ಗ್ಯಾರಂಟಿ ಯೋಜನೆ ಎಲ್ಲರಿಗೂ ತಲುಪಲಿ

KannadaprabhaNewsNetwork |  
Published : Aug 01, 2025, 12:30 AM IST
ಸಸಸಸ | Kannada Prabha

ಸಾರಾಂಶ

ಟೆಂಡರ್ ಮೊತ್ತದ ಆದೇಶ ಪ್ರಕಾರ ನಿಲ್ದಾಣದ ಶೌಚಾಲಯಕ್ಕೆ ಗ್ಯಾರಂಟಿ ಸಮಿತಿಯಿಂದ ದರಪಟ್ಟಿ ಫಲಕ ಹಾಕಲಾಗುವುದು

ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ತಾಲೂಕಿನ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ನಾಗರಾಜ ಮಡಿವಾಳರ ಹೇಳಿದರು.

ಗುರುವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಗ್ಯಾರಂಟಿ ಯೋಜನೆ ಗ್ರಾಪಂ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕಾಗಿದೆ, ಪಟ್ಟಣದ ಬಸ್ ನಿಲ್ದಾಣದ ಶೌಚಾಲಯದ ಸೇಫ್ಟಿಕ್ ಟ್ಯಾಂಕ್ ಸ್ವಚ್ಛತೆಗೊಳಿಸಲು ಕ್ರಮಕೈಗೊಳ್ಳ ಲಾಗುವುದು,

ಟೆಂಡರ್ ಮೊತ್ತದ ಆದೇಶ ಪ್ರಕಾರ ನಿಲ್ದಾಣದ ಶೌಚಾಲಯಕ್ಕೆ ಗ್ಯಾರಂಟಿ ಸಮಿತಿಯಿಂದ ದರಪಟ್ಟಿ ಫಲಕ ಹಾಕಲಾಗುವುದು, ಸಾರಿಗೆ ಸಿಬ್ಬಂದಿ ಕೊರತೆ ಸರಿಪಡಿಸಲು ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ, ಹುಬ್ಬಳ್ಳಿ ಹಾಗೂ ಹಾವೇರಿ ಕಡೆಯಿಂದ ಸಂಜೆ ಲಕ್ಷ್ಮೇಶ್ವರ ಬರಲಿಕ್ಕೆ ಬಸ್ ಕೊರತೆ ಇರುವ ದೂರ ಬಂದಿರುವುದರಿಂದ ಅದನ್ನು ಸರಿಪಡಿಸಲಾಗುವುದು, ನಿಲ್ದಾಣದಲ್ಲಿ ಆಸನದ ವ್ಯವಸ್ಥೆ, ಖಾಸಗಿ ವಾಹನದಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮರ್ಪಕವಾಗಿ ಬಸ್ ಬಿಡುವುದು, ಗ್ರಾಪಂ ಮಟ್ಟದಲ್ಲಿ ಪದವಿ ಡಿಪ್ಲೋಮಾ ವಿದ್ಯಾರ್ಥಿಗಳ ಸರ್ವೇ ಮಾಡುವ ಕೆಲಸ ಅಧಿಕಾರಿಗಳು ಮಾಡಬೇಕು. ಒಟ್ಟಾರೆ ಗ್ಯಾರಂಟಿ ಯೋಜನೆ ಸಮರ್ಪಕವಾಗಿ ಮುಟ್ಟಿಸಲು ಅಧಿಕಾರಿಗಳು ಕೆಲಸ ಮಾಡಬೇಕು ಎಂದರು.

ಈ ವೇಳೆ ಗ್ಯಾರಂಟಿ ಸಮಿತಿ ಸದಸ್ಯ ಶಿವರಾಜಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ರುವ ಹಳೆಯ ವಿದ್ಯುತ್ ತಂತಿಗಳ ಸರಿಪಡಿಸಿ ಎಂದರು.

ಪಂಚ ಗ್ಯಾರಂಟಿಯ 5ಇಲಾಖೆಯ ಅಧಿಕಾರಿಗಳಿಂದ ಇಲಾಖೆಯ ಪ್ರಗತಿ ಪರಿಶೀಲನೆ ಬಗ್ಗೆ ವಿವರಿಸಿದರು.

ತಾಪಂ ಇಓ ಧರ್ಮರ ಕೃಷ್ಣಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ಸಿಡಿಪಿಓ ಮೃತ್ಯುಂಜಯ ಗುಡ್ಡದ ಅನ್ವೇರಿ, ಡಿಪೋ ವ್ಯವಸ್ಥಾಪಕಿ ಸವಿತಾ ಬಿ ಆದಿ, ಆಹಾರ ಇಲಾಖೆ ಜಗದೀಶ ಕುರುಬರ, ಹೆಸ್ಕಾಂ ಅಧಿಕಾರಿ ಆಂಜನೇಪ್ಪ, ಯುವನಿಧಿ ಅಧಿಕಾರಿ, ಸಮಿತಿ ಸದಸ್ಯ ರಮಜಾನ ಸಾಬ್ ನದಾಫ, ಕೆ.ಎನ್.ರಿತ್ತಿ, ಕಲ್ಲಪ್ಪ ಗಂಗಣ್ಣವರ, ರಮೇಶ ಬಾರಕೇರ, ಶಶಿಕಲಾ ಬಡಿಗೇರ, ಹಸನ್ ಜಂಗ್ಲಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ