡಂಬಿ ಗ್ರಾಮದ ಗ್ರಾಮದೇವಿ