ಇ-ಕೆವೈಸಿ ಜಿಲ್ಲೆಗೆ ಹಳಿಯಾಳ ತಾಲೂಕು ಪ್ರಥಮ

KannadaprabhaNewsNetwork |  
Published : Nov 20, 2025, 01:15 AM IST
18ಎಚ್.ಎಲ್.ವೈ-2: ಹಳಿಯಾಳ ತಾಲೂಕಿನ ಗ್ರಾ.ಪಂ ಗಳ ವ್ಯಾಪ್ತಿಯಲ್ಲಿ ತಾ.ಪಂ ನರೇಗಾ ಸಿಬ್ಬಂದಿಗಳು ನರೇಗಾ ಕೂಲಿಕಾರರ ಈ-ಕೆವೈಸಿ ಮಾಡುತ್ತಿರುವುದು. | Kannada Prabha

ಸಾರಾಂಶ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇ-ಕೆವೈಸಿ ಪ್ರಾರಂಭಿಸಲಾಗಿದ್ದು, ಶೇ. 93.41ರಷ್ಟು ಗುರಿ ಸಾಧಿಸುವ ಮೂಲಕ ಜಿಲ್ಲೆಯಲ್ಲಿಯೇ ಹಳಿಯಾಳ ತಾಲೂಕು ಪ್ರಥಮ ಸ್ಥಾನ ಪಡೆದಿದೆ.

ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ಶೇ. 93.41ರಷ್ಟು ಗುರಿ ಸಾಧನೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆ ಕಾಮಗಾರಿಗಳಲ್ಲಿ ಕೆಲಸ ಮಾಡುವ ಕೂಲಿಕಾರರ ಹಾಜರಾತಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಇ-ಕೆವೈಸಿ ಪ್ರಾರಂಭಿಸಲಾಗಿದ್ದು, ಶೇ. 93.41ರಷ್ಟು ಗುರಿ ಸಾಧಿಸುವ ಮೂಲಕ ಜಿಲ್ಲೆಯಲ್ಲಿಯೇ ಹಳಿಯಾಳ ತಾಲೂಕು ಪ್ರಥಮ ಸ್ಥಾನ ಪಡೆದಿದೆ.

ತಾಲೂಕಿನ 20 ಗ್ರಾಪಂಗಳಲ್ಲಿ ಒಟ್ಟು 20792ರಷ್ಟು ಸಕ್ರಿಯ ಕೂಲಿಕಾರರಲ್ಲಿ 19421 ಕೂಲಿಕಾರರು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಲ್ಲಿ ಇನ್ನೂ 1371 ಕೂಲಿಕಾರರು ಬಾಕಿಯಿದ್ದಾರೆ. ತಾಲೂಕಿನಲ್ಲಿ ಒಂದೇ ಗ್ರಾಮವನ್ನು ಹೊಂದಿರುವ ತೇರಗಾಂವ ಗ್ರಾಪಂಯು ಶೇ.100ರಷ್ಟು ಗುರಿಯನ್ನು ಸಾಧಿಸುವ ಮೂಲಕ ತಾಲೂಕಿನಲ್ಲಿಯೇ ಉತ್ತಮ ಪ್ರಗತಿ ಸಾಧಿಸಿ ಪ್ರಥಮ ಸ್ಥಾನದಲ್ಲಿದೆ.

ತಾಲೂಕಿನ ಗ್ರಾಪಂ ಹಾಗೂ ತಾಲೂಕ ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ನಿರ್ದೇಶನ ಮತ್ತು ಮುಂದಾಳತ್ವದಲ್ಲಿ ಉತ್ತಮ ಪ್ರಗತಿಯನ್ನು ಹಳಿಯಾಳ ತಾಲೂಕು ಕಂಡಿದೆ. ತಾಪಂಯ ನರೇಗಾ ವಿಭಾಗದ ಸಿಬ್ಬಂದಿ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯವು ಪ್ರಶಂಸನೀಯವಾಗಿದೆ.

ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಅಭಿಯಾನ ರೂಪದಲ್ಲಿ ಹಾಗೂ ಮನೆ ಮನೆಗೆ ತೆರಳಿ ಇ-ಕೆವೈಸಿ ಮಾಡಿದ್ದರಿಂದ 14 ಗ್ರಾಪಂಗಳಲ್ಲಿ ಶೇ.90 ಗಡಿಯಲ್ಲಿದ್ದು, ಅರ್ಲವಾಡ ಹಾಗೂ ಮುರ್ಕವಾಡ ಶೇ.97 ಸಾಧಿಸಿ ಮುಂಚೂಣಿಯಲ್ಲಿವೆ. ತಾಲೂಕಿನ 20 ಗ್ರಾಪಂಗಳಲ್ಲಿ ಒಟ್ಟು 20792ರಷ್ಟು ಸಕ್ರಿಯ ಕೂಲಿಕಾರರಲ್ಲಿ 19421 ಕೂಲಿಕಾರರ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.93.41ರಷ್ಟು ಗುರಿ ಸಾಧನೆಯಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ 100ರಷ್ಟು ಪ್ರಗತಿ ಸಾಧಿಸುವ ಯೋಜನೆ ರೂಪಿಸಲಾಗಿದೆ ಎಂದು ತಾಪಂ ಇಒ ವಿಲಾಸರಾಜ್ ಪ್ರಸನ್ನ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ