ಹೈಯಾಳ (ಬಿ) ಜಾತ್ರೆ: ತೆಂಗಿನಕಾಯಿ ಮಾರಾಟ, ಜಾಗ ಹರಾಜು ಇಂದು

KannadaprabhaNewsNetwork |  
Published : Aug 20, 2026, 01:15 AM IST
ತಹಸೀಲ್ದಾರ ಮಂಗಳಾ. | Kannada Prabha

ಸಾರಾಂಶ

ವಡಗೇರಾ ತಾಲೂಕಿನ ಹೈಯಾಳ (ಬಿ) ಗ್ರಾಮದ ಸಗರನಾಡಿನ ಆರಾಧ್ಯ ದೈವ ಶ್ರೀ ಹೈಯಾಳಲಿಂಗೇಶ್ವರ ಜಾತ್ರೆ ಮಹೋತ್ಸವವು ಆಗಸ್ಟ್ 28 ರಿಂದ ಸೆಪ್ಟೆಂಬರ್ 1ರವರೆಗೆ ಐದು ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಜಾತ್ರೆಯಲ್ಲಿ ತೆಂಗಿನಕಾಯಿ ಮಾರಾಟ ಹಾಗೂ ಜಾಗದ ಹರಾಜು ನಡೆಸಲು ತಾಲೂಕು ಆಡಳಿತ ಮುಂದಾಗಿದೆ ಎಂದು ತಹಸೀಲ್ದಾರ್‌ ಮಂಗಳಾ ಎಂ. ತಿಳಿಸಿದ್ದಾರೆ.

ಯಾದಗಿರಿ: ವಡಗೇರಾ ತಾಲೂಕಿನ ಹೈಯಾಳ (ಬಿ) ಗ್ರಾಮದ ಸಗರನಾಡಿನ ಆರಾಧ್ಯ ದೈವ ಶ್ರೀ ಹೈಯಾಳಲಿಂಗೇಶ್ವರ ಜಾತ್ರೆ ಮಹೋತ್ಸವವು ಆಗಸ್ಟ್ 28 ರಿಂದ ಸೆಪ್ಟೆಂಬರ್ 1ರವರೆಗೆ ಐದು ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಜಾತ್ರೆಯಲ್ಲಿ ತೆಂಗಿನಕಾಯಿ ಮಾರಾಟ ಹಾಗೂ ಜಾಗದ ಹರಾಜು ನಡೆಸಲು ತಾಲೂಕು ಆಡಳಿತ ಮುಂದಾಗಿದೆ ಎಂದು ತಹಸೀಲ್ದಾರ್‌ ಮಂಗಳಾ ಎಂ. ತಿಳಿಸಿದ್ದಾರೆ.

ಈ ಕುರಿತು ತಹಸೀಲ್ದಾರ್ ಕಚೇರಿಯಿಂದ ಪ್ರಕಟಣೆ ಹೊರಡಿಸಲಾಗಿದ್ದು, ಆಗಸ್ಟ್ 20 ರಂದು ಮಧ್ಯಾಹ್ನ 12 ಗಂಟೆಗೆ ವಡಗೇರಾ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಾರ್ವಜನಿಕ ಹರಾಜು ನಡೆಯಲಿದೆ.ಹರಾಜಿನಲ್ಲಿ ಭಾಗವಹಿಸುವವರು ನಿಗದಿತ ಷರತ್ತುಗಳನ್ನು ಪಾಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹರಾಜಿನಲ್ಲಿ ಭಾಗವಹಿಸುವವರು ₹25 ಸಾವಿರ ಭದ್ರತಾ ಠೇವಣಿ ಪಾವತಿಸಬೇಕು, ಹರಾಜು ಪಡೆದವರು ಎರಡು ದಿನಗಳೊಳಗೆ ಹರಾಜು ಮೊತ್ತವನ್ನು ಪಾವತಿಸಬೇಕು, ನಿಗದಿತ ಅವಧಿಯಲ್ಲಿ ಮೊತ್ತ ಪಾವತಿಸಲು ವಿಫಲರಾದಲ್ಲಿ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಜಾಗವನ್ನು ಮರು ಹರಾಜು ಮಾಡಲಾಗುವುದು ಎಂದಿದ್ದಾರೆ. ಜಾತ್ರೆಯ ಹಿನ್ನೆಲೆಯಲ್ಲಿ ತೆಂಗಿನಕಾಯಿ ಮಾರಾಟ ಹಾಗೂ ಜಾಗದ ಹರಾಜಿನಲ್ಲಿ ಆಸಕ್ತರು ಭಾಗವಹಿಸುವಂತೆ ತಹಸೀಲ್ದಾರ್‌ ಮಂಗಳಾ ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-

19ವೈಡಿಆರ್‌8 : ತಹಸೀಲ್ದಾರ ಮಂಗಳಾ.

---000---

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಚಾರ ನಿಯಮ ಭಂಜಕರಿಗೆ ಕಾದಿದೆ ಭಾರಿ ದಂಡ!
ಫಾರ್ಮರ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ರೋಗಿಗಳಿಗೆ ವರದಾನ: ನಂಜಾವಧೂತ ಶ್ರೀ