ಕನ್ನಡ ಪ್ರಭ ವಾರ್ತೆ ಹೊನ್ನಾಳಿ
ತಾಲೂಕಿನ ಕೋಣನತಲೆ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ಹಳೆ ಊರು ಶ್ರೀ ಅಂಜನೇಯ ಸ್ವಾಮಿ ಮತ್ತು ಶ್ರೀ ಒಳಕಲ್ಲು ಚೌಡಮ್ಮ ದೇವಿ ಪ್ರಾಣ ಪ್ರತಿಷ್ಛಾಪನೆ, ನೂತನ ದೇವಸ್ಥಾನ ಪ್ರವೇಶ, ಕಳಸಾರೋಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಆಶೀವರ್ಚನ ನೀಡಿದರು.
ತಮಗೆ ಈ ಊರಿನ ಹೆಸರು ಅಂದರೆ ಕೋಣನತಲೆ ಎಂಬ ಹೆಸರನ್ನು ಕೇಳಿ ವಿಶೇಷ ಎನಿಸಿದ್ದರು ಕೂಡ ಇದರ ತಾತ್ಪರ್ಯ ಎಂದರೆ ಬಸವಣ್ಣನವರು ಎನ್ನ ಶಿರವೇ ಕಳಸವಯ್ಯ ಎಂದು ಹೇಳಿದ್ದು, ಮನುಷ್ಯನಿಗೆ ಶಿರವೇ ಕಳಸಪ್ರಾಯ ಅತ್ಯಂತ ಪ್ರಮುಖವಾದ ಅಂಗವಾಗಿದೆ.ಮನುಷ್ಯ ತನ್ನ ತಲೆಯಲ್ಲಿ ಸದ್ವಿಚಾರಗಳನ್ನು ಮಾತ್ರ ಹೊಂದಿ ಉತ್ತಮ ಕೆಲಸಗಳನ್ನು ಮಾಡಿದರೆ ಅವರು ಸಮಾಜದಲ್ಲಿ ಎಲ್ಲರ ಹೊಗಳಿಕೆ, ಸ್ಮರಣೆಗೆ ಪಾತ್ರರಾಗುತ್ತಾರೆ ಎಂದರು.ಸಾಮಾನ್ಯವಾಗಿ ಪ್ರತಿ ಊರುಗಳಲ್ಲಿ ಶ್ರೀರಾಮನ ದೇವಸ್ಥಾನವಿರದಿದ್ದರೂ ಪ್ರತಿ ಊರಿನ ಹೊರವಲಯದಲ್ಲಿ ಶ್ರೀ ಅಂಜನೇಯ ಸ್ವಾ ಮಿ ದೇವಸ್ಥಾನ ಇದ್ದೇ ಇರುತ್ತದೆ ಇದಕ್ಕೆ ಕಾರಣ ಶ್ರೀ ಅಂಜನೇಯ ಸ್ವಾಮಿ ಹೃದಯಲ್ಲಿ ಸದಾ ಶ್ರೀರಾಮ ನೆಲೆಸಿರುವ ಕಾರಣ ಅಂಜನೇಯ ಸ್ವಾಮಿ ದೇವಸ್ಥಾನ ಇದ್ದರೆ ಶ್ರೀರಾಮ ಇದ್ದೇ ಇರುತ್ತಾನೆ ಎಂದು ಹೇಳಿದರು
ಬಯಲುಸೀಮೆ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಮಾತನಾಡಿ, ಶ್ರೀ ಅಂಜನೇಯ ಎಂದರೆ ಶಕ್ತಿ ದೇವರಾಗಿದ್ದು ಸೇವೆ, ಸ್ವಾಮಿ ನಿಷ್ಟೆಗೆ ಮತ್ತೊಂದು ಹೆಸರೇ ಆಂಜನೇಯ ಸ್ವಾಮಿ ಎಂದು ಹೇಳಿದರು.
ಆರ್.ನಾಗಪ್ಪ,ಹಳದಪ್ಪ,ಕೋಣನತಲೆ ಮಾಜಿ ಛೇರ್ಮನ್ ಎನ್.ನಾಗಪ್ಪ,ತಾ.ವಾಲ್ಮೀಕಿ ಸಮಾಜದ ಅಧ್ಯಕ್ಷ ಡಿ.ಎಸ್.ನಾಗೇಂದ್ರಪ್ಪ, ಸುಭಾಷ್, ಹಾಲಪ್ಪ, ಲೋಕಪ್ಪ, ಮಲ್ಲನಗೌಡ, ಬಿ.ಸಿ.ಹನುಮಗೌಡ ಸೇರಿದಂತೆ ಕೋಣನತಲೆ, ಅಕ್ಕಪಕ್ಕದ ಗ್ರಾಮದ ಮುಖಂಡರು ಇದ್ದರು.