ಕನ್ನಡಪ್ರಭ ವಾರ್ತೆ ಕಲಬುರಗಿ
ನಾಡೋಜ ಶಿವರಾಜ ವಿ. ಪಾಟೀಲರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾರ್ಗದರ್ಶಿ ನುಡಿಗಳನ್ನಾಡುವರು. ನ್ಯಾ. ಟಿ.ಎನ್. ಇನವಳ್ಳಿ ಉದ್ಘಾಟಿಸಲಿದ್ದು, ಪ್ರತಿಷ್ಠಾನದ ಅಧ್ಯಕ್ಷ ಎನ್. ಶರಣಪ್ಪ, ನಟ ರಮೇಶ್ ಅರವಿಂದ್ ಅವರು ಮೌಲಿಕ ಶಿಕ್ಷಣದಲ್ಲಿ ಶಿಕ್ಷಕರ ಪಾತ್ರ ಕುರಿತುಮಾತನಾಡುವರು.
ಎಸ್ಸೆಸೆಲ್ಸಿ ಫಲಿತಾಂಶ ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರ ಕುರಿತು ಧಾರವಾಡ ಐ.ಐ.ಟಿ. ಪ್ರಾಧ್ಯಾಪಕ ಪ್ರೊ.ಎಸ್. ಎಂ. ಶಿವಪ್ರಸಾದ, ಹ್ಯೂಮನ್ ಮೈಂಡ್ಸೆಟ್ ಖ್ಯಾತ ತರಬೇತುದಾರ ಮಹೇಶ್ ಮಸಾಳ ಉಪನ್ಯಾಸ ನೀಡುವರು. ಯಾದಗಿರಿ ಡಿಡಿಪಿಐ ಸಿ.ಎಸ್. ಮುಧೋಳ್ ಹಾಗೂ ಕಲಬುರಗಿಯ ಶಂಕ್ರಮ್ಮ ಢವಳಗಿ ಭಾಗವಹಿಸಲಿದ್ದಾರೆ.ಕಲ್ಯಾಣ ಕರ್ನಾಟಕ ಭಾಗದ ಪ್ರೌಢಶಾಲಾ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಪ್ರಗತಿ ತರಲು ಶಿಕ್ಷಕರಿಗೆ ಆಧುನಿಕ ಬೋಧನಾ ಕೌಶಲ್ಯ ಮತ್ತು ನೈತಿಕ ಶಿಕ್ಷಣ ಮಹತ್ವ ಕುರಿತು ಪ್ರೇರಣೋಪನ್ಯಾಸ ನಡೆಯಲಿದೆ. ಶಿಕ್ಷಕರ ಕೌಶಲ್ಯ ಹೆಚ್ಚಿಸುವದರ ಮೂಲಕ ಅವರನ್ನು ಗೌರವಿಸುವುದು ಈ ಸಮಾವೇಶದ ಪ್ರಮುಖ ಧ್ಯೇಯವೆಂದು ಎಂದು ಪ್ರೊ. ಚನ್ನಾರೆಡ್ಡಿ ಪಾಟೀಲ ಹೇಳಿದ್ದಾರೆ.