ಹಂಪಸಂದ್ರ ಗ್ರಾಮದಲ್ಲಿ ರಾತ್ರೊ-ರಾತ್ರಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಅಹಿತಕರ ಘಟನೆಯನ್ನು ಉದ್ದೇಶಿಸಿ ಎರಡು ಸಮುದಾಯದ ಮುಖಂಡರ ಶಾಂತಿ ಸಭೆಯನ್ನು ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಹೊಸೂರು ಹೋಬಳಿ ಹಂಪಸಂದ್ರ ಗ್ರಾಮದಲ್ಲಿ ರಾತ್ರೊ-ರಾತ್ರಿ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಮಾಡಿದ ಹಿನ್ನೆಲೆಯಲ್ಲಿ ಭಾನುವಾರ ನಡೆದ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಅಹಿತಕರ ಘಟನೆಯನ್ನು ಉದ್ದೇಶಿಸಿ ಎರಡು ಸಮುದಾಯದ ಮುಖಂಡರ ಶಾಂತಿ ಸಭೆಯನ್ನು ನಗರದ ತಾಲೂಕು ಆಡಳಿತ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.ತಾಲೂಕು ಆಡಳಿತಾಧಿಕಾರಿ ಮಹೇಶ್.ಎಸ್.ಪತ್ರಿ, ಡಿವೈಎಸ್ಪಿ ಶಿವಕುಮಾರ್ ಮತ್ತು ವೃತ್ತನೀರೀಕ್ಷಕರಾದ ಸತ್ಯನಾರಾಯಣ ಸಮ್ಮುಖದಲ್ಲಿ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಅಚಾತುರ್ಯವಾಗಿ ನಡೆದಿರುವ ಘಟನೆಯ ಬಗ್ಗೆ ನಿಖರ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ಎರಡು ಸಮುದಾಯದ ಮುಂಖಂಡರನ್ನು ಕರೆಸಿ ಸುದೀರ್ಘವಾಗಿ ೨ಗಂಟೆಗಳ ಕಾಲ ಎರಡು ಸಮುದಾಯದ ಮುಖಂಡರ ಮನವೊಲಿಸಲು ಪ್ರಯತ್ನಿಸಲಾಯಿತು. ಆದರೆ ಶಾಂತಿ ಸಭೆಯಲ್ಲಿ ಯಾವುದೇ ಫಲಕಾರಿಯಾಗಲಿಲ್ಲ.ಅತಿ ಶೀಘ್ರದಲ್ಲಿ ಎರಡು ಸಮುದಾಯದ ಪ್ರಮುಖ ಮುಖಂಡರೊಂದಿಗೆ ಸಭೆ ನಡೆಸಿ ಕಾನೂನು ಬದ್ಧವಾಗಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ವೃತ್ತನಿರೀಕ್ಷಕರಾದ ಕೆ.ಪಿ.ಸತ್ಯನಾರಾಯಣ ತಿಳಿಸಿದರು.ಮಹೇಶ್.ಎಸ್.ಪತ್ರಿ ಮಾತನಾಡಿ, ವಾಲ್ಮಿಕಿ ಅವರು ಪುರಾಣ ಪ್ರಸಿದ್ಧ ರಾಮಾಯಣ ಗ್ರಂಥವನ್ನು ರಚಿಸಿದವರು ಮತ್ತು ಸಂವಿದಾನ ಶಿಲ್ಪಿ ಡಾ.ಅಂಬೇಡ್ಕರ್ ಅವರು ರಾಮರಾಜ್ಯವನ್ನು ಚಾಲ್ತಿಗೆ ತಂದಂತಹವರು, ಎರಡು ಸಮುದಾಯದವರ ನಡುವೆ ಯಾವುದೇ ರೀತಿಯ ಘರ್ಷಣೆಯಾಗುವುದು ಬೇಡ, 2 ಸಮುದಾಯದವರು ಅಣ್ಣ-ತಮ್ಮಂದಿರಂತೆ ಇದ್ದಂತಹವರ ನಡುವೆ ಕೆಲವರು ಸಂಘರ್ಷಗಳನ್ನು ತಂದಿದ್ದಾರೆ ಎಂಬುವ ಸಲುವಾಗಿ ಶಾಂತಿಸಭೆಯನ್ನು ಆಯೋಜಿಸಲಾಗಿದೆ ಎಂದರು.ಗ್ರಾಮದಲ್ಲಿ ಅಂಬೇಡ್ಕರ್ ಭವನದ ಮುಂದೆ ರಾತ್ರೋ-ರಾತ್ರಿ ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಿರುವ ಹಿನ್ನೆಲೆಯಲ್ಲಿ 3ದಿನಗಳು ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಇದರ ಸಲುವಾಗಿ ಕೆ.ಎಸ್.ಆರ್.ಪಿ ತುಡುಕು 150ಕ್ಕೂ ಹೆಚ್ಚಿನ ಪೊಲೀಸರ ಪಡೆಗಳೂ ಗ್ರಾಮದಲ್ಲಿ ಮೊಕ್ಕಂ ಹೂಡಿದ್ದಾರೆ. ಶಾಂತಿ ಸಭೆಯಲ್ಲಿ ಭಾಗವಹಿಸಿದ ಮುಖಂಡರು ಅಸಮಾಧಾನದಿಂದ ಹಿಂತಿರುಗಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.