ಕನ್ನಡಪ್ರಭ ವಾರ್ತೆ ಮಂಡ್ಯ
ಜಾತಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ ಎಂಬ ಆರ್.ಅಶೋಕ್ ಹೇಳಿಕೆಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರತಿಕ್ರಿಯಿಸಿ, ನಾವು ಈಗ ನಡೆಸುತ್ತಿರುವುದು ಜಾತಿ ಗಣತಿಯಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಜಾತಿಗಣತಿಯನ್ನು ಕೇಂದ್ರ ಸರ್ಕಾರ ಮಾಡುತ್ತೆ. ನಮ್ಮ ರಾಜ್ಯಕ್ಕೆ ಸೀಮಿತವಾಗಿ ಮಾಡುತ್ತಿದ್ದೇವೆ ಎಂದರು.
ಹಿಂದುಳಿದ ವರ್ಗಗಳ ಆಯೋಗದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಬೆಂಬಲಿಗರು ಯಾರೂ ಇಲ್ಲ. ಒಕ್ಕಲಿಗ ಸಂಘಟನೆ ಒಪ್ಪುವ ಒಬ್ಬರು ಆಯೋಗದಲ್ಲಿದ್ದಾರೆ. ಎಲ್ಲರನ್ನೂ ಕ್ರೋಢೀಕರಿಸಿ ಆಯೋಗ ಮಾಡಲಾಗಿದೆ. ಅಶೋಕ್ ವಿರೋಧ ಪಕ್ಷದ ನಾಯಕರ ಸ್ಥಾನದಲ್ಲಿದ್ದುಕೊಂಡು ಇಂತಹ ಮಾತುಗಳನ್ನಾಡಲೇಬೇಕಲ್ಲವೇ. ನಾವು ಸಾರ್ವಜನಿಕರ ಪರ ಕೆಲಸ ಮಾಡುತ್ತೇವೆ ಎಂದರು.ಸ್ವಾಮೀಜಿ ಬಳಿ ಅಶೋಕ್ ಬಂದಿದ್ದಾಗ ಏಕೆ ಏನೂ ಮಾತನಾಡಲಿಲ್ಲ. ಸ್ವಾಮೀಜಿ ತೀರ್ಮಾನ ಮಾಡುವುದನ್ನು ನಾವು ಒಪ್ಪುತ್ತೇವೆ ಎಂದು ಹೇಳಿದ್ದರು. ಅಶೋಕ್ ಅಲ್ಲೊಂದು ಮಾತು, ಇಲ್ಲೊಂದು ಮಾತನಾಡುವುದೇಕೆ. ಈ ವಿಚಾರದಲ್ಲಿ ಅವರು ರಾಜಕಾರಣ ಮಾಡುತ್ತಿದ್ದಾರೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಆಯೋಗದಿಂದ ಬರುವ ವರದಿಯನ್ನು ಯಾರೇ ಅಧಿಕಾರದಲ್ಲಿರಲಿ ಪರಿಶೀಲಿಸಬೇಕು. ಏನೂ ಮಾಡಲಿಲ್ಲವೆಂದರೆ ಅವರು ಮಾಡಿದ್ದು ಅಪರಾಧ. ಇದರ ಹೊಣೆಯನ್ನು ಅವರೇ ಹೊರಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆಯೋಗ ರಚನೆಯಾಗಿತ್ತು. ಕಾಂತರಾಜು ವರದಿ ಕ್ಯಾಬಿನೆಟ್‌ಗೆ ಬಂದ ಮೇಲ ಚರ್ಚೆ ನಡೆಸಿದಾಗ ವಿರೋಧ ವ್ಯಕ್ತವಾಯಿತು. ಅದಕ್ಕೆ ಮನ್ನಣೆ ಕೊಟ್ಟು ಹೊಸದಾಗಿ ಆಯೋಗ ರಚಿಸಿ ಸಮೀಕ್ಷೆಗೆ ಚಾಲನೆ ಕೊಟ್ಟಿದ್ದೇವೆ. ಸಮೀಕ್ಷೆ ಮುಗಿಸುವುದಕ್ಕೆ ಒಂದು ಕಾಲಮಿತಿ ನಿಗದಿಪಡಿಸಿದ್ದೇವೆ. ಅವಧಿ ಮುಂದುವರೆಯುವ ಸಾಧ್ಯತೆಯೂ ಇದೆ ಎಂದು ಸುಳಿವು ನೀಡಿದರು.