ಹಡಪದ ಅಪ್ಪಣ್ಣ ವಚನ ಚಳವಳಿ, ಸಾಮಾಜಿಕ ಕ್ರಾಂತಿಯ ಹರಿಕಾರರು: ವೀರಣ್ಣ ಹಡಪದ

KannadaprabhaNewsNetwork |  
Published : Jul 30, 2026, 02:30 AM IST
29ಎಂಡಿಜಿ1, ಮುಂಡರಗಿ ತಹಸೀಲ್ದಾರ ಕಛೇರಿಯ ಸಭಾ ಭವನದಲ್ಲಿ ಜರುಗಿದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣ ಸಮಾಜದ ತಾಲೂಕಾ ಅಧ್ಯಕ್ಷ ವೀರಣ್ಣ ಹಡಪದ ಮಾತನಾಡಿದರು. | Kannada Prabha

ಸಾರಾಂಶ

: ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರಾಗಿದ್ದರು. ಅನುಭವ ಮಂಟಪದಲ್ಲಿ ಅಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ತಾಲೂಕು ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ವೀರಣ್ಣ ಹಡಪದ ಹೇಳಿದರು.

ಮುಂಡರಗಿ: ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರಾಗಿದ್ದರು. ಅನುಭವ ಮಂಟಪದಲ್ಲಿ ಅಣ್ಣ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರು ಎಂದು ತಾಲೂಕು ಹಡಪದ ಅಪ್ಪಣ್ಣ ಸಮಾಜದ ತಾಲೂಕು ಅಧ್ಯಕ್ಷ ವೀರಣ್ಣ ಹಡಪದ ಹೇಳಿದರು.

ತಾಲೂಕು ಆಡಳಿತ ವತಿಯಿಂದ ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಜರುಗಿದ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಮೊಟ್ಟ ಮೊದಲಿಗೆ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಪ್ರಥಮವಾಗಿ ಮಹಿಳೆಯರಿಗೆ ಸ್ವಾತಂತ್ರ್ಯ ಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಅವರು ಅಪ್ಪಣ್ಣ ಪ್ರಿಯ ಚೆನ್ನಬಸವಣ್ಣ ಅಂಕಿತ ನಾಮದಿಂದ ಸುಮಾರು 250ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿದ್ದರು. ಬಸವಣ್ಣನವರಿಗೆ ಅಪ್ಪಣ್ಣನವರು ಪ್ರಾಣವೇ ಆಗಿದ್ದರು ಎನ್ನುವುದು ಕಲ್ಯಾಣ ಕ್ರಾಂತಿಯ ಕೊನೆಯ ದಿನಗಳನ್ನು ನೆನೆಸಿಕೊಂಡಾಗ ತಿಳಿದು ಬರುತ್ತದೆ. ಸದಾ ಕಾಯಕಕ್ಕೆ ಪ್ರಾಧ್ಯಾನ್ಯತೆ ನೀಡುತ್ತ ಬಂದಿರುವ ಹಡಪದ ಸಮಾಜ ನಿರಂತರ ಅದನ್ನು ಮುಂದುವರಿಸಿಕೊಂಡು ಹೋಗೋಣ ಎಂದರು.

ಡಾ. ಶಂಕರ ಭಾವಿಮನಿ ಮಾತನಾಡಿ, ಹಿಂದೆ ವರ್ಣಭೇದ ಪದ್ಧತಿಯಲ್ಲಿ ಬೆಳಗ್ಗೆ ಎದ್ದ ತಕ್ಷಣವೇ ಹಡಪದ ಅವರ ಮುಖವನ್ನು ನೋಡಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ, ಬಸವಣ್ಣನವರು ಹಡಪದ‌ ಅಪ್ಪಣ್ಣನವರನ್ನು ತಮ್ಮ ಕಾರ್ಯದರ್ಶಿಯನ್ನಾಗಿ ಮಾಡಿಕೊಳ್ಳುವ ಮೂಲಕ ಕಲ್ಯಾಣಕ್ಕೆ ತಮ್ಮನ್ನು ನೋಡಲು ಬರುವವರು ಮೊದಲು ಅಪ್ಪಣ್ಣನವರನ್ನು ಕಂಡು ನಂತರ ಬಸವಣ್ಣನವರನ್ನು ಭೇಟಿಯಾಗುವಂತೆ ಮಾಡುವ ಮೂಲಕ ಜನರಲ್ಲಿರುವ ಅಜ್ಞಾನ, ಮೂಢ ನಂಬಿಕೆ, ಕಂದಾಚಾರಗಳನ್ನು ಬೇರು ಸಹಿತವಾಗಿ ಕಿತ್ತೆಸೆಯಲು ಪ್ರಯತ್ನಿಸಿದರು. ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮನವರೂ ಅತ್ಯಂತ ಶ್ರೇಷ್ಠವಾದ ವಚನಕಾರರಾಗಿದ್ದರು. ಹೀಗಾಗಿ, ಪಾಲಕರು ಮಕ್ಕಳಿಗೆ ಅವರ ತತ್ವಸಿದ್ಧಾಂತಗಳನ್ನು ಕಲಿಸಬೇಕು ಎಂದರು.

ತಾಲೂಕು ದಂಡಾಧಿಕಾರಿ ಎರ್ರಿಸ್ವಾಮಿ ಪಿ.ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಹಡಪದ ಅಪ್ಪಣ್ಣನವರು ಸಮಾಜದಲ್ಲಿನ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದ್ದರು. ಬಸವಣ್ಣನವರ ಆಪ್ತ ಅನುಯಾಯಿಗಳಾಗಿ ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಮಹತ್ತರವಾದ ಕೊಡುಗೆ ನೀಡಿದ್ದರು ಎಂದರು.

ಬಸವರಾಜ ನವಲಗುಂದ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ, ಸುರೇಶ ಹಡಪದ, ದೇವರಾಜ ಹಡಪದ, ಲಕ್ಷ್ಮಣ ತಗಡಿನಮನಿ, ರಾಜಾಸಾಬ ಬೆಟಗೇರಿ, ಬಸವರಾಜ ಹಡಪದ, ಶಿವಾನಂದ ಇಟಗಿ, ಅಶ್ವಿನಿ ಗೌಡರ, ದೇವಪ್ಪ ಇಟಗಿ, ಧ್ರುವಕುಮಾರ ಹೂಗಾರ, ಚಂದ್ರಶೇಖರ ಪೂಜಾರ, ಹನಮಂತಪ್ಪ ಹಡಪದ, ಮಂಜುನಾಥ ಹಡಪದ, ಜಗದೀಶ ಹಡಪದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಹಡಪದ ಅಪ್ಪಣ್ಣ ಸಮಾಜ ಸುಧಾರಕರು: ಗುಳೇದ

ಮುಳಗುಂದ: ನಿಜ ಸುಖಿ ಹಡಪದ ಅಪ್ಪಣ್ಣನವರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಶರಣ ಚಳವಳಿಯಲ್ಲಿ ಪಾಲ್ಗೊಂಡು ಸಮಾನತೆ, ದಾಸೋಹ, ಕಾಯಕ ಮತ್ತು ಮಾನವೀಯ ಮೌಲ್ಯಗಳನ್ನ ಬಿತ್ತರಿಸಿದರು. ಕಾಯಕ, ಆತ್ಮಶುದ್ಧಿ, ಶಿವಭಕ್ತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆ ಮೌಲ್ಯಗಳನ್ನೊಳಗೊಂಡ ವಚನಗಳ ಮೂಲಕ ಸಮಾಜವನ್ನು ಸುಧಾರಿಸಿದವರು ಹಡಪದ ಅಪ್ಪಣ್ಣವರು ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹೇಳಿದರು.

ಸ್ಥಳೀಯ ಪಪಂ ಕಾರ್ಯಾಲಯದಲ್ಲಿ ಬುಧವಾರ ನಡೆದ ಶ್ರೀಹಡಪದ ಅಪ್ಪಣ್ಣನವರ ಜಯಂತಿಯಲ್ಲಿ ಮಾತನಾಡಿದರು.ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜತೆಗೆ ಇಂತಹ ಶರಣರ ಆದರ್ಶ ಮೌಲ್ಯಗಳನ್ನು ತಿಳಿಸಿಕೊಡುವುದರೊಂದಿಗೆ ಉತ್ತಮ ಸಮಾಜ ನಿರ್ಮಿಸೋಣ ಎಂದರು. ಈ ವೇಳೆ ಸಮಾಜದ ಮುಖಂಡರು, ಹಿರಿಯರು ಹಾಗೂ ಪಪಂ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರಿ ವಿಚಾರ ತಿಳಿಸುವವರಿಗೆ ಶತೃಗಳು ಸಹಜ: ರಾಘವೇಶ್ವರ ಶ್ರೀ
ಅಘನಾಶಿನಿ ಅಪ್ಪೇಮಿಡಿ ಪ್ರದೇಶಕ್ಕೆ ಜೀವವೈವಿಧ್ಯ ತಾಣದ ಮಾನ್ಯತೆ