ಒಂದುವರೆ ಲಕ್ಷ ಜನರಲ್ಲಿ ಅರ್ದಧಷ್ಟು ಜನ ಧೂಳು,ಹೊಗೆ ಬೂದಿಗೆ ಬಾಧಿತರು

KannadaprabhaNewsNetwork |  
Published : Feb 01, 2026, 02:45 AM IST
ಪೋಟೊ31.10: ಕೊಪ್ಪಳ ನಗರದ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಹತ್ತಿರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಂಟಿ ಕ್ರಿಯಾ ವೇದಿಕೆಯಿಂದ ನಡೆದ ಶತದಿನದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾಜಿ ತಾಲೂಕ ಪಂಚಾಯತಿ ಅಧ್ಯಕ್ಷ ದಾನಪ್ಪ ಕವಲೂರ ಮಾತನಾಡಿದರು. | Kannada Prabha

ಸಾರಾಂಶ

ಫೆ.7ರ ಶನಿವಾರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದ 100ನೇ ದಿನವಾಗಿದೆ

ಕೊಪ್ಪಳ:ಒಂದೂವರೆ ಲಕ್ಷ ಜನರಲ್ಲಿ ಅರ್ಧದಷ್ಟು ಜನ ಧೂಳು, ಹೊಗೆ, ಬೂದಿ ಬಾಧೆಗೆ ತುತ್ತಾಗಿದ್ದಾರೆ. 20 ಬಾಧಿತ ಹಳ್ಳಿಯ ಐವತ್ತು ಸಾವಿರ ಜನರು ಅನಾರೋಗ್ಯದ ಗಂಭೀರ ಸಮಸ್ಯೆಯಿಂದ ಸಾವಿನ ದವಡೆಗೆ ಸಿಲುಕಿದ್ದಾರೆ. ಆದ್ದರಿಂದ ಫೆ.24ಕ್ಕೆ ಕೊಪ್ಪಳ ಬಂದ್ ಮಾಡಿ ಅಂದು ನಾವು ಗಂಭೀರವಾಗಿ ಯೋಚಿಸಿ ಬೃಹತ್ ಹೋರಾಟಕ್ಕೆ ಮುಂದಾಗೋಣ ಎಂದು ಮಾಜಿ ತಾಪಂ ಅಧ್ಯಕ್ಷ ದಾನಪ್ಪ ಕವಲೂರ ಹೇಳಿದರು.

ನಗರದ ಭಾಗ್ಯನಗರ ರೈಲ್ವೆ ಬ್ರಿಡ್ಜ್ ಹತ್ತಿರದ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಹಾಗೂ ಜಂಟಿ ಕ್ರಿಯಾ ವೇದಿಕೆಯಿಂದ ನಡೆದ ಶತದಿನದ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಭೆಯಲ್ಲಿ ಪಾಲ್ಗೊಂಡ ವಿವಿಧ ಸಂಘ, ಸಂಸ್ಥೆಯ ಪ್ರಮುಖರು, ನಗರದ ಪ್ರಮುಖರು ಫೆ. 7ರಂದು ಶತದಿನದ ಹೋರಾಟ ಬೃಹತ್ ಮಟ್ಟದಲ್ಲಿ ಯಶಸ್ವಿಗೊಳಿಸಲು ಸಭೆ ಒಮ್ಮತದ ತೀರ್ಮಾನ ತೆಗೆದುಕೊಂಡಿತು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ. ಫೆ.7ರ ಶನಿವಾರ ಕಾರ್ಖಾನೆ ವಿಸ್ತರಣೆ ವಿರೋಧಿಸಿ ನಡೆದ 100ನೇ ದಿನವಾಗಿದೆ. ಅಂದು ನಾವು ಈಗಾಗಲೇ ಸಾಣೇಹಳ್ಳಿ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಸ್ವಾಮೀಜಿ, ಧಾರವಾಡ ಸಾಹಿತಿ ರಂಜಾನ್ ದರ್ಗಾ,ಅಸ್ಲಂ ದರ್ಗಾ ಮೈನಳ್ಳಿ ಸ್ವಾಮಿಗಳು ಆಗಮಿಸಿ ಬೆಂಬಲಿಸುತ್ತಾರೆ. ಅಂದು ನಗರದಲ್ಲಿ ಬೃಹತ್ ಸಮಾವೇಶ ಮತ್ತು ಮೆರವಣಿಗೆ ಮಾಡೋಣ ಎಂದರು. ಗವಿಶ್ರೀಗಳು ಈ ಹೋರಾಟದಲ್ಲಿ ಭಾಗವಹಿಸಲು ವಿನಂತಿಸಬೇಕಿದೆ ಎಂದರು.

ಹಿರೇಬಗನಾಳ ಬಾಧಿತ ರೈತ ಮಹೇಶ ವದ್ನಾಳ ಮಾತನಾಡಿ, ನಮ್ಮ ಸ್ಥಿತಿ ಸಾವು ಬದುಕುವ ಹೋರಾಟ ಆಗಿದೆ, ನಾವು ಕಿರಿಯರು ನಮ್ಮ ಹಿರಿಯರ ಮುಂದೆ ಸರಣಿಯಾಗಿ ಸಾವನ್ನಪ್ಪುವಂತಾಗಿದೆ. ಮಕ್ಕಳು ಕೂಡ ಗಂಭೀರ ಕಾಯಿಲೆಗೆ ತಾತ್ತಾಗುತ್ತಿದ್ದಾರೆ.ಯಾವ ಸಾರ್ಥಕತೆಗಾಗಿ ಬದುಕಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಈಗ ಶವಯಾತ್ರೆ ಮಾಡುವುದಾದರೆ ರೈತರದ್ದೇ ಮಾಡಿ ಅಂತ ದುಷ್ಟ ಕಾಲದಲ್ಲಿ ನಾವು ಬದುಕುತ್ತಿದ್ದೇವೆ, ನಮ್ಮ ಮನೆ ಬಾಗಿಲಿಗೆ ಸಾವು ಬಂದಾಗ ಏನು ಮಾಡಬೇಕೆಂದು ಕಣ್ಣೀರು ಸುರಿಸಿದರು.

ಸಭೆಯಲ್ಲಿ ಜಂಟಿ ಕ್ರಿಯಾ ಸಮಿತಿ ಪ್ರಮುಖರಾದ ಸಾಹಿತಿ ಎಚ್.ಎಸ್.ಪಾಟೀಲ್, ಡಿ.ಎಚ್.ಪೂಜಾರ, ಡಿ.ಎಂ.ಬಡಿಗೇರ, ಮಲ್ಲಿಕಾರ್ಜುನ ಬಿ.ಗೋನಾಳ, ಡಾ.ಮಂಜುನಾಥ ಸಜ್ಜನ್,ಮಂಜುನಾಥ ಜಿ.ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ಪೀರಾ ಹುಸೇನ್ ಹೊಸಳ್ಳಿ, ರಾಜು ಬಾಕಳೆ, ಸೌಮ್ಯ ನಾಲವಾಡ, ಮಾಲಾ ಬಡಿಗೇರ, ಸರೋಜಾ ಬಾಕಳೆ, ಶ್ವೇತಾ ಅಕ್ಕಿ, ವಿಜಯ ದೊರೆರಾಜು, ಹನುಮಂತರಾವ ವಕೀಲರು, ಬಾಳಪ್ಪ ವಕೀಲರು, ಶರಣು ಗಡ್ಡಿ, ನಟರಾಜ ಸವಡಿ, ಭೀಮಸೇನ ಕಲಕೇರಿ, ನಜೀರ್ ಸಾಬ್ ಮೂಲಿಮನಿ, ಎಂ.ಕೆ. ಸಾಹೇಬ್, ಕಾಶಪ್ಪ ಚಲುವಾದಿ, ಜ್ಯೋತಿ ಜಿ. ಕದ್ರಳ್ಳಿಮಠ ಮಾತನಾಡಿದರು.

ಸಭೆಯಲ್ಲಿ ಸಾಹಿತಿ ಎ.ಎಂ.ಮದರಿ ಕಾವ್ಯಾ ಗಡಾದ, ಸುನಂದಾ ಬಾರಕೇರ್, ಲತಾ ಉತ್ತಂಗಿಮಠ, ದ್ಯಾಮಣ್ಣ ಚಿಲವಾಡಗಿ, ರಾಜಶೇಖರ ಏಳುಬಾವಿ, ವಿದ್ಯಾ ನಾಲವಾಡ, ಶಿವಸಂಗಪ್ಪ ವಣಗೇರಿ, ಸುಜಾತಾ ಹಲಗೇರಿ, ಸಂಗಪ್ಪ ವಾರದ, ಜಿ.ಎಸ್. ಕಡೇಮನಿ, ಜಗದೀಶ ಕುಂಬಾರ, ಗಣೇಶ ವಿಶ್ವಕರ್ಮ, ಶಿವಣ್ಣ ದೇವರಮನಿ, ಗವಿಸಿದ್ದಪ್ಪ ಹಲಿಗಿ, ರಮೇಶ ಡಂಬ್ರಳ್ಳಿ, ಮಂಜು ಕೆಂಚನಗೌಡ್ರ, ಮಾರ್ಕಾಂಡೇಯ ಹಿರೇಮಠ, ರತ್ನಾಕರ್ ತಳವಾರ, ಶುಕರಾಜ ತಾಳಕೇರಿ, ಭೀಮಪ್ಪ ಹವಳಿ, ಈಶಪ್ಪ ದೊಡ್ಡಮನಿ, ಯಮನೂರಪ್ಪ ಹಳ್ಳಿಕೇರಿ, ಸದಾಶಿವ ಪಾಟೀಲ್, ಶಂಭುಲಿಂಗಪ್ಪ ಹರಗೇರಿ, ಎಸ್.ಬಿ. ರಾಜೂರು, ಸದಾಶಿವ ಪಾಟೀಲ್, ಬಿ.ಜಿ.ಕರಿಗಾರ, ನೂರಂದಪ್ಪ ಉಪ್ಪಿನ್, ಈಶ್ವರ ಕೊರ್ಲಹಳ್ಳಿ, ಜ್ಯೋತಿ ಮಟ್ಟಿ, ಜ್ಯೋತಿ ಜಿ.ಕೆ, ಉಮರ್ ಫಾರೂಕ್, ರುಕ್ಸಾನಾ ಎ.ಕೆ, ರಾಜೇಶ್ ಸಸಿಮಠ, ಮಂಗಳೇಶ ರಾಠೋಡ್, ಅನ್ನಪೂರ್ಣ ಮನ್ನಾಪೂರ, ಮೈತ್ರಾ ಜೆ, ಚಂದ್ರೇಗೌಡ ಪಾಟೀಲ್, ಹನುಮೇಶ ಕಾಲ್ಮಂಗಿ, ಗಾಳೆಪ್ಪ ಹೂವಿನಾಳ, ಸುರೇಶ್ ಪೂಜಾರ, ಪ್ರಕಾಶ ಹೊಳೆಯಪ್ಪನವರ, ಮಹಾದೇವಪ್ಪ ಮಾವಿನಮಾಡು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಳಚೆ ನೀರಲ್ಲಿ ತಟ್ಟೆ ತೊಳೆದ ಪ್ರಕರಣ; ಶಿಕ್ಷಕಿ ಅಮಾನತು
ಅಲೆಮಾರಿ ಜನಾಂಗದವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಿ: ಪಲ್ಲವಿ