ಆನಂದಪುರ: ಗುರು ಎಂದರೆ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು. ಇಂತಹ ಅದ್ಭುತ ಶಕ್ತಿಯನ್ನು ಹೊಂದಿದಂತ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಆನಂದಪುರ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ರವಿಶಂಕರ್ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಎನ್. ಎಂ.ಮಂಗಳ ಮಾತನಾಡಿ, ಯುವಜನಾಂಗ ಮೊಬೈಲ್ ಅಂತರ್ಜಾಲದಿಂದ ವಿಮುಕ್ತರಾಗಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೂ ತನ್ನದೇ ಆದಂತಹ ಪ್ರತಿಭೆ ಇರುತ್ತದೆ, ಪ್ರತಿಭೆಗಳನ್ನು ರೂಪಿಸಿಕೊಳ್ಳುವುದರ ಜೊತೆಗೆ ಆರೋಗ್ಯವಂತರಾಗಿರಲು ಉತ್ತಮ ಹವ್ಯಾಸ ಬೆಳೆಸಿಕೊಂಡು ಕೊಡುಗೆ ನೀಡಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಆರ್. ಗಣೇಶ್ ಮಾತನಾಡಿ, ಸಮಯ ಯಾರನ್ನೂ ಕಾಯುವುದಿಲ್ಲ. ಹೋದ ಸಮಯ ಮತ್ತೆ ಬರುವುದಿಲ್ಲ. ವಿದ್ಯಾರ್ಥಿ ಜೀವನ ಅಮೂಲ್ಯವಾದದು ಗುರಿ ಸಾಧನೆಯನ್ನು ಮುಟ್ಟಲು ಓದಿನ ಕಡೆಗೆ ಹೆಚ್ಚಿನ ಗಮನಹರಿಸಿ ಎಂದರು. ಸಂಸ್ಥೆ ಕಾರ್ಯದರ್ಶಿ ಡಾ. ಆರ್. ಸುರೇಶ್, ಆರ್, ರಾಘವೇಂದ್ರ, ಎನ್. ಎಂ. ಗಜೇಂದ್ರ, ಮನೋಹರ್, ಆರೋಗ್ಯ ಇಲಾಖೆ ಕಾಡು ವೀರಪ್ಪ, ನಟರಾಜ್, ಪಲ್ಲವಿ ಜೋಗಿ, ಧನ್ಯ, ಕಾವೇರಿ, ದಿನೇಶ್, ಅರ್ಪಿತ ಉಪಸ್ಥಿತರಿದ್ದರು.