ಊರಿನ ಅಭಿವೃದ್ಧಿಯಲ್ಲಿ ಸ್ವಚ್ಛತಾ ಕಾರ್ಮಿಕರ ಪಾತ್ರ ಮಹತ್ತರ: ಸಚಿನ್

KannadaprabhaNewsNetwork |  
Published : Sep 25, 2026, 02:45 AM IST
ಗುಡ್ಡೆಹೊಸೂರು ಗ್ರಾಮ ಪಂಚಾಯತಿಯಿಂದ ‘ಸ್ವಚ್ಛತಾ ಹೀ ಸೇವಾ’’ ಕಾರ್ಯಕ್ರಮ: ನಿಷ್ಠಾವಂತ ಸ್ವಚ್ಛತಾ ಗಾರರಿಗೆ ಗೌರವಾರ್ಪಣೆ | Kannada Prabha

ಸಾರಾಂಶ

ಯಾವುದೇ ಗ್ರಾಮ ಪಂಚಾಯಿತಿಯು ಆರೋಗ್ಯಕರವಾಗಿ ಮತ್ತು ಮಾದರಿಯಾಗಿ ಅಭಿವೃದ್ಧಿ ಹೊಂದಲು ಅಲ್ಲಿನ ಸ್ವಚ್ಛತಾ ಗಾರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮುಂಜಾನೆಯಿಂದಲೇ ಊರನ್ನು ಸ್ವಚ್ಛವಾಗಿರಿಸುವ ಇವರ ಸೇವೆ ಸ್ಮರಣೀಯ ಎಂದು ಮೀನುಗಾರಿಕಾ ಸಹಾಯಕ ನಿರ್ದೇಶಕ ಸಚಿನ್ ಹೇಳಿದರು.

ಗುಡ್ಡೆಹೊಸೂರು: ಯಾವುದೇ ಗ್ರಾಮ ಪಂಚಾಯಿತಿಯು ಆರೋಗ್ಯಕರವಾಗಿ ಮತ್ತು ಮಾದರಿಯಾಗಿ ಅಭಿವೃದ್ಧಿ ಹೊಂದಲು ಅಲ್ಲಿನ ಸ್ವಚ್ಛತಾ ಗಾರರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಮುಂಜಾನೆಯಿಂದಲೇ ಊರನ್ನು ಸ್ವಚ್ಛವಾಗಿರಿಸುವ ಇವರ ಸೇವೆ ಸ್ಮರಣೀಯ ಎಂದು ಮೀನುಗಾರಿಕಾ ಸಹಾಯಕ ನಿರ್ದೇಶಕ ಸಚಿನ್ ಹೇಳಿದರು. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವರದರಾಜು ಮಾತನಾಡಿ, ಸ್ವಚ್ಛತೆಯು ಕೇವಲ ಸರ್ಕಾರದ ಅಥವಾ ಸ್ವಚ್ಛತಾಗಾರರ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ. ಆರ್. ಸುಮೇಶ್ ಮಾತನಾಡಿ, ಗ್ರಾಮದಲ್ಲಿ ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ಮತ್ತು ಹಸಿ ಕಸ-ಒಣ ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಸಮಂತ್ ವಂದಿಸಿದರು.

ಗ್ರಾಮದ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಸ್ವಚ್ಛತಾ ಗಾರರಾದ ವಿಜಯ್, ನಂಜುಂಡ ಹಾಗೂ ರಮೇಶ್ ಅವರನ್ನು ಗಣ್ಯರು ಸನ್ಮಾನಿಸಿದರು. ಕೌಶಿಕ್ ಅವರು ಪ್ರಾರ್ಥನಾ ಗೀತೆ ಹಾಡಿದರು.ಪಂಚಾಯಿತಿ ಡಿಇಒ ಸುಮಾ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಟರ್ ಮೆಟ್ರೋ ಯೋಜನೆಗೆ ವೇಗ: ೧೧ ನಿಲ್ದಾಣಗಳು ಅಂತಿಮ
ಕಿಲ್ಲೆ ಮೈದಾನ ಸಾರ್ವಜನಿಕ ಗಣೇಶೋತ್ಸವ ಶೋಭಾಯಾತ್ರೆ