ಕೊಳ್ಳೇಗಾಲದಲ್ಲಿ ಅದ್ಧೂರಿ ಬಸವ ಜಯಂತಿ

KannadaprabhaNewsNetwork |  
Published : Jun 01, 2025, 01:52 AM IST
ಕೊಳ್ಳೇಗಾಲದಲ್ಲಿ ಅದ್ದೂರಿ ಬಸವ ಜಯಂತಿ | Kannada Prabha

ಸಾರಾಂಶ

ಕೊಳ್ಳೇಗಾಲದಲ್ಲಿ ಆಯೋಜಸಿದ್ದ ಬಸವ ಜಯಂತಿ ಮೆರವಣಿಗೆ ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು. ಶಾಸಕ ಗಣೇಶ ಪ್ರಸಾದ್, ಮಂಜುನಾಥ್, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಪುಟ್ಟಣ್ಣ, ಮಹದೇವಪ್ರಸಾದ್ ಇನ್ನಿತತರಿದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಶುಕ್ರವಾರ ಆಯೋಜಿಸಲಾಗಿದ್ಧ ಜಗಜ್ಯೋತಿ ಬಸವೇಶ್ವರ 892ನೇ ಜಯಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು.

ಪಟ್ಟಣದ ಎಂಜಿಎಸ್ವಿ ಮೈದಾನದಲ್ಲಿ ಆಯೋಜಿಸಿದ್ದ ಮೆರವಣಿಗೆಗೆ ಮೈಸೂರಿನ ಜೆಎಸ್ಎಸ್ ಮಠದ ಶಿವರಾತ್ರಿ ದೇಶಿಕೇಂದ್ರ ಶಿವರಾತ್ರಿ ಸ್ವಾಮಿಗಳು ಮೆರವಣಿಗೆಗೆ ಚಾಲನೆ ನೀಡಿ ಬಸವಣ್ಣನ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಿ ಎಂಬ ಸಂದೇಶ ನೀಡಿದರು. ಸಾಲೂರು ಮಠಾಧ್ಯಕ್ಷ ಡಾ.ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಗುಂಡೇಗಾಲ ಮಠಾಧ್ಯಕ್ಷ ಕಾಂತಬುದ್ದಿ, ಹನೂರು ಶಾಸಕ ಎಂಆರ್ ಮಂಜುನಾಥ್, ಗುಂಡ್ಲುಪೇಟೆ ಶಾಸಕ ಗಣೇಶಪ್ರಸಾದ್, ಮಾಜಿ ಶಾಸಕಿ ಪರಿಮಳ ನಾಗಪ್ಪ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಅ.ಭಾ.ವೀ.ಲಿಂ.ಮಹಾಸಭೆ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಹನೂರು ಕ್ಷೇತ್ರದ ಯುವ ನಾಯಕ ನಿಶಾಂತ್, ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಮಾಜ ಸಚಿವ ನಾಗಪ್ಪಅವರ ಪುತ್ರ ಯುವ ನಾಯಕ ಡಾ.ಪ್ರೀತನ್ ನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಿಕಟಪೂರ್ವ ಅಧ್ಯಕ್ಷ ತಿಮ್ಮರಾಜಿಪುರ ಪುಟ್ಟಣ್ಣ, ವಿವಿಧ ಮಠಗಳ ಮಠದ ಮಠಾಧಿಪತಿಗಳು ಭಾಗವಹಿಸಿದ್ದರು. ಡಾ.ರಾಜ್ ಕುಮಾರ್ ರಸ್ತೆ, ಡಾ.ಅಂಬೇಡ್ಕರ್ ರಸ್ತೆಯ ಮೂಲಕ ಸಾಗಿಬಂದ ಮೆರವಣಿಗೆಗೆ ವಿವಿಧ ಮಠದ ಸ್ವಾಮೀಜಿಗಳು, ಗಣ್ಯರು ಹಾಗೂ ನೂರಾರು ಮಂದಿ ಪಾಲ್ಗೊಂಡರು.

ನಂದಿ ಕುಣಿತ, ಪೂಜಾ ಕುಣಿತ, ಕೋಲಾಟ, ಡಮರುಗ, ಡೊಲ್ಲು ಕುಣಿತ, ವೀರಗಾಸೆ, ಗಾರುಡಿಗೊಂಬೆಗಳು, ಮಂಗಳವಾದ್ಯಗಳು ಮೆರವಣಿಯುದ್ದಕ್ಕೂ ಕಳೆ ತಂದಿತು. ಹಲವು ಮಹಿಳೆಯರು, ಮಕ್ಕಳು ಕಳಸ ಹೊತ್ತು ಸಾಗುವ ಮೂಲಕ ಮೆರವಣಿಗೆ ಅದ್ಧೂರಿ ತನಕ್ಕೆ ಸಾಕ್ಷಿಯಾದರು. ಗುರುಮಲ್ಲೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವೃಷಬೇಂದ್ರ, ವೀರಶೈವ ಮಹಾಸಭೆಯ ಉಪಾಧ್ಯಕ್ಷ ತಿಮ್ಮರಾಜಿಪುರ ರಾಜು, ಜಿ ಪಿ ಶಿವಕುಮಾರ್, ಸುಮ ಸುಬ್ಬಣ್ಣ. ಅಚ್ಚಗಾಳ್ ಮಹದೇವಸ್ವಾಮಿ, ಕೆಂಪನಪಾಳ್ಯ ಮಹೇಶ್, ಮಹೇಶ , ರವಿ ಕುಣಹಗಳ್ಳಿ, ಸಿದ್ದಪ್ಪ, ಅನಾಪುರ ಉಮೇಶ್, ಮಲ್ಲೇಶಪ್ಪ, ತಿಮ್ಮರಾಜಿರಪುರ ಮಹದೇವಸ್ಲವಾಮಿ, ಲೋಕೇಶ್, ಮಹದೇವಪ್ಪ, ನಂದೀಶ್,ಬೃಂಗೇಶ್, ಬಸವರಾಜು, ನಂಜುಂಡಸ್ವಾಮಿ ಇನ್ನಿತರರಿದ್ದರು.

PREV

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌