ರಾಮನಗರ: ವಿಡಿಯೋ ಕಾನ್ಫರೆನ್ಸ್ ಮೂಲಕ 92 ವರ್ಷದ ವಯೋವೃದ್ಧೆಯ ಪ್ರಕರಣವೊಂದು ಸುಖಾಂತ್ಯ ಕಂಡ ಅಪರೂಪದ ಘಟನೆಗೆ ಲೋಕ ಅದಾಲತ್ ಸಾಕ್ಷಿಯಾಯಿತು.
ಖುದ್ದು ನ್ಯಾಯಾಧೀಶರೆ 92 ವಯಸ್ಸಿನ ವಯೋವೃದ್ಧೆಯ ಬಳಿ ತೆರಳಿ ರಾಮನಗರದ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣವನ್ನು ಲೋಕ್ ಅದಾಲತ್ನಲ್ಲಿ ಗುರುವಾರ ಇತ್ಯರ್ಥಗೊಳಿಸಿದರು. ಮತ್ತೊಬ್ಬ ಕಕ್ಷಿದಾರರನ್ನ ವಿಡಿಯೋ ಕಾನ್ಫರೆನ್ಸ್ (Hybrid Mode) ಮೂಲಕ ಮನವೊಲಿಸಿ ಪ್ರಕರಣ ಇತ್ಯರ್ಥ ಮಾಡಿದ ಅಪರೂಪದ ಪ್ರಸಂಗಕ್ಕೆ ಲೋಕ ಅದಾಲತ್ ಸಾಕ್ಷೀಕರಿಸಿತು.ಏನಿದು ಪ್ರಕರಣ :
ಒ.ಎಸ್ 14/2019ರ ಪ್ರಕರಣದಲ್ಲಿ ಪಿತ್ರಾರ್ಜಿತ ಆಸ್ತಿಗಾಗಿ ಪಿ.ಗಿರಿಜಾ ಎಂಬುವವರು ತಮ್ಮ ತಂದೆ ಪುಟ್ಟನಂಜಯ್ಯ ಮತ್ತು ಸಹೋದರರಾದ ಮೋಹನ್ ಕುಮಾರ್ ಮತ್ತು ಪಿ. ಶಶಿಕುಮಾರ್ ವಿರುದ್ಧ ದಾವೆ ಸಲ್ಲಿಸಿದ್ದರು. ಸದರಿ ದಾವೆಯಲ್ಲಿ ತನ್ನ ಪಿತ್ರಾರ್ಜಿತ ಆಸ್ತಿಯನ್ನು 2006ರಲ್ಲಿ ಪಿ.ಗಿರಿಜಾರವರ ಸಹಿ ಇಲ್ಲದೆ ಮಾರಾಟವಾಗಿದ್ದನ್ನು ಪ್ರಶ್ನಿಸಿ, ರಾಮನಗರ ಒಂದನೇ ಹೆಚ್ಚುವರಿ ನ್ಯಾಯಾಧೀಶರ ನ್ಯಾಯಾಲಯದಲ್ಲಿ ತನ್ನ ಕುಟುಂಬದವರನ್ನು ಮತ್ತು ಮಾರಾಟಗಾರರ ವಿರುದ್ಧ ಪಾರ್ಟಿ ಮಾಡಿ ದಾವೆ ಹೂಡಿದ್ದರು.ನ್ಯಾಯಾಲಯವು ವಾದಿಯಾದ ಪಿ.ಗಿರಿಜಾರವರು ಮತ್ತು ಎದುರುದಾರರಾದ ಅವರ ಕುಟುಂಬದವರು ಹಾಗೂ ಕ್ರಯದಾರರನ್ನು ಒಂದನೇ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶೆಯಾದ ಟಿ.ಎಂ. ನಿವೇದಿತ ಹಾಗೂ ಹಿರಿಯ ನ್ಯಾಯಾಧೀಶರಾದ ಪಿ.ಆರ್. ಸವಿತ ಅವರು ಎರಡು ಪಾರ್ಟಿಯ ವಕೀಲರ ಸಮ್ಮುಖದಲ್ಲಿ ಪಕ್ಷಗಾರರ ಮನವೊಲಿಸಿದರು. ಬಳಿಕ ಪಿ. ಗಿರಿಜಾರವರು ತಮ್ಮ ಹಿಸ್ಸೆ ಬದಲಾಗಿ ಹಣ ಪಡೆದು ಕೇಸನ್ನು ರಾಜಿ ಮಾಡಿಕೊಂಡರು.
ವಿ.ಸಿ.ಮೂಲಕ ರಾಜಿ:ವಯೋವೃದ್ಧೆಯ ಸಹೋದರರಲ್ಲಿ ಒಬ್ಬರು ಲಂಡನ್ ನಲ್ಲಿ ವಾಸವಾಗಿದ್ದರು. ಇವರನ್ನು ನ್ಯಾಯಾಧೀಶರಾದ ಟಿ.ಎಂ.ನಿವೇದಿತ ಹಾಗೂ ಪಿ.ಆರ್. ಸವಿತ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜಿ ಬಗ್ಗೆ ತಿಳಿಸಿ ಒಪ್ಪಿಗೆ ಪಡೆದುಕೊಂಡರು. ಅಲ್ಲದೇ ರಾಜಿ ಪತ್ರಕ್ಕೆ ಸಹಿ ಮಾಡಿ ಪತ್ರವನ್ನು ಇಮೇಲ್ ನಲ್ಲಿ ಕಳುಹಿಸಿಕೊಡಲು ನಿರ್ದೇಶನ ನೀಡಲಾಗಿ 6 ವರ್ಷದ ಹಳೆಯ ಹಾಗೂ 92ರ ವಯೋವೃದ್ಧೆಯ ಪ್ರಕರಣವು ಲೋಕ್ ಅದಾಲತ್ನಲ್ಲಿ ರಾಜಿಯಾಗುವ ಮುಖಾಂತರ ಸುಖಾಂತ್ಯವನ್ನು ಕಂಡಿತು.
ಈ ಸಂದರ್ಭದಲ್ಲಿ ವಾದಿಪರ ವಕೀಲ ಚಿದಾನಂದ, ಪ್ರತಿವಾದಿ ಪರ ವಕೀಲರಾದ ರಾಜೀವ್, ಎಂ.ಸಿ.ದೇವೇಂದ್ರಪ್ಪ ಮತ್ತಿತರರು ಇದ್ದರು.ಕೋಟ್ ..............
ಪಕ್ಷಗಾರರು ವಿದೇಶದಲ್ಲಿ ಅಥವಾ ಬೇರೆ ಯಾವುದೇ ರಾಜ್ಯದಲ್ಲಿ ವಾಸವಾಗಿದ್ದರೆ ಅಥವಾ ನ್ಯಾಯಾಲಯದಲ್ಲಿ ರಾಜಿ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಹಾಜರಾಗಲು ಸಾಧ್ಯವಾಗದಿದ್ದರೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಲೋಕ ಅದಾಲತ್ನಲ್ಲಿ ರಾಜಿ ಸಂಧಾನಕ್ಕೆ ಹಾಜರಾಗಬಹುದು. ಉಚಿತ ಕಾನೂನು ಮಹಿತಿಗಾಗಿ ಸಹಾಯವಾಣಿ ಸಂಖ್ಯೆ: 15100ಕ್ಕೆ ಕರೆಮಾಡಿ ಸಂಪರ್ಕಿಸುಬಹುದು.- ಪಿ.ಆರ್.ಸವಿತ, ಹಿರಿಯ ಸಿವಿಲ್ ನ್ಯಾಯಾಧೀಶರು
13ಕೆಆರ್ ಎಂಎನ್ 5.ಜೆಪಿಜಿಹಿರಿಯ ನ್ಯಾಯಾಧೀಶರಾದ ಪಿ.ಆರ್ .ಸವಿತಾ ವಯೋವೃದ್ಧೆ ಪಿ.ಗಿರಿಜಾ ಬಳಿ ತೆರಳಿರುವುದು.