ಕಾಯಕವೇ ಕೈಲಾಸದಂತೆ ಬಾಳಿದ ಗುರು ಪುಟ್ಟರಾಜರು: ಕಲಾವಿದ ಬಡಿವೆಪ್ಪ ಆನವಟ್ಟಿ

KannadaprabhaNewsNetwork |  
Published : Mar 07, 2025, 12:49 AM IST
05ಎಸ್‌ವಿಆರ್‌02 | Kannada Prabha

ಸಾರಾಂಶ

ಮಾನವ ಕುಲದ ಒಳಿತಿಗಾಗಿ ನಿರಂತರವಾಗಿ ಶ್ರಮಿಸಿದ ಅನೇಕ ಸಾಧು- ಸಂತರು ಸತ್ಪುರುಷರಲ್ಲಿ, ಪುಟ್ಟರಾಜ ಕವಿ ಗವಾಯಿಗಳು ಒಬ್ಬರು.

ಸವಣೂರು: ಲೋಕ ಕಲ್ಯಾಣಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡು ಕಾಯಕವೇ ಕೈಲಾಸವೆಂದು ಅಂಧರ ಬಾಳಿಗೆ ಬೆಳಕಾದ ಗುರು ಪುಟ್ಟರಾಜರ ಜೀವನ ಸಾರ್ಥಕತೆಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಕಲಾವಿದ ಬಡಿವೆಪ್ಪ ಆನವಟ್ಟಿ ತಿಳಿಸಿದರು.ಪಟ್ಟಣದ ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾತಂಡ ಹುರಳಿಕುಪ್ಪಿ, ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆ, ಕೀರ್ತಿ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ಕನ್ನಡ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳ 111ನೇ ಜನ್ಮದಿನೋತ್ಸವದ ಅಂಗವಾಗಿ ಕವಿಗೋಷ್ಠಿ ಹಾಗೂ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾನವ ಕುಲದ ಒಳಿತಿಗಾಗಿ ನಿರಂತರವಾಗಿ ಶ್ರಮಿಸಿದ ಅನೇಕ ಸಾಧು- ಸಂತರು ಸತ್ಪುರುಷರಲ್ಲಿ, ಪುಟ್ಟರಾಜ ಕವಿ ಗವಾಯಿಗಳು ಒಬ್ಬರು. ಅವರ ಜೀವನ ಆದರ್ಶಮಯವಾದದ್ದು. ಇಂತಹ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ಕೆ ಮುಂದಾಗುವುದು ಅವಶ್ಯವಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ಮಾಲತೇಶ್ ದಾನಪ್ಪನವರ ಮಾತನಾಡಿ, ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾತಂಡ ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ಕೀರ್ತಿ ಪದವಿ ಮಹಾವಿದ್ಯಾಲಯದ ಬಾಗಿಲು ತೆರೆದಿರುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಪ್ರಕಾಶ್ ಗೌಡ ಪರಪ್ಪಗೌಡ್ರ, ಚಂದ್ರಶೇಖರ್ ಕೃಷ್ಣಣ್ಣನವರ್, ಬಸವರಾಜ್ ಪೂಜಾರ್ ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಪ್ರಥಮ ಬಹುಮಾನ ಗುರುಮಾಂತಯ್ಯ ಆರಾಧ್ಯಮಠ ₹1000, ದ್ವಿತೀಯ ಬಹುಮಾನ ಮಂಜು ಕುಲಕರ್ಣಿ ₹500 ತೃತೀಯ ಬಹುಮಾನ ಮೇಘನಾ ಟಿ.ಎಸ್. ₹300 ಕ್ರಮವಾಗಿ ಪಡೆದುಕೊಂಡರು. ಭಾಗವಹಿಸಿದ ಎಲ್ಲ 20 ಯುವಕವಿಗಳಿಗೆ ಪ್ರಶಸ್ತಿ ಪತ್ರ, ಪಾರಿತೋಷಕ ನೀಡಲಾಯಿತು. ಶ್ರೀ ವೀರಭದ್ರೇಶ್ವರ ಸಾಂಸ್ಕೃತಿಕ ಕಲಾತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ವೀರಯ್ಯ ಸಂಕಿನಮಠ, ಈರಣ್ಣ ಎಲಿಗಾರ, ಉಪನ್ಯಾಸಕರಾದ ಗೀತಾ ಕೂಡಲ, ಶಿಲ್ಪಾ ಕುನ್ನೂರ, ರಾಮನಗೌಡ ದ್ಯಾಮನಗೌಡ್ರ, ಶಬೀನಾ ಶೇಖಸನ್ನದಿ, ಅಮಿತ್ ಸರ್ವದೆ, ಸರಸ್ವತಿ ಮುಗಳಿ ಉಪಸ್ಥಿತರಿದ್ದರು. ಭಾಗ್ಯಶ್ರೀ ಹಣಗಿ ನಿರೂಪಿಸಿದರು. ಪವನ್ ಕುಮಾರ್ ಪಾಟೀಲ್ ವಂದಿಸಿದರು.ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಮುಖ್ಯ ತೀರ್ಪುಗಾರರಾಗಿ ಆಯ್ಕೆ

ಬ್ಯಾಡಗಿ: ತಾಲೂಕಿನ ಅರಬಗೊಂಡ ಗ್ರಾಮದ(ರೈಲ್ವೆ ಇಲಾಖೆ ಉದ್ಯೋಗಿ) ಶ್ರೀಕಾಂತ ಪಾಟೀಲ ಪಂಜಾಬ್‌ನ ಜಲಂಧರನಲ್ಲಿ ಮಾ. 6ರಿಂದ ಆರಂಭವಾಗಿರುವ ರಾಷ್ಟ್ರಮಟ್ಟದ ಪೊಲೀಸ್ ಕಬಡ್ಡಿ ಕ್ರೀಡಾಕೂಟಕ್ಕೆ ಮುಖ್ಯ ತೀರ್ಪುಗಾರರಾಗಿ ಆಯ್ಕೆಯಾಗಿದ್ಧಾರೆ.ಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ರಾಷ್ಟ್ರಮಟ್ಟದ ಅನುಭವಿ ತೀರ್ಪುಗಾರರಾಗಿರುವ ಶ್ರೀಕಾಂತ್ ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಪೊಲೀಸರಾಗಿ ಸೇವೆ ಸಲ್ಲಿಸುತ್ತಿದ್ದು, ಈ ಕ್ರೀಡಾಕೂಟಕ್ಕೆ ಜಿಲ್ಲೆಯಿಂದ ಇದೇ ಮೊದಲ ಬಾರಿಗೆ ಆಯ್ಕೆಯಾಗುವ ಮೂಲಕ ಜಿಲ್ಲೆಯಲ್ಲಿ ಕಬಡ್ಡಿ ಗೌರವವನ್ನು ಹೆಚ್ಚಿಸಿದ್ದಾರೆ. ಇವರನ್ನು ಬ್ಯಾಡಗಿಯ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಗಂಗಣ್ಣ ಎಲಿ, ಅಧ್ಯಕ್ಷ ಸಿ.ಜಿ. ಚಕ್ರಸಾಲಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ