ಕೆಡಿಪಿ ಸದಸ್ಯರ ಪ್ರತಿಭಟನೆಗೆ ಗ್ಯಾರಂಟಿ ಅಧ್ಯಕ್ಷರ ಬೆಂಬಲ

KannadaprabhaNewsNetwork |  
Published : Jan 31, 2025, 12:46 AM IST
30ಎಚ್ಎಸ್ಎನ್9 : ಚನ್ನರಾಯಪಟ್ಟಣದ ಕೆಡಿಪಿ ತ್ರೈಮಾಸಿಕ ಸಭೆಯನ್ನು ನಿಯಮಿತವಾಗಿ ಕರೆಯದ ತಾಲ್ಲೂಕು ಪಂಚಾಯಿತಿ ವಿರುದ್ಧ ಧರಣಿ ನಡೆಸುತ್ತಿರುವ ಕೆಡಿಪಿ ನಾಮನಿರ್ದೇಶನ ಸದಸ್ಯರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಪ್ರತಿಭಟನೆಗೆ ತಾಲೂಕು ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್. ಪಿ. ಪ್ರಕಾಶ್‌ಗೌಡ ಭೇಟಿ ನೀಡಿ ಮಾತನಾಡಿದರು. | Kannada Prabha

ಸಾರಾಂಶ

ಕೆಡಿಪಿ ತ್ರೈಮಾಸಿಕ ಸಭೆಯನ್ನು ನಿಯಮಿತವಾಗಿ ಕರೆಯದ ತಾಲೂಕು ಪಂಚಾಯಿತಿ ವಿರುದ್ಧ ಧರಣಿ ನಡೆಸುತ್ತಿರುವ ಕೆಡಿಪಿ ನಾಮನಿರ್ದೇಶಿತ ಸದಸ್ಯರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಗೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್. ಪಿ. ಪ್ರಕಾಶ್‌ಗೌಡ ಭೇಟಿ ನೀಡಿ ಬೆಂಬಲ ಸೂಚಿಸಿದರು. ಸರ್ಕಾರದ ನಾಮನಿರ್ದೇಶಿತ ಕೆಡಿಪಿ ಸದಸ್ಯರು ಸೇರಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಎಲ್.ಪಿ.ಪ್ರಕಾಶ್‌ಗೌಡರವರು ಭೇಟಿ ನೀಡಿ ಬೆಂಬಲ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕೆಡಿಪಿ ತ್ರೈಮಾಸಿಕ ಸಭೆಯನ್ನು ನಿಯಮಿತವಾಗಿ ಕರೆಯದ ತಾಲೂಕು ಪಂಚಾಯಿತಿ ವಿರುದ್ಧ ಧರಣಿ ನಡೆಸುತ್ತಿರುವ ಕೆಡಿಪಿ ನಾಮನಿರ್ದೇಶಿತ ಸದಸ್ಯರ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಗೆ ತಾಲೂಕು ಗ್ಯಾರಂಟಿ ಯೋಜನಾ ಅನುಷ್ಟಾನ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಲ್. ಪಿ. ಪ್ರಕಾಶ್‌ಗೌಡ ಭೇಟಿ ನೀಡಿ ಬೆಂಬಲ ಸೂಚಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ತಿಂಗಳ ಮೊದಲವಾರದಲ್ಲಿ ನಿಯಮಿತವಾಗಿ ನಡೆಸಬೇಕಾಗಿರುವ ತ್ರೈಮಾಸಿಕ ಕೆಡಿಪಿ ಸಭೆಯನ್ನು ಕೆಡಿಪಿ ಅಧ್ಯಕ್ಷ ಶಾಸಕ ಬಾಲಕೃಷ್ಣ ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಪಂಚಾಯಿತಿ ಇಒ ಜಿ.ಆರ್‌. ಹರೀಶ್‌ರವರು ನಡೆಸಲು ಮುಂದಾಗದ ಹಿನ್ನೆಲೆಯಲ್ಲಿ ಕಳೆದ ಸಭೆ ನಡೆದು ೪ ತಿಂಗಳಾಗಿದೆ. ಇದೀಗ ಸಭೆ ಅಯೋಜಿಸುವಂತೆ ಇದಕ್ಕಾಗಿ ದಿನಾಂಕ ನಿಗದಿಯಾಗುವವರೆಗೂ ಸರ್ಕಾರದ ನಾಮನಿರ್ದೇಶಿತ ಕೆಡಿಪಿ ಸದಸ್ಯರು ಸೇರಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ, ಹಿರಿಯ ವಕೀಲ ಎಲ್.ಪಿ.ಪ್ರಕಾಶ್‌ಗೌಡರವರು ಭೇಟಿ ನೀಡಿ ಬೆಂಬಲ ಸೂಚಿಸಿದರು. ಈ ವೇಳೆ ಮಾತನಾಡಿದ ಅವರು, ಸರ್ಕಾರದ ನಿಯಮನುಸಾರ ಕೆಡಿಪಿ ಸಭೆ ಕರೆಯುವ ಮೂಲಕ ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಈ ಬಗ್ಗೆ ಅಧಿಕಾರಿಗಳು ಮೊಂಡುತನ ಬಿಟ್ಟು ಅಭಿವೃದ್ಧಿಗೆ ಕೈಜೋಡಿಸಬೇಕು. ಕಳೆದ ಎರಡು ದಿನಗಳಿಂದ ತಾಲೂಕು ಪಂಚಾಯತಿ ಆವರಣದಲ್ಲಿ ಕೆಡಿಪಿ ಸದಸ್ಯರ ಧರಣಿ ನಿಲ್ಲಿಸುವಲ್ಲಿ ಮುಂದಾಗಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ಕೊಡುತ್ತಿದ್ದು, ಈ ಬಗ್ಗೆ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷಭೇದ ಮರೆತು ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ. ತಾಲೂಕು ಪಂಚಾಯಿತಿಯಲ್ಲಿ ಕೆಡಿಪಿ ಸದಸ್ಯರನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಆಗ್ರಹಿಸಿದರು.ಬಾಗೂರು ನವಿಲೆ ಹೋರಾಟ ಸಮಿತಿ ಅಧ್ಯಕ್ಷ ಶಂಕರಲಿಂಗೇಗೌಡ ಮತ್ತು ಕಾಂಗ್ರೆಸ್ ಮುಖಂಡ ಮಿಲ್ಟ್ರಿ ಮಂಜು ಮಾತನಾಡಿದರು. ಕೆಡಿಪಿ ಸದಸ್ಯರಾದ ಬ್ಯಾಡರಹಳ್ಳಿ ಯೋಗೀಶ್, ಮಹೇಶ್ ಕಬ್ಬಾಳು, ಗುರುಪ್ರಸಾದ್, ಸಮೀವುಲ್ಲಾ, ಮಧುಸೂಧನ್, ತೇಜಸ್‌ಗೌಡ, ಮಂಜೇಗೌಡ ಜೋಗಿಪುರ, ಮಹೇಶ್ ಗುಲಸಿಂದ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಗ್ಯಾರಂಟಿ ಯೋಜನಾ ಸಮಿತಿ ಸದಸ್ಯರು ಪುರಸಭಾ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ