ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎಚ್.ಮಲ್ಲಿಕಾರ್ಜುನಯ್ಯ ಆಯ್ಕೆ

KannadaprabhaNewsNetwork |  
Published : Nov 17, 2024, 01:21 AM IST
16ಕೆಎಂಎನ್ ಡಿ16 | Kannada Prabha

ಸಾರಾಂಶ

2ನೇ ಬಾರಿಗೆ ಆಯ್ಕೆ ಮಾಡಿದ ನಿರ್ದೇಶಕರಿಗೆ ಹಾಗೂ ಸರ್ಕಾರಿ ನೌಕರರಿಗೆ ನೂತನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಅಭಿನಂದನೆ ಸಲ್ಲಿಸಿದರು. ಶಾಸಕರ ಸಹಕಾರದೊಂದಿಗೆ ಸಂಘವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷರಾಗಿ ಎಚ್.ಮಲ್ಲಿಕಾರ್ಜುನಯ್ಯ ಹಾಗೂ ರಾಜ್ಯ ಪರಿಷತ್ ಸದಸ್ಯರಾಗಿ ಬಿ.ಚಂದ್ರಶೇಖರ್ ಆಯ್ಕೆಯಾದರು.

ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಮಲ್ಲಿಕಾರ್ಜುನಯ್ಯ ಹಾಗೂ ಎಚ್.ನಾಗೇಶ್ ಮತ್ತು ರಾಜ್ಯ ಪರಿಷತ್ ಸ್ಥಾನಕ್ಕೆ ಬಿ.ಚಂದ್ರಶೇಖರ್ ಹಾಗೂ ಪುಟ್ಟಸ್ವಾಮಿಗೌಡ ಸ್ಪರ್ಧೆ ಮಾಡಿದ್ದರು.

33 ನಿರ್ದೆಶಕರ ಬಲದಲ್ಲಿ ನಡೆದ ಚುನಾವಣೆಯಲ್ಲಿ ಎಚ್.ಮಲ್ಲಿಕಾರ್ಜುನಯ್ಯ 17 ಮತ ಪಡೆದು ಅಧ್ಯಕ್ಷರಾದರು. 16 ಮತ ಪಡೆದ ಎಚ್.ನಾಗೇಶ್ ಪರಾಭವಗೊಂಡರು. ರಾಜ್ಯ ಪರಿಷತ್ ಸದಸ್ಯರಾಗಿ 17 ಮತ ಪಡೆದ ಬಿ.ಚಂದ್ರಶೇಖರ್ ಆಯ್ಕೆಯಾದರು. 16 ಮತ ಪಡೆದ ಪುಟ್ಟಸ್ವಾಮಿಗೌಡ ಸೋಲು ಕಂಡರು. ಖಜಾಂಚಿಯಾಗಿ ಶಿವಶಂಕರ್ ಅವಿರೋಧ ಆಯ್ಕೆಯಾಗಿದ್ದರು. ಒಂದು ಸ್ಥಾನ ಖಾಲಿ ಉಳಿದಿದೆ. ಚುನಾವಣಾಧಿಕಾರಿಯಾಗಿ ನಿವೃತ್ತ ಪ್ರಾಂಶುಪಾಲ ಜೆ.ಪಿ.ಪುಟ್ಟಸ್ವಾಮಿ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ, 2ನೇ ಬಾರಿಗೆ ಆಯ್ಕೆ ಮಾಡಿದ ನಿರ್ದೇಶಕರಿಗೆ ಹಾಗೂ ಸರ್ಕಾರಿ ನೌಕರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಶಾಸಕರ ಸಹಕಾರದೊಂದಿಗೆ ಸಂಘವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ನೂತನ ಅಧ್ಯಕ್ಷರು ಹಾಗೂ ರಾಜ್ಯ ಪರಿಷತ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ನ.೧೯ರಂದು ದುಂಡುಮೇಜಿನ ಸಭೆ

ಕನ್ನಡಪ್ರಭ ವಾರ್ತೆ ಮಂಡ್ಯ

ಬುದ್ಧ ಭಾರತ ಫೌಂಡೇಷನ್‌ನಿಂದ ನ.೧೯ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ವರ್ಗದ ಜನರಿಗೆ ಇರುವ ಸಮಸ್ಯೆಗಳು ಮತ್ತು ಪರಿಹಾರಗಳ ಸಂಬಂಧ ಜಿಲ್ಲಾ ಮಟ್ಟದ ಮೂಲ ಭಾರತೀಯರ ಪ್ರಥಮ ದುಂಡು ಮೇಜಿನ ಸಭೆ ನಡೆಯಲಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ವಾರಿಯರ್ಸ್‌ ಅಧ್ಯಕ್ಷ ಗಂಗರಾಜು ಹನಕೆರೆ ತಿಳಿಸಿದರು.

ಬುದ್ಧ ಸಂದೇಶ ಸಾರುವ ಹಿನ್ನೆಲೆ ಭಾರತೀಯರ ನಡೆ, ಬುದ್ಧನ ಕಡೆ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲು ಸದರಿ ಪೂರ್ವಭಾವಿ ಸಭೆಯಲ್ಲಿ ನಿರ್ಣಯ ಮಾಡಿ, ಮಂಡ್ಯ ನಗರ ಅಂಬೇಡ್ಕರ್ ಪುತ್ಥಳಿಯಿಂದ ಹನಕೆರೆವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹನಕೆರೆ ಗ್ರಾಮದ ಮುಖಂಡ ಅಭಿ ಹನಕೆರೆ ಮಾತನಾಡಿ, ಹನಕೆರೆ ಘಟನೆ ವಿಚಾರವಾಗಿ ಯಾರು ವಿಚಲಿತರಾಗಬೇಕಾದ ಅವಶ್ಯಕೆಯಿಲ್ಲ, ಹನಕೆರೆಯಲ್ಲಿ ಎಲ್ಲ ಸಮುದಾಯ ಒಟ್ಟಾಗಿದ್ದು, ಹನಕೆರೆಯ ಮೂಲಕ ದೇಶಕ್ಕೆ ಏಕತೆಯ ಶಾಂತಿ ಸಂದೇಶ ರವಾನಿಸಲಿ. ಈ ಕಾರ್ಯಕ್ಕೆ ಕಾಲಭೈರೇಶ್ವರ ದೇವಸ್ಥಾನ ಸಮಿತಿ ಪರವಾಗಿ ಬೆಂಬಲವಿದೆ, ಹನಕೆರೆ ಘಟನೆಯಿಂದ ನೋವಾಗಿದ್ದರೆ ಸಮಿತಿಯ ಪರವಾಗಿ ಕ್ಷಮೆಯಾಚನೆ ಮಾಡಿದರು.

ಗೋಷ್ಠಿಯಲ್ಲಿ ವೆಂಕಟಗಿರಿಯಯ್ಯ, ಎಚ್.ಎನ್.ನರಸಿಂಹಮೂರ್ತಿ, ಅಮ್ಜದ್ ಪಾಷ, ಜೆ.ರಾಮಯ್ಯ, ಮೋಹನ್, ದೇವಯ್ಯ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''