ಸ್ವಸಹಾಯ ಗುಂಪುಗಳ ವ್ಯಾಪ್ತಿಗೆ ಸೇರಲಿದ್ದಾರೆ ಗೃಹಲಕ್ಷ್ಮಿಯರು

KannadaprabhaNewsNetwork |  
Published : Jun 29, 2025, 01:35 AM ISTUpdated : Jun 29, 2025, 12:48 PM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಸ್ವ ಸಹಾಯ ಗುಂಪುಗಳ ವ್ಯಾಪ್ತಿಗೆ ತಂದು ವಿಮಾ ಯೋಜನಗಳಾದ ಪಿಎಂಜೆಜೆವೈ ( ಪಿಎಂಎಸ್ ಬಿವೈ  ಹಾಗೂ ಎಪಿವೈ   ಅಡಿಯಲ್ಲಿ ನೊಂದಣಿ ಮಾಡಿಸಲಾಗುವುದು ಎಂದು ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

 ಚಿತ್ರದುರ್ಗ :  ಗೃಹಲಕ್ಷ್ಮಿ ಯೋಜನೆಯ ಅರ್ಹ ಫಲಾನುಭವಿಗಳನ್ನು ಸ್ವ ಸಹಾಯ ಗುಂಪುಗಳ ವ್ಯಾಪ್ತಿಗೆ ತಂದು ವಿಮಾ ಯೋಜನಗಳಾದ ಪಿಎಂಜೆಜೆವೈ (ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಜೀವನ್ ಬಿಮಾ ಯೋಜನೆ) ಪಿಎಂಎಸ್ ಬಿವೈ (ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ) ಹಾಗೂ ಎಪಿವೈ (ಅಟಲ್ ಪಿಂಚಣಿ ಯೋಜನೆ) ಅಡಿಯಲ್ಲಿ ನೊಂದಣಿ ಮಾಡಿಸಲಾಗುವುದು ಎಂದು ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಆಯೋಜಿಸಲಾದ 2025-26ನೇ ಸಾಲಿನ ಜಿಲ್ಲಾ ಹಂತದ ಪುನರ್ ಪರಿಶೀಲನಾ ಸಮಿತಿ ಹಾಗೂ ಜಿಲ್ಲಾ ಸಲಹಾ ಸಮಿತಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸಹಾಯ ಧನ ಹಾಗೂ ಸಬ್ಸಿಡಿ ನೀಡಲಾಗುತ್ತಿದೆ. ಎನ್ಆರ್ ಎಲ್ಎಂ (ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ) ಅಡಿ ಎಸ್‌.ಎಚ್.ಜಿ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಗುಂಪುಗಳನ್ನು ಬ್ಯಾಂಕ್‌ಗಳೊಂದಿಗೆ ಜೋಡಿಸಿ, ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಮಹಿಳೆಯರ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ 184 ಬ್ಯಾಂಕ್ ಸಖಿಯರಿಗೆ ತರಬೇತಿ ನೀಡಲಾಗಿದೆ. ಸದ್ಯ 10 ಬ್ಯಾಂಕ್ ಸಖಿಯರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಮೈಕ್ರೋ ಫೈನಾನ್ಸ್‌ಗಳಲ್ಲಿ ಮಹಿಳೆಯರು ಹೆಚ್ಚಿನ ಬಡ್ಡಿಗೆ ಸಾಲ ಪಡೆಯುವ ಬದಲು, ಎಸ್‌ಎಚ್‌ಜಿ ಮೂಲಕ ಸಾಲ ಪಡೆದು ಉದ್ದಿಮೆ ನಡೆಸಿ ಆರ್ಥಿಕವಾಗಿ ಸಬಲರಾಗಲು ಅವಕಾಶವಿದೆ. ಜಿಲ್ಲೆಯಲ್ಲಿ 13 ಸಾವಿರಕ್ಕೂ ಅಧಿಕ ಎಸ್‌ಎಚ್‌ಜಿಗಳಿದ್ದು, ಕೇವಲ 144 ಗುಂಪುಗಳು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದೇ ಅನುತ್ಪಾದಕ ಎನಿಸಿವೆ. ಅನುತ್ಪಾದಕ ಎನಿಸಿದ 144 ಗುಂಪುಗಳ ಪುನಃ ಕ್ರೀಯಾಶೀಲವಾಗಿಸಿ ಬ್ಯಾಂಕುಗಳ ಸಾಲ ಮರುಪಾತಿಗೆ ಪ್ರಯತ್ನಿಸಲಾಗುವುದು ಎಂದರು.

ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಬ್ಯಾಂಕುಗಳು ಯಾವುದೇ ಕಾರಣಕ್ಕೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳ ಖಾತೆ ಜಮೆಯಾಗುವ ಹಣವನ್ನು ಸಾಲದ ಕಂತಿಗೆ ವಜಾ ಮಾಡಿಕೊಳ್ಳಬಾರದು. ಸರ್ಕಾರದ ಯೋಜನೆಗಳಿಡಿ ಸಬ್ಸಡಿಯೊಂದಿಗೆ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡಬಾರದು ಎಂದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿಎಂಎಫ್ಎಂಇ (ಪ್ರಧಾನ ಮಂತ್ರಿ ಸೂಕ್ಷ್ಮ ಆಹಾರ ಸಂಸ್ಕರಣ ಉದ್ದಿಮೆಗಳ ಔಪಚಾರಿಕರಣ) ಅಡಿ ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ 100 ಘಟಕಗಳ ಗುರಿ ನಿಗದಿ ಮಾಡಲಾಗಿದೆ. ಇದರಲ್ಲಿ 88 ಅರ್ಜಿಗಳು ಸ್ವೀಕೃತವಾಗಿವೆ. 50 ಅರ್ಜಿಗಳಿಗೆ ಬ್ಯಾಂಕು ಸಾಲ ಸೌಲಭ್ಯ ದೊರಕಿದೆ. 30 ಅರ್ಜಿಗಳು ಮಂಜೂರಾತಿ ಬ್ಯಾಂಕುಗಳಲ್ಲಿ ಬಾಕಿಯಿದೆ ಎಂದರು.

ಆರ್‌ಬಿಐ ಪ್ರಬಂಧಕ ಅರುಣ್ ಕುಮಾರ್, ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನಂತ್ ಕೆ., ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್, ವಿವಿಧ ಬ್ಯಾಂಕ್‌ ಅಧಿಕಾರಿಗಳು ಹಾಜರಿದ್ದರು.

PREV
Read more Articles on

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ