ಕನ್ನಡಪ್ರಭ ವಾರ್ತೆ ದಾವಣಗೆರೆ
ಶನಿವಾರ ನಗರದ ಶಿವ ಪಾರ್ವತಿ ಬಡಾವಣೆ, ಜೆ.ಎಚ್.ಪಟೇಲ್ ಬಡಾವಣೆ ಹಾಗೂ ಬನಶಂಕರಿ ಬಡಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜನ್ಮ ದಿನಾಚರಣೆ ಅಂಗವಾಗಿ ಅರಣ್ಯ ಇಲಾಖೆಯಿಂದ ಏರ್ಪಡಿಸಲಾದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಆರೋಗ್ಯಕ್ಕೆ ಶುದ್ಧ ಗಾಳಿ ಸಿಗಬೇಕು, ಹಸಿರು ನಗರವಾಗಿಸಲು ನಗರ ವ್ಯಾಪ್ತಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲು, ಅದರಲ್ಲಿಯು ಹೆಚ್ಚು ಆಕ್ಸಿಜನ್ ಉತ್ಪಾದಿಸುವ ಗಿಡಗಳನ್ನು ಬೆಳೆಸಲಾಗುತ್ತದೆ. ಈ ಗಿಡಗಳನ್ನು ಪೋಷಿಸಲು ಸ್ಥಳೀಯ ನಿವಾಸಿಗಳು ಸಹ ಕೈಜೋಡಿಸಿ ಬೆಳೆಸಬೇಕು, ಇದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.ಈಗಾಗಲೇ ಬೇವು, ಅರಳಿ, ಹೊಂಗೆ ಸೇರಿದಂತೆ 5,400 ಗಿಡಗಳನ್ನು ನೆಡಲಾಗಿದೆ. ಮುಂದಿನ ವರ್ಷ ಮುಂಗಾರು ಹಂಗಾಮು ಆರಂಭವಾದ ತಕ್ಷಣ ಗಿಡಗಳನ್ನು ನೆಡಲು ಕ್ರಮವಹಿಸಲಾಗುತ್ತದೆ. ಶಿವಪಾರ್ವತಿ ಬಡಾವಣೆಯಲ್ಲಿ ಬೀದಿ ದೀಪ, ಒಳಚರಂಡಿ ವ್ಯವಸ್ಥೆ ಬಗ್ಗೆ ತಿಳಿಸಿದ್ದು ಪಾಲಿಕೆಯಿಂದ ಕ್ರಮ ವಹಿಸಲಾಗುತ್ತದೆ ಎಂದರು.