ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಶಾಸಕರು ಗುಂಡ್ಲುಪೇಟೆಗೆ ಬಂದು ಪೋಸು ಕೊಟ್ಟು ಹೋಗಲು ಮಾತ್ರ ಸೀಮಿತರಾಗಿ ದ್ದಾರೆ: ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ. ಶಾಸಕರ ಕಚೇರಿ ಮುಚ್ಚಿರುತ್ತದೆ ಎಂದು ವಾಗ್ದಾಳಿ ನಡೆಸಿದರು.
ಎಚ್.ಎಂ.ಗಣೇಶ್ ಪ್ರಸಾದ್ ಶಾಸಕರಾಗಿ ಎರಡೂವರೆ ವರ್ಷದ ತನಕ ಕೆರೆಗಳಿಗೆ ನೀರು ತುಂಬಿಸದ ಕೀರ್ತಿ ಸಲ್ಲುತ್ತದೆ. ಕೆರೆಗಳಿಗೆ ನೀರು ತುಂಬಿಸಲು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ. ಶಾಸಕರ ಈ ನಡೆಯನ್ನು ಬಿಜೆಪಿ ಹಾಗೂ ರೈತ ಸಮೂಹ ಖಂಡಿಸುತ್ತದೆ ಎಂದು ಹೇಳಿದರು.ಕುಡಿವ ನೀರಿಗೂ ಬರ?
ಸಾವು ನೋವು?
ತಾಲೂಕಿನ ಕಲ್ಕಟ್ಟೆ ಕೆರೆ ಹಾಗೂ ನಲ್ಲೂರು ಅಮಾನಿ ಕೆರೆಗೂ ನೀರು ತುಂಬಿಸಬೇಕು. ಜೊತೆಗೆ ಬೇಗೂರು ಭಾಗದ ಕಮರಹಳ್ಳಿ ಕೆರೆಯಿಂದ ಮುಂದಿನ ಐದು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. ಇಲ್ಲದಿದ್ದರೆ ರೈತರ ಶಾಪಕ್ಕೆ ಗುರಿಯಾಗುತ್ತೀರಿ ಎಂದು ಅವರು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನ್ನೇಗಾಲಸ್ವಾಮಿ, ಮಂಡಲ ಮಾಜಿ ಅಧ್ಯಕ್ಷರಾದ ಎಲ್.ಸುರೇಶ್, ಎನ್.ಮಲ್ಲೇಶ್, ಮಂಡಲ ಉಪಾಧ್ಯಕ್ಷ ಮಾಡ್ರಹಳ್ಳಿ ನಾಗೇಂದ್ರ, ಮಂಡಲ ಪ್ರಧಾನ ಕಾರ್ಯದರ್ಶಿ ಗರಗನಹಳ್ಳಿ ಮಹೇಂದ್ರ, ಸುನೀಲ್ ಮೂಡ್ಲು, ಪುರಸಭೆ ಮಾಜಿ ಸದಸ್ಯ ಸಿದ್ದಯ್ಯ ಹಸಗೂಲಿ ಇದ್ದರು.
ಇದು ಸರೀನಾ ಶಾಸಕರೇ
ಗುಂಡ್ಲುಪೇಟೆ: ರೈತರು ಕೆರಗಳಿಗೆ ನೀರು ತುಂಬಿಸಬೇಕು ಎಂದು ಒತ್ತಾಯಿಸಿದರೆ ರೈತರನ್ನು ನಾಯಿ ಅನಿಸಿದ್ರಲ್ಲ ಇದು ಸರೀನಾ ಶಾಸಕರೇ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಪ್ರಶ್ನಿಸಿದರು.
ರೈತರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ. ನೀವು ಹೇಳಿಲ್ಲ ನಿಜ ನಿಮ್ಮ ಜೊತೆ ಇರುವಾತ ರೈತರನ್ನು ನಾಯಿಗೆ ಹೋಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರೂ ನೀವು ಏನು ಪ್ರತಿಕ್ರಿಯೆ ಕೊಟ್ಟಿಲ್ಲ. ಅಂದ್ಮೇಲೆ ನೀವು ಹೇಳಿದಂಗೆಯೇ ಆಗುತ್ತದೆ ಎಂದು ಪ್ರತಿಪಾದಿಸಿದರು.
ರೈತರು ಕಷ್ಟಪಟ್ಟು ಬೆಳೆದ ಫಸಲು ಉಳಿಸಿಕೊಳ್ಳಲು ರೋಷದಿಂದ ಮಾತನಾಡಿರಬಹುದು. ಆದರೆ ನಿಮಗೆ ಕ್ಷೇತ್ರದ ಜನರು ಆಯ್ಕೆ ಮಾಡಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಆ ಋಣಕ್ಕಾದರೂ ನೀವು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.