ಬಳ್ಳಾರಿ: ಇಲ್ಲಿನ ಬಾಲಭಾರತಿ ವಿದ್ಯಾಶಾಲೆಯ ಆವರಣದಲ್ಲಿ ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್ ವತಿಯಿಂದ ಗುರುಪೂರ್ಣಿಮೆ ಹಾಗೂ ವಿಶೇಷ ಕರಾಟೆ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ಸತ್‌ಚಿದಾನಂದ ಭಾರತಿ ಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಉತ್ತಮ ಸಂಸ್ಕಾರವಂತನಾಗಲು ಶ್ರೇಷ್ಠ ಗುರುವಿನ ಮಾರ್ಗದರ್ಶನ ಬೇಕು ಎಂದು ಹೇಳಿದರು.
ಶ್ರೀ ಪಂಚಾಕ್ಷರಿ ಮಾರ್ಷಿಯಲ್ ಆರ್ಟ್ಸ್ ಟ್ರಸ್ಟ್‌ನ ಮುಖ್ಯಸ್ಥರಾದ ಬಂಡ್ರಾಳು ಮೃತ್ಯುಂಜಯಸ್ವಾಮಿಗಳು ವಿದ್ಯಾರ್ಥಿಗಳಿಗೆ ಕರಾಟೆ, ಧ್ಯಾನ ಕಲಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯದ ಚೈತನ್ಯ ತುಂಬುತ್ತಿದ್ದಾರೆ. ಬಾಲಕಿಯರಿಗೆ ಉಚಿತವಾಗಿ ಕರಾಟೆ ಕಲಿಸಿ, ಅವರ ಆತ್ಮರಕ್ಷಣೆಯ ಜಾಗೃತಿ ಮೂಡಿಸುತ್ತಿದ್ದಾರೆ. ಈ ರೀತಿಯ ಸತ್ಕಾರ ನಿರಂತರವಾಗಿ ನಡೆಯುವಂತಾಗಬೇಕು. ಮಕ್ಕಳಲ್ಲಿ ದೇಶಪ್ರೇಮ, ನಾಡ ಪ್ರೇಮ ಮೂಡಿಸುವ ಕೆಲಸವೂ ಆಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವಿ. ದೊಡ್ಡಕೇಶವ ರೆಡ್ಡಿ ಕೊರ್ಲಗುಂದಿ ಅವರು ಕರಾಟೆ ಮತ್ತಿತರ ಆತ್ಮರಕ್ಷಣೆಯ ಕೌಶಲ್ಯಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖಂಡರಾದ ಗುರುಮೂರ್ತಿ, ಸಾಮಾಜಿಕ ಹೋರಾಟಗಾರ ಜೆ.ವಿ. ಮಂಜುನಾಥ್, ಉದ್ಯಮಿ ಕೆ. ಹನುಮನ ಗೌಡ, ತಿಪ್ಪೇಸ್ವಾಮಿ, ಕೋಳೂರು ಪಾಲಾಕ್ಷಿ ಗೌಡ, ಗಾಜುಲು ಆನಂದ, ವಿಶ್ವನಾಥ್ ಸ್ವಾಮಿ ಮತ್ತಿತರರಿದ್ದರು.
ಟ್ರಸ್ಟ್‌ನ ಅಧ್ಯಕ್ಷ ಬಂಡ್ರಾಳು ಮೃತ್ಯುಂಜಯಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.