ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ

KannadaprabhaNewsNetwork |  
Published : Jun 20, 2024, 01:02 AM IST
೧೯ಕೆಜಿಎಫ್೩೭.೬ ಕೋಟಿ ರೂ.ಗಳ ಮೇಲ್ಸೇತುವೆಯ ಗುದ್ದಲಿ ಪೂಜೆ ಶಾಸಕಿ ರೂಪಕಲಾಶಶಿಧರ್ ನೇರವೇರಿಸಿದರು. | Kannada Prabha

ಸಾರಾಂಶ

ಬೇತಮಂಗಲ ಹೋಬಳಿಯ ನಲ್ಲೂರು ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಹೊಳೆಗೆ ಹಾಲಿ ಇರುವ ಸೇತುವೆಯು ತೀರಾ ಕೆಳ ಹಂತ ಮಟ್ಟದಲ್ಲಿದ್ದು, ಬೇತಮಂಗಳ ಕೆರೆಗೆ ನೀರು ಹೆಚ್ಚಾದಾಗ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಉಂಟಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಕೆಜಿಎಫ್ಬೇತಮಂಗಲ ಹೋಬಳಿಯ ಟಿ.ಗೊಲ್ಲಹಳ್ಳಿ ಗ್ರಾಪಂ ನಲ್ಲೂರು ಗ್ರಾಮದ ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಹೊಳೆಗೆ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ೭.೬ ಕೋಟಿ ರೂ.ಗಳ ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕಿ ರೂಪಕಲಾ ಶಶಿಧರ್ ಭೂಮಿ ಪೂಜೆ ನೆರವೇರಿಸಿದರು.ಮಳೆಗಾಲದಲ್ಲಿ ನಲ್ಲೂರು ಬಳಿ ಬೇತಮಂಗಲ ಕೆರೆಗೆ ನೀರು ಹರಿಯುವ ಹೊಳೆಗೆ ಹಾಲಿ ಇರುವ ಸೇತುವೆಯು ತೀರಾ ಕೆಳ ಹಂತ ಮಟ್ಟದಲ್ಲಿದ್ದು, ಬೇತಮಂಗಳ ಕೆರೆಗೆ ನೀರು ಹೆಚ್ಚಾದಾಗ ಸಾರ್ವಜನಿಕರು ಓಡಾಡಲು ತುಂಬಾ ತೊಂದರೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಸೇತವೆಯ ಎತ್ತರ ಹೆಚ್ಚು ಮಾಡಿ ಸಾರ್ವಜನಿಕರು ಮಳೆಗಾಲದಲ್ಲಿ ಸೇತುವೆಯ ಮೇಲೆ ಓಡಾಡಲು ಅನುಕೂಲವಾಗಲಿದೆ ಎಂದರು.ಸಾರ್ವಜನಿಕರಿಗೆ ಅನುಕೂಲ

ಈ ಭಾಗದ ೧೫ ಕ್ಕೂ ಹೆಚ್ಚು ಗ್ರಾಮಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೂಲಿ ಕಾರ್ಮಿಕರಿಗೆ ತೀರ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಶಾಸಕರು ಇಲ್ಲಿ ಹೊಸದಾಗಿ ಎರಡು ಸೇತುವೆ ನಿರ್ಮಾಣ ಮಾಡಲು ೭.೬ ಕೋಟಿ ಅನುದಾನ ಲೋಕೋಪಯೋಗಿ ಸಚಿವರನ್ನು ಕೋರಿ ಮಂಜೂರು ಮಾಡಿಸಿದ್ದರು.

ಇನ್ನೆರಡು ಸೇತುವೆ ಎತ್ತರಿಸಬೇಕುಹೊಳೆಯಲ್ಲಿ ನೀರು ಹರಿಯಲು ಪ್ರಾರಂಭವಾಗುವುದರೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ತಿಳಿಸಿದರು. ಪಾಪೇನಹಳ್ಳಿ ಹಾಗೂ ಮಲ್ಲಹಳ್ಳಿ ಬಳಿ ಸಹಾ ಇದೇ ರೀತಿ ಹಾಲಿ ಇರುವ ಸೇತುವೆಗಳನ್ನು ಎತ್ತರಿಸುವ ಕಾಮಗಾರಿ ಕೈಗೊಳ್ಳಬೇಕಾಗಿದ್ದು ಶೀಘ್ರವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು.ಲಕ್ಷ್ಮಿನಾರಾಯಣ, ಗ್ರಾಪಂ ಅಧ್ಯಕ್ಷೆ ವಿನು ಕಾರ್ತಿಕ್, ಸದಸ್ಯರಾದ ಸುರೇಂದ್ರ ಗೌಡ, ನಲ್ಲೂರ್ ಶಂಕರ್, ಶ್ರೀರಾಮಪ್ಪ, ಕಾಂಗ್ರೆಸ್ ಮುಖಂಡ ತಂಬಾರಹಳ್ಳಿ ಮುನೇಗೌಡ, ವಕೀಲರಾದ ಪದ್ಮನಾಭರೆಡ್ಡಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ