ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಸೇರಿದಂತೆ ಅನೇಕ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು.
ವೀರಗಾಸೆ, ಗೊರವರ ಕುಣಿತ, ನಂದಿಧ್ವಜ, ವಿವಿಧ ಸ್ತಬ್ಧಚಿತ್ರ, ಕಂಗೀಲು ನೃತ್ಯ, ಗಾರುಡಿ ಗೊಂಬೆ, ಯಕ್ಷಗಾನ ವೇಷಧಾರಿಗಳು, ಪೂಜಾ ಕುಣಿತ, ಡೊಳ್ಳು ಕುಣಿತ, ನಾಲ್ವಡಿ ಕೃಷ್ಣರಾಜ ಒಡೆಯರ್ಅವರ ಜೀವಿತಾವಧಿಯಲ್ಲಿ ಕೈಗೊಂಡ ವಿವಿಧ ಯೋಜನೆಗಳ ಮಾಹಿತಿಯನ್ನು ಹೊತ್ತ ಸ್ತಬ್ಧಚಿತ್ರ ಮತ್ತು ಅವರ ಪ್ರತಿಮೆಯನ್ನು ಒಳಗೊಂಡ ಅಲಂಕೃತ ವಾಹನದೊಡನೆ ಮೆರವಣಿಗೆಯು ಅದ್ಧೂರಿಯಾಗಿ ನೆರವೇರಿತು.ಮೆರವಣಿಗೆಯು ದೇವರಾಜ ಅರಸು ರಸ್ತೆ, ಜೆ.ಎಲ್.ಬಿ ರಸ್ತೆ, ಹುಣಸೂರು ರಸ್ತೆ ಮೂಲಕ ಕಲಾಮಂದಿರ ತಲುಪಿತು.
ಚಿತ್ರಕಲಾ ಸ್ಪರ್ಧೆ:
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ಜಯಂತಿ ಅಂಗವಾಗಿ ಕಲಾಮಂದಿರ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು.ಮಕ್ಕಳಿಗೆ ಪುಸ್ತಕ ಲೇಖನಿ ವಿತರಣೆ:ನಗರದ ಶ್ರೀ ಕೃಷ್ಣರಾಜ ಸಹಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾತಿ ಫೌಂಡೇಶನ್ ವತಿಯಿಂದ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ 141ನೇ ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಾಲಾ ಮಕ್ಕಳಿಗೆ ಪುಸ್ತಕ ಲೇಖನಿಗಳು ಹಾಗೂ ಸಿಹಿ ವಿತರಿಸಲಾಯಿತು.
ನಗರಪಾಲಿಕ ಮಾಜಿ ಸದಸ್ಯ ಎಂ.ಡಿ. ಪಾರ್ಥಸಾರಥಿ, ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಕೆಪಿಸಿಸಿ ಸದಸ್ಯ ನಟರಾಜ್, ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಆರಾಧ್ಯ ಮಹಾಸಭಾ ಉಪಾಧ್ಯಕ್ಷ ಕುಮಾರ್ ಆರಾಧ್ಯ, ಮಹೇಂದ್ರ ಆರಾಧ್ಯ, ಎಸ್ ಎನ್ ರಾಜೇಶ್, ರವಿಚಂದ್ರ, ರಾಜಕುಮಾರ್, ಎಂ.ಆರ್. ಬಾಲಕೃಷ್ಣ, ಚಂದನ್, ಸುನಿಲ್, ಕನಕಮೂರ್ತಿ, ಸುಮಾ, ರೂಪಾ, ಶೀಲಾ ಇದ್ದರು.