ಗೋಡಂಬಿ ಬೆಳೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಿ: ಸಚಿವ ಆರ್.ಬಿ. ತಿಮ್ಮಾಪೂರ

KannadaprabhaNewsNetwork |  
Published : Oct 20, 2025, 01:04 AM IST
ಲೋಕಾಪುರ ಸಮೀಪ ಪಾಲ್ಕಿಮಾನ್ಯ ಗ್ರಾಮದಲ್ಲಿ ಉದಪುಡಿ ಫಾರ್ಮಹೌಸನಲ್ಲಿ ಗೋಡಂಬಿ ಪ್ರಥಮ ಉತ್ಪನ್ನದ ಉದ್ಘಾಟನೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಗೋಡಂಬಿ ಪ್ರಥಮ ಉತ್ಪನ್ನದ ಬಿಡುಗಡೆಗೊಳಿಸಿದರು. ಈ ವೇಳೆ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಅಶೋಕ ಕಿವಡಿ, ಸದುಗೌಡ ಪಾಟೀಲ, ಲೋಕಣ್ಣ ಕೊಪ್ಪದ ಇನ್ನಿತರರು ಇದ್ದರು. | Kannada Prabha

ಸಾರಾಂಶ

ಲೋಕಾಪುರ ಪಟ್ಟಣ ಸಮೀಪದ ಪಾಲ್ಕಿಮಾನೆ ಗ್ರಾಮದ ಉದಪುಡಿ ಫಾರ್ಮ್ಸ್ ಗೋಡಂಬಿ ಬೆಳೆಯ ಕ್ಷೇತ್ರಕ್ಕೆ ಭೇಟಿ ಮತ್ತು ಗೋಡಂಬಿ ಪ್ರಥಮ ಉತ್ಪನ್ನವನ್ನು ಸಚಿವ ಆರ್‌.ಬಿ. ತಿಮ್ಮಾಪೂರ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ರೈತರು ವೈಜ್ಞಾನಿಕ ಪದ್ಧತಿಯಲ್ಲಿ ಗೋಡಂಬಿ ಬೆಳೆದು ಆರ್ಥಿಕ ಮಟ್ಟ ಉತ್ತಮಪಡಿಸಿಕೊಳ್ಳಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಪಟ್ಟಣ ಸಮೀಪದ ಪಾಲ್ಕಿಮಾನೆ ಗ್ರಾಮದ ಉದಪುಡಿ ಫಾರ್ಮ್ಸ್ ಗೋಡಂಬಿ ಬೆಳೆಯ ಕ್ಷೇತ್ರಕ್ಕೆ ಭೇಟಿ ಮತ್ತು ಗೋಡಂಬಿ ಪ್ರಥಮ ಉತ್ಪನ್ನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಗೋಡಂಬಿ ಒಣ ಪ್ರದೇಶಕ್ಕೆ ಸೂಕ್ತವಾದ ಬೆಳೆ. ಇದು ಯಾವುದೇ ಮಣ್ಣಿಗೆ ಹೊಂದಿಕೊಂಡು ಬೆಳೆಯಬಲ್ಲದು. ಯಾವುದೇ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ ಪಡೆದಿದೆ. ಹೆಚ್ಚು ಲಾಭ ತರುವ ಬೆಳೆಯಾಗಿರುವುದರಿಂದ ಕಬ್ಬು, ಈರುಳ್ಳಿ, ಜೋಳ, ಮಾವಿಗೆ ಪರ್ಯಾಯವಾಗಿ ಬೆಳೆಯಬಹುದಾಗಿದೆ ಎಂದು ಹೇಳಿದರು.

ದೇಶಾದ್ಯಂತ ಇದರ ಸಂಸ್ಕರಣ ಘಟಕಳಿಗೆ, ಹಣ್ಣನ್ನು ವೈನ್ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಬೀಜ ದಾಸ್ತಾನು ಮಾಡಿ ಲಾಭದಾಯಕ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ. ದೇಶ, ವಿದೇಶಗಳಲ್ಲಿ ಇದಕ್ಕೆ ಬೇಡಿಕೆ ಇದೆ. ಇದು ಪೌಷ್ಟಿಕ ಆಹಾರ, ರುಚಿಗೆ ಹೆಸರಾಗಿದೆ. ಇದನ್ನು ಬಳಸಿ ದುಬಾರಿ ಬೆಲೆಯ ತಿಂಡಿ ತಿನಿಸು ತಯಾರಿಸಲಾಗುತ್ತದೆ. ಉದಪುಡಿ ಪರಿವಾರದಿಂದ ಇಂತಹ ವೈಶಿಷ್ಯಪೂರ್ಣ ಗೋಡಂಬಿಯನ್ನು ಉತ್ತಮ ರೀತಿಯಲ್ಲಿ ಬೆಳೆದು ಇತರ ತೋಟಗಾರಿಕೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ, ಗೋಡಂಬಿ ಬೆಳೆಯ ಕೊಯ್ಲೋತ್ತರ ತಂತ್ರಜ್ಞಾನ, ಗೋಡಂಬಿ ಬೆಳೆಯ ಸಮಗ್ರ ಬೇಸಾಯಿ ತಂತ್ರಜ್ಞಾನ ಗೋಡಂಬಿ ಲಾಭದಾಯಕ ಭವಿಷ್ಯದ ಬೆಳೆ. ಗೋಡಂಬಿ ಬೆಳೆಯಲ್ಲಿ ಸಸ್ಯಾಭಿವೃದ್ಧಿ ಹಾಗೂ ಮೈದಾನ ಪ್ರದೇಶಕ್ಕೆ ಸೂಕ್ತವಾದ ತಳಿಗಳ ವಿವರಿಸಿದರು. ತೋಟವನ್ನು ಸರಿಯಾಗಿ ನೋಡಿಕೊಂಡಲ್ಲಿ ಹೆಕ್ಟೇರ್ ಗೆ ₹೪-೫ ಲಕ್ಷ ಆದಾಯ ಗಳಿಬಹುದಾಗಿದೆ. ಗೋಡಂಬಿ ಬೆಳೆ ೩ ವರ್ಷ ಪೋಷಿಸಿದರೆ ಅದು ೩೦ ವರ್ಷ ರೈತನನ್ನು ಪೋಷಿಸುತ್ತದೆ ಎಂದು ಹೇಳಿದರು.

ಶಂಕರ ತಿಮ್ಮಾಪೂರ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಎಪಿಎಂಸಿ ಅಧ್ಯಕ್ಷ ಸಂಗಪ್ಪಣ್ಣ ಇಮ್ಮನ್ನವರ, ಹಿರಿಯರಾದ ಕಲ್ಲಪ್ಪಣ್ಣ ಸಬರದ, ಎಸ್.ಎನ್‌. ಹಿರೇಮಠ, ಸದುಗೌಡ ಪಾಟೀಲ, ಲೋಕಣ್ಣ ಕೊಪ್ಪದ, ಡಾ.ಕೆ.ಎಲ್. ಉದಪುಡಿ, ಗುರುರಾಜ ಉದಪುಡಿ, ಪವನ ಉದಪುಡಿ, ಹೊಳಬಸು ದಂಡಿನ, ರಫೀಕ್‌ ಬೈರಕದಾರ, ಸದಾಶಿವ ಉದಪುಡಿ, ಬಸಪ್ರಭು ಕಾತರಕಿ, ರವಿ ಬೋಳಿಶೆಟ್ಟಿ, ಷಣ್ಮೂಖಪ್ಪ ಕೋಲ್ಹಾರ, ಕೃಷ್ಣಾ ಜಟ್ಟೆನ್ನವರ, ಸಂಗಮೇಶ ನಿಲಗುಂದ, ಮುತ್ತಪ್ಪ ಚೌಧರಿ, ರಮೇಶ ನಿಡೋಣಿ, ಪ್ರವೀಣ ಗಂಗಣ್ಣವರ, ಸಂಗಮೇಶ ಬಟಕುರ್ಕಿ, ಮಾನಿಂಗಪ್ಪ ಹುಂಡೇಕಾರ, ಸುಲ್ತಾನ ಕಲಾದಗಿ, ವೆಂಕಣ್ಣ ಅಂಕಲಗಿ, ಲಕ್ಷ್ಮಣ ಮಾಲಗಿ, ರೆಹೆಮಾನ್‌ ತೊರಗಲ್, ರನ್ನ ಪ್ರತಿಷ್ಠಾನ ಸದಸ್ಯ ಎಸ್.ಕೆ. ಹೊಸಕೊಟಿ ತೋಟಗಾರಿಕೆ ಇಲಾಖೆ ಅಧಿಕಾರಿ ಶ್ರೀನಿವಾಸ ಚಿಕ್ಕೂರ, ಮಹೇಶ ದಂಡೆನ್ನವರ ಹಾಗೂ ಉದಪುಡಿ ಪರಿವಾರದವರು ಕಾಡರಕೊಪ್ಪ, ಲೋಕಾಪುರ, ಬದಾಮಿ, ಮುಧೋಳ ತಾಲೂಕ ರೈತರು ಇದ್ದರು.

ನಮ್ಮ ತಂದೆಯವ ಕನಸಿನ ತೋಟಗಾರಿಕೆ ಹಿರಿಯರು ಇಲ್ಲಾ ಎಂಬ ಕೋರಗು ನಮ್ಮನ್ನು ಘಾಸಿಗೊಳಿಸಿದೆ. ಅವರ ಕೃಪೆಯಿಂದ ಇಂತಹ ವಿಶಿಷ್ಟ ಗೋಡಂಬಿ ತೋಟಕ್ಕೆ ಕೈಹಾಕಿದ್ದು, ಎಲ್ಲರ ಸಹಕಾರ ಮತ್ತು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

- ಶಿವಾನಂದ ಉದಪುಡಿ ಮಾಜಿ ಉಪಾಧ್ಯಕ್ಷರು ಬಿಡಿಸಿಸಿ ಬ್ಯಾಂಕ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌