ಕ್ರಿಸ್‌ಮಸ್: ಗಣ್ಯರಿಂದ ಶುಭಾಶಯ, ಚರ್ಚ್‌ಗಳಿಗೆ ಭೇಟಿ

KannadaprabhaNewsNetwork | Published : Dec 26, 2023 1:32 AM

ಸಾರಾಂಶ

ಕ್ರಿಸ್ ಹಬ್ಬದ ಹಿನ್ನೆಲೆ ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ, ಕೆಪಿಸಿಸಿ ಕಾಮಿ೯ಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ.ಸಿ. ಕಿರಣ್ , ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು,ರಮೇಶ್, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕ್ರೈಸ್ತ ಮುಖಂಡ, ನಗರಸಭೆ ಮಾಜಿ ಅದ್ಯಕ್ಷರೂ ಆದ ಸೆಲ್ವರಾಜು ಸೇರಿದಂತೆ ಹಲವು ಗಣ್ಯರು ಹಲವು ಚಚ್೯ಗಳಿಗೆ ಬೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು

ಸೋದರತ್ವದ ಸಂಕೇತ ಎಂದ ಶಾಸಕ ಕೃಷ್ಣಮೂರ್ತಿ । ಕೇಕ್ ನೀಡಿ ಶುಭಕೋರಿದ ಜಿ.ಸಿ. ಕಿರಣ್ । ಕ್ರೈಸ್ತ ಬಾಂಧವರಿಗೆ ಸಿಹಿ ತಿನ್ನಿಸಿ ಸಂಭ್ರಮಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕ್ರಿಸ್ ಹಬ್ಬದ ಹಿನ್ನೆಲೆ ವಿವಿಧ ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ, ಕೆಪಿಸಿಸಿ ಕಾಮಿ೯ಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ.ಸಿ. ಕಿರಣ್ , ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು,ರಮೇಶ್, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕ್ರೈಸ್ತ ಮುಖಂಡ, ನಗರಸಭೆ ಮಾಜಿ ಅದ್ಯಕ್ಷರೂ ಆದ ಸೆಲ್ವರಾಜು ಸೇರಿದಂತೆ ಹಲವು ಗಣ್ಯರು ಹಲವು ಚಚ್೯ಗಳಿಗೆ ಬೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು.

ಶಾಸಕ ಎ.ಆರ್. ಕೖಷ್ಣಮೂರ್ತಿ ಅವರು ಕ್ರೈಸ್ತ ಬಾಂಧವರು, ಫಾದರ್, ಪಾದ್ರಿಗಳಿಂದ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 1 ಲಕ್ಷಕ್ಕೂ ಅಧಿಕ ಮತನೀಡಿ 58 ಸಾವಿರ ಮತಗಳ ಅಂತರದಿಂದ ಗೆಲ್ಲಲು ಕ್ರೈಸ್ತ ಬಾಂಧವರ ಆಶೀರ್ವಾದವೂ ಪ್ರಮುಖ ಕಾರಣ. ಕ್ರಿಸ್‌ಮಸ್ ಭಾವೈಕ್ಯತೆ ಮತ್ತು ಸಹೋದರತ್ವ ಬಿಂಬಿಸುವ ಹಬ್ಬವಾಗಿದೆ ಎಂದು ಹೇಳಿದರು.

ಇದೇ ವೇಳೆ ಜಿ.ಸಿ. ಕಿರಣ್ ಹಲವು ಚರ್ಚ್‌ಗಳಿಗೆ ಭೇಟಿ ನೀಡಿ ಕೇಕ್ ವಿತರಿಸಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಮಾತನಾಡಿ, ‘ನಾನು ಕ್ರೈಸ್ತ ಶಾಲೆಯಲ್ಲಿ ಅಧ್ಯಯನ ಮಾಡಿದ್ದು, ಕ್ರೈಸ್ತ ಮಿಷನರಿಗಳು ಮೌಲ್ಯಯುತ ಶಿಕ್ಷಣ ನೀಡುವಲ್ಲಿ, ಸೇವಾಮುಖಿ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿವೆ. ಹಲವು ಚರ್ಚ್‌ಗಳಿಗೆ ನನ್ನ ಕೈಲಾದ ಕೊಡುಗೆ ನೀಡುತ್ತೇನೆ. ಸಮಾಜದ ಬಂಧುಗಳಿಗೆ ದೊರಕಬೇಕಾದ ಸವಲತ್ತು ವಿತರಣೆಯಲ್ಲೂ ಶ್ರಮಿಸುವೆ. ನಾನು ನಾಯಕನಲ್ಲ, ಸೇವಕನಂತೆ ನಿಮ್ಮ ಸೇವೆಗೆ ಮುಂದಾಗುವೆ’ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಾಘವೇಂದ್ರ, ಯುವ ಮುಖಂಡ ಅಂಬಾದಾಸ್, ರಮೇಶ್ ಇದ್ದರು.

ಚರ್ಚ್‌ಗಳಲ್ಲಿ ಕ್ರೈಸ್ತರ ಸಡಗರ: ಹುಲ್ಲಿನಿಂದ ತೊಟ್ಟಿ ನಿರ್ಮಾಣ, ವಿದ್ಯುತ್‌ ದೀಪಾಲಂಕಾರಗುಂಡ್ಲುಪೇಟೆ: ಕ್ರಿಸ್‌ಮಸ್ ಹಿನ್ನಲೆ ಪಟ್ಟಣದಲ್ಲಿ ಕ್ರೈಸ್ತರು ಚರ್ಚ್‌ಗಳಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ಏಸುಕ್ರಿಸ್ತನ ಹುಟ್ಟುವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಪಟ್ಟಣದ ಸೆಂಟ್ ಚಾವರ ಚರ್ಚ್‌ನಲ್ಲಿ ಫಾದರ್ ಸನ್ನಿ, ಫಾದರ್ ರೆಜಿಶ್ ,ಫಾದರ್ ಆಂಟನಿ, ಫಾದರ್ ಅಜು ಅವರು ಡಿ.೨೪ ರ ಭಾನುವಾರ ಮಧ್ಯರಾತ್ರಿ ಏಸು ಕ್ರಿಸ್ತನ ಜನನವನ್ನು ಕೊಂಡಾಡಿದರು.ಸೆಂಟ್ ಚಾವರ ಚರ್ಚ್ ಹಾಗೂ ಲೂರ್ದ್ ಮಾತೆ ಚರ್ಚ್‌ನ ಒಳಗಡೆ ಏಸುವಿನ ಗೋದಲಿ (ತೊಟ್ಟಿ)ಯನ್ನು ಶೃಂಗರಿಸಿದ್ದರು. ಬಾಲ ಏಸುವನ್ನೊಳಗೊಂಡ ಚಿತ್ರಗಳನ್ನು ಅಲಂಕರಿಸಿದ್ದರು.ಭತ್ತದ ಹುಲ್ಲಿನಿಂದ ಕಟ್ಟಲಾಗಿದ್ದ ಹುಲ್ಲಿನ ತೊಟ್ಟಿಯನ್ನು ವಿದ್ಯುತ್ ದೀಪಾಲಂಕಾರಗಳಿಂದ ಅಲಂಕರಿಸಿದ ಬಳಿಕ ಭಾನುವಾರ ರಾತ್ರಿ ಹಾಗೂ ಭಾನುವಾರ ಬೆಳಿಗ್ಗೆ ಬಲಿ ಪೂಜೆಯ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.ಏಸುವಿನ ಆರಾಧಕರಿಗೆ ಹಾಗು ಬಂದ ಜನರಿಗೆ ಕೇಕ್‌ ನೀಡಿ ಶುಭಾಶಯವನ್ನು ಚರ್ಚ್‌ ಪಾಧರ್‌ಗಳು ವಿನಿಮಯ ಮಾಡಿಕೊಂಡರು. ಮೈಸೂರು-ಊಟಿ ರಸ್ತೆಯಲ್ಲಿರುವ ಸೆಂಟ್ ಕೂರಿಯಾ ಕೋರ್ಸ್ ಏಲಿಯಾಸ್ ಚಾವರ ಚರ್ಚ್‌ನಲ್ಲೂ ಕ್ರಿಸ್‌ಮಸ್ ಅಂಗವಾಗಿ ಮಿನುಗುವ ನಕ್ಷತ್ರಗಳು ನೋಡುಗರ ಗಮನ ಸೆಳೆಯಿತು.ಕ್ರಿಸ್‌ಮಸ್ ಅಂಗವಾಗಿ ಆ ಸಮುದಾಯದ ಮುಖಂಡರಾದ ಬೈಜು, ಪೌಲು, ಜಾಯ್, ಜೋನಿ, ಸಿಎಂಸಿ ಹಾಗೂ ನಿರ್ಮಲ ಕಾನ್ವೆಂಟ್ ಕನ್ಯಶ್ರೀಗಳು ಸೇರಿದಂತೆ ಫಾದರ್‌ಗಳು ತಮ್ಮೆಲ್ಲ ಸ್ನೇಹಿತರು ಹಾಗೂ ಬಂಧುಗಳಿಗೆ ಕೇಕು ಹಂಚಿದರು. ಕ್ರಿಸ್‌ಮಸ್ ಹಬ್ಬ ಸಡಗರ ಪಟ್ಟಣದಲ್ಲಿ ಚರ್ಚ್‌ಗಳಲ್ಲಿ ಕಂಡು ಬಂತು.

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ನಾನು ಕ್ಸೈಸ್ತಶಾಲೆಗಳಲ್ಲಿ ಕಲಿತೆ. ಕ್ರೈಸ್ತರ ಸೇವೆ ಶ್ಲಾಘನೀಯ. ಅವರ ಸೇವೆ ಮಾಡುವಲ್ಲಿ ನಾನು ಮುಂದಾಗುವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಶಾಸಕನಾಗಲು ಕ್ರೈಸ್ತ ಬಂಧುಗಳ ಮತವೂ ಪ್ರಮುಖ ಕಾರಣ

ಎ ಆರ್ ಕೖಷ್ಣಮೂರ್ತಿ, ಕೊಳ್ಳೇಗಾಲ ಶಾಸಕ.

ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ ಅವರು ಕ್ರಿಸ್ ಮಸ್ ಹಿನ್ನೆಲೆ ಹಲವು ಚರ್ಚ್‌ಗಳಿಗೆ ಭೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಶುಭ ಕೋರಿದರು.

ಕೊಳ್ಳೇಗಾಲ ತಾಲೂಕಿನ ಹಲವು ಚರ್ಚ್‌ಗಳಿಗೆ ರಾಜ್ಯ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಜಿ.ಸಿ. ಕಿರಣ್ ಕೇಕ್ ನೀಡಿ ಶುಭ ಕೋರಿದರು. ಘಟಕದ ಕಾರ್ಯದರ್ಶಿ ಜಿಸಿ ಕಿರಣ್ ಕೇಕ್ ನೀಡಿ ಶುಭ ಕೋರಿದರು.

Share this article