ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಈ ಕುರಿತು ಗ್ರಾಕೂಸ್ ಸಂಚಾಲಕಿ ಅಕ್ಕಮಹಾದೇವಿ ಮಾತನಾಡಿ, ಹಂಪಾಪಟ್ಟಣ ಗ್ರಾಮದ ಪಕ್ಕದಲ್ಲಿ ಇರುವ ಎಂಎಸ್‌ಐಎಲ್ ಮದ್ಯದ ಮಳಿಗೆಯನ್ನು ಕೂಡಲೇ ಸ್ಥಳಾಂತರಿಸಬೇಕು. ಗ್ರಾಮದ ಪಕ್ಕದಲ್ಲೇ ಇರುವುದರಿಂದ ಚಿಕ್ಕಮಕ್ಕಳು ಮದ್ಯವ್ಯಸನಿಗಳಾಗಿದ್ದಾರೆ. ಮದ್ಯದಂಗಡಿ ಮುಂಭಾಗದಲ್ಲಿಯೇ ಮಹಿಳೆಯರು, ಸಾರ್ವಜನಿಕರು ಓಡಾಡುವುದರಿಂದ ಮದ್ಯವ್ಯಸನಿಗಳಿಂದ ತೊಂದರೆಯುಂಟಾಗುತ್ತಿದೆ. ಮಹಿಳೆಯರಿಗೆ ನಿರಂತರವಾಗಿ ಸಮಸ್ಯೆಯಾಗುತ್ತಿರುವುದರಿಂದ ಕೂಡಲೇ ಸ್ಥಳಾಂತರಿಸಬೇಕು. ಹಂಪಾಪಟ್ಟಣ ಗ್ರಾಮವನ್ನು ಸಂಪೂರ್ಣವಾಗಿ ಮದ್ಯಮುಕ್ತವನ್ನಾಗಿಸಬೇಕು. ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮಧ್ಯಮಾರಾಟವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಅನಿತಾ, ಶಿಲ್ಪ, ಖಾಜಾಹುಸೇನ್, ಪುಷ್ಪಾವತಿ, ಮರಿಯಮ್ಮ, ಶಿವಕ್ಕ, ಕಾಳಮ್ಮ, ಗಾಳೆಮ್ಮ, ಬಂಟ್ರು ಕುಬೇರ, ಹೊನ್ನೂರಮ್ಮ, ಮಂಜಮ್ಮ, ಮಂಜುಳಾ, ಹನುಮಕ್ಕ, ಈರಮ್ಮ, ಗೂಳಿ ಕೊಟ್ರೇಶ, ಕೊಟ್ರೇಶ ಗೋಮತ, ಸಿಗೇನಹಳ್ಳಿ ಬಸವರಾಜ, ತಳವಾರ ಸೋಮು, ಹುಲುಗಪ್ಪ, ಗೌತಮ್, ತಿಪ್ಪಿಗುಂಡಿ ಮದು, ಹಂಪಿನಕಟ್ಟಿ ಪ್ರವೀಣ, ಎಚ್. ಹಾಲೇಶ್, ತೀರ್ಥಪ್ರಸಾದ್, ಎಸ್. ರಮೇಶ, ಪ್ರವೀಣಕುಮಾರ, ಪಕ್ಕೀರಪ್ಪ, ಕೆ.ಟಿ. ಮಂಜುನಾಥ, ಮಲ್ಲಿಕಾರ್ಜುನ ಇತರರಿದ್ದರು.