- ಶ್ರೀರಾಮ, ಶ್ರೀ ಆಂಜನೇಯಸ್ವಾಮಿ ಬೃಹತ್ ಟ್ಯಾಬ್ಲೋಗಳ ಆಕರ್ಷಣೆ
ಕನ್ನಡಪ್ರಭ ವಾರ್ತೆ ಮಂಡ್ಯ
ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದ ಸಹಯೋಗದೊಂದಿಗೆ ನಗರದಲ್ಲಿ ಗುರುವಾರ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಯಿತು. ಡಿಜೆ ಮತ್ತು ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದು ಎಲ್ಲೆಡೆ ಕೇಸರಿಮಯವಾಗುವಂತೆ ಮಾಡಿತ್ತು.ನಗರದ ಶಂಕರಮಠದ ಶ್ರೀ ಶನೇಶ್ವರ ದೇಗುಲದಿಂದ ಶೋಭಾಯಾತ್ರೆ ಶುರುವಾಯಿತು. ಮೆರವಣಿಗೆಯಲ್ಲಿ ಶ್ರೀರಾಮ, ಶ್ರೀ ಆಂಜನೇಯಸ್ವಾಮಿಯ ಬೃಹತ್ ಟ್ಯಾಬ್ಲೋಗಳು ಆಕರ್ಷಿಸಿದವು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು. ಪೊಲೀಸ್ ಸರ್ಪಗಾವಲಿನಲ್ಲಿ ಶೋಭಾಯಾತ್ರೆ ಮುಂದುವರಿಯಿತು.
ಮಂಡ್ಯದ ಹೊಳಲು ವೃತ್ತದ ಹಳೆ ಎಂ.ಸಿ. ರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಮೆರವಣಿಗೆ ಶ್ರೀ ಕಾಳಿಕಾಂಬ ದೇವಾಲಯವನ್ನು ತಲುಪಿತು. ಮುಂದೆ ಅಲ್ಲಿಂದ ಬೆಂಗಳೂರು-ಮೈಸೂರು ಹೆದ್ದಾರಿಗೆ ಆಗಮಿಸಿ ವಿಶ್ವೇಶ್ವರಯ್ಯ ರಸ್ತೆ, ನೂರಡಿ ರಸ್ತೆ, ಆರ್.ಪಿ.ರಸ್ತೆ, ಜಯಚಾಮರಾಜೇಂದ್ರ ಒಡೆಯರ್ ವೃತ್ತಕ್ಕೆ ಆಗಮಿಸಿ ಅಂತ್ಯಗೊಂಡಿತು.ಕೇಸರಿ ಬಾವುಟ, ಬಂಟಿಂಗ್ಸ್ ನಗರಸಭೆಯಿಂದ ತೆರವು
ಶೋಭಾಯಾಯತ್ರೆ ಹಿನ್ನೆಲೆಯಲ್ಲಿ ನಗರದಲ್ಲಿ ಹೆದ್ದಾರಿಯುದ್ದಕ್ಕೂ ಅಳವಡಿಸಿದ್ದ ಕೇಸರಿ ಬಾವುಟ ಹಾಗೂ ಬಂಟಿಂಗ್ಸ್‌ಗಳನ್ನು ನಗರಸಭೆ ಸಿಬ್ಬಂದಿ ತೆರವುಗೊಳಿಸಿದರು. ಶೋಭಾಯಾತ್ರೆಗಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜಂಗಸೇನೆ ಕಾರ್ಯಕರ್ತರು ಹೆದ್ದಾರಿ ರಸ್ತೆಯುದ್ದಕ್ಕೂ, ಪ್ರಮುಖ ರಸ್ತೆಗಳಲ್ಲಿ ಕೇಸರಿ ಬಾವುಟ, ಬಂಟಿಂಗ್ಸ್‌ಗಳನ್ನು ಎಲ್ಲೆಡೆ ಅಳವಡಿಸಿ ಸಂಪೂರ್ಣ ಕೇಸರಿಮಯಗೊಳಿಸಿದ್ದರು.
ಮಂಡ್ಯದಲ್ಲಿ ವಿಶ್ವ ಹಿಂದೂ ಪರಿಷತ್ತು ಮತ್ತು ಭಜರಂಗದಳದಿಂದ ನಡೆದ ಶೋಭಾಯಾತ್ರೆಯ ದೃಶ್ಯ.2ಕೆಎಂಎನ್‌ಡಿ-8