ಜಿಎಸ್ಟಿ ಇಳಿಕೆಯಿಂದ ಬಡವರಿಗೆ ಹೊರೆ ಕಡಿಮೆ: ಅಂಬರೀಶ್‌ಗೌಡ

KannadaprabhaNewsNetwork |  
Published : Sep 23, 2025, 01:03 AM IST
22 | Kannada Prabha

ಸಾರಾಂಶ

ದೇವನಹಳ್ಳಿ: ಮಧ್ಯಮವರ್ಗದವರಿಗೆ ಹೊರೆಯಾಗಿದ್ದ ಜಿಎಸ್‌ಟಿಯನ್ನು ನರೇಂದ್ರ ಮೋದಿಯವರು ಶೇ.೧೮ರಿಂದ ಶೇ.೫ಕ್ಕೆ ಇಳಿಸುವ ಮೂಲಕ ಮಧ್ಯಮ ವರ್ಗದವರ ಹೊರೆ ಕಡಿಮೆ ಮಾಡಿದ್ದಾರೆ ಎಂದು ಬಿಜೆಪಿ ದೇವನಹಳ್ಳಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್‌ಗೌಡ ತಿಳಿಸಿದರು.

ದೇವನಹಳ್ಳಿ: ಮಧ್ಯಮವರ್ಗದವರಿಗೆ ಹೊರೆಯಾಗಿದ್ದ ಜಿಎಸ್‌ಟಿಯನ್ನು ನರೇಂದ್ರ ಮೋದಿಯವರು ಶೇ.೧೮ರಿಂದ ಶೇ.೫ಕ್ಕೆ ಇಳಿಸುವ ಮೂಲಕ ಮಧ್ಯಮ ವರ್ಗದವರ ಹೊರೆ ಕಡಿಮೆ ಮಾಡಿದ್ದಾರೆ ಎಂದು ಬಿಜೆಪಿ ದೇವನಹಳ್ಳಿ ಮಂಡಲ ಅಧ್ಯಕ್ಷ ಎನ್.ಎಲ್.ಅಂಬರೀಶ್‌ಗೌಡ ತಿಳಿಸಿದರು.

ಪಟ್ಟಣದ ಗಾಂಧಿಚೌಕದಲ್ಲಿ ಜಿಎಸ್‌ಟಿ ಇಳಿಕೆ ಸ್ವಾಗತಿಸಿ, ವರ್ತಕರು ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದ ಅವರು, ಮೋದಿ ಪ್ರಧಾನಿಯಾದ ಮೇಲೆ ೧೭ನೇ ಸ್ಥಾನದಲ್ಲಿದ್ದ ಭಾರತ ೪ನೇ ಸ್ಥಾನಕ್ಕೆ ಬಂದಿದೆ. ಲಕ್ಷಾಂತರ ಕಿ.ಮೀ. ಎಸ್‌ಟಿಆರ್‌ಆರ್ ರಸ್ತೆಗಳನ್ನು ನಿರ್ಮಿಸಿದ್ದಾರೆ. ಭಾರತವನ್ನು ಹೀಯಾಳಿಸುತ್ತಿದ್ದ ಅನ್ಯ ದೇಶಗಳು ಈಗ ನಮ್ಮ ದೇಶದ ಮುಂದೆ ಮಂಡಿಯೂರಿ ನಮಸ್ಕರಿಸುವ ಮಟ್ಟಕ್ಕೆ ಬಂದಿದ್ದೇವೆ. ೧೪೦ ಕೋಟಿ ಜನರ ಆಶೀರ್ವಾದದಿಂದ ಭಾರತ ದೇಶ ಸುಭೀಕ್ಷವಾಗಿದೆ ಎಂದರು.

ಬಿಜೆಪಿ ಮುಖಂಡ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ರಾಜ್ಯದಲ್ಲಿ ಜಾತಿ ಗಣತಿ ಆರ್ಥಿಕ-ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಿದೆ. ೧೪೦೦ ಜಾತಿಗಳನ್ನು ಪಟ್ಟಿಮಾಡಿ ಎಲ್ಲಾ ಜಾತಿಗಳ ಸಮೀಕ್ಷೆ ಮಾಡುತ್ತಿದ್ದಾರೆ. ಅನೇಕ ಜಾತಿಗಳ ಜನರು ಸಮೀಕ್ಷೆಗೆ ವಿರೋಧಿಸುತ್ತಿದ್ದಾರೆ. ಸದಾಶಿವ ಆಯೋಗ ವರದಿ ಎಚ್.ಎನ್.ನಾಗಮೋಹನ್ ದಾಸ್ ವರದಿ ಕೂಡ ಜಾತಿ ಸಮೀಕ್ಷೆ ಮಾಡಿ ೧೦೧ ಜಾತಿಗಳ ಒಳಮೀಸಲಾತಿ ಜಾರಿಗಾಗಿ ಸಮೀಕ್ಷೆ ಮಾಡಿದ ಸರ್ಕಾರ ಯಾವ ಆಯೋಗದ ವರದಿಯನ್ನು ಪರಿಗಣಿಸಲಿಲ್ಲ. ದಲಿತರಿಗೆ ಮೀಸಲಿಟ್ಟ ೧೫೦ ಕೋಟಿ ಹಣವನ್ನು ಸಮೀಕ್ಷೆಗೆ ಬಳಸಿ ಅವರ ವರದಿಯನ್ನು ಮೂಲೆಗುಂಪು ಮಾಡಿದೆ ಎಂದು ಆರೋಪಿಸಿದರು.

ಬಿಜೆಪಿ ಮುಖಂಡರಾದ ಆರ್.ಕೆ.ನಂಜೇಗೌಡ, ದೇಸು.ನಾಗರಾಜ್, ವಿಜಯ್‌ಕುಮಾರ್, ಪ್ರಭು, ಆನಂದ್ ಗೌಡ, ವಿಜಯಕುಮಾರ್, ನಟರಾಜ್, ಕದಿರಪ್ಪ, ವಾಲೆ ಮಂಜು, ಬಿ.ಟಿ.ಅನಿಲ್‌ಕುಮಾರ್‌ ಇತರರಿದ್ದರು.

೨೨ ದೇವನಹಳ್ಳಿ ಚಿತ್ರಸುದ್ದಿ: ೦೧

ಜಿಎಸ್ಟಿ ಇಳಿಕೆಯನ್ನು ಸ್ವಾಗತಿಸಿದ ಬಿಜೆಪಿ ಮುಖಂಡರು, ವರ್ತಕರು ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು

PREV

Recommended Stories

ಅಕ್ರಮ ಶಸ್ತ್ರಾಸ್ತ್ರ: ನಿನ್ನೆಯೂ ವಿಚಾರಣೆಗೆ ತಿಮರೋಡಿ ಗೈರು
ಸಿದ್ದು ಆಳ್ವಿಕೆ ಟಿಪ್ಪು ಆಳ್ವಿಕೆ ನಾಚಿಸುವಂತಿದೆ : ಬಿವೈವಿ