
ಚನ್ನರಾಯಪಟ್ಟಣ: ಬಿಜೆಪಿಯು ಮುಂದಿನ ಅವಧಿಗೆ ಅಧಿಕಾರಕ್ಕೆ ಬರಬೇಕಾದರೆ ಹೋಬಳಿ ಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ, ಅವರ ಉತ್ಸಾಹವನ್ನು ಹೆಚ್ಚಿಸಬೇಕಾಗಿದೆ ಎಂದು ತಾಲೂಕು ಬಿಜೆಪಿ ಮುಖಂಡ ಸಿ.ಆರ್.ಚಿದಾನಂದ್ ಹೇಳಿದರು.
ಕಾರ್ಯಕರ್ತರ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಎತ್ತಿ ಹಿಡಿದು ಅವುಗಳನ್ನು ಪರಿಹರಿಸಲು ಪ್ರಯತ್ನಿಸಬೇಕು. ರಕ್ತದಾನ ಶಿಬಿರ, ಸ್ವಚ್ಛತಾ ಅಭಿಯಾನ, ಶೈಕ್ಷಣಿಕ ಸಹಾಯ ಯೋಜನೆಗಳು, ಯುವ ಸಮಾವೇಶ ಮತ್ತು ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಕರಿಗೆ ಪ್ರಮುಖ ಜವಾಬ್ದಾರಿ ನೀಡಿದರೆ, ಕಾರ್ಯಕರ್ತರಿಗೆ ಪಕ್ಷದೊಂದಿಗೆ ಆತ್ಮೀಯ ಸಂಬಂಧ ಹೆಚ್ಚಾಗುತ್ತದೆ ಮತ್ತು ಅವರು ಹೆಚ್ಚು ಉತ್ಸಾಹದಿಂದ, ನಿಷ್ಠೆಯಿಂದ ಪಕ್ಷದ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು.
ತಾಲೂಕಿನ ಪ್ರತಿ ಹೋಬಳಿ ಕೇಂದ್ರಗಳಲ್ಲೂ ಜನಸಂಪರ್ಕ ಕಚೇರಿಗಳನ್ನು ತೆರೆಯಲಾಗುವುದು ಹಾಗೂ ಪ್ರತಿ ಹೋಬಳಿ ಕೇಂದ್ರಕ್ಕೂ ಒಂದೊಂದು ವಾಹನವನ್ನು ನೀಡಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ಸಿಹಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ದಮ್ಮನಿಂಗಳ ರವಿ, ಮುಖಂಡರಾದ ನಂಜುಂಡ ಮೈಮ್, ಜಗದೀಶ್ ಕೆರೆಬೀದಿ, ರೂಪೇಶ್, ಸತೀಶ್ ಗೌಡಗೆರೆ, ಕಿರಣ್ ಕೊತ್ತನಘಟ್ಟ, ಶಾಂತಕುಮಾರ್ ಮಡಬ, ವರದರಾಜು ಮಂಜುನಾಥ್ ಜಿನ್ನಾಥಪುರ, ಗೋಪಾಲ್ ಜಿನ್ನೇಹಳ್ಳಿ, ಮಂಜು ಗುರಿಗಾರನಹಳ್ಳಿ, ಜಯಕುಮಾರ್, ಸಂತೋಷ, ಪೊಲೀಸ್ ರಂಗೇಗೌಡ ಮುಂತಾದವರಿದ್ದರು.