ಸಂಭ್ರಮದ ರಂಜಾನ್, ಸಾಮೂಹಿಕ ಪ್ರಾರ್ಥನೆ

KannadaprabhaNewsNetwork |  
Published : Mar 22, 2026, 02:00 AM IST
ಗದಗದಲ್ಲಿ ಶನಿವಾರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮಾಜ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. | Kannada Prabha

ಸಾರಾಂಶ

ಮಕ್ಕಳು, ಯುವಕರು, ಹಿರಿಯರು ಹೊಸ ಬಟ್ಟೆ ಧರಿಸಿ ಬೆಳಗ್ಗೆ ಒಟ್ಟಾಗಿ ಈದ್ಗಾ ಮೈದಾನಕ್ಕೆ ತೆರಳಿ ಭಕ್ತಿ, ಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರಿ ಸಂಭ್ರಮದಿಂದ ಈದ್‌- ಉಲ್‌- ಫಿತರ್‌ ಆಚರಿಸಿದರು.

ಗದಗ: ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಶನಿವಾರ ಮುಸ್ಲಿಂ ಸಮಾಜದವರಿಂದ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರುವ ಮೂಲಕ ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಮಕ್ಕಳು, ಯುವಕರು, ಹಿರಿಯರು ಹೊಸ ಬಟ್ಟೆ ಧರಿಸಿ ಬೆಳಗ್ಗೆ ಒಟ್ಟಾಗಿ ಈದ್ಗಾ ಮೈದಾನಕ್ಕೆ ತೆರಳಿ ಭಕ್ತಿ, ಭಾವದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯ ಕೋರಿ ಸಂಭ್ರಮದಿಂದ ಈದ್‌- ಉಲ್‌- ಫಿತರ್‌ ಆಚರಿಸಿದರು.

ನಗರದ ಡಂಬಳ ನಾಕಾ ಹತ್ತಿರದ ಈದ್ಗಾ ಮೈದಾನದಲ್ಲಿ ಜರುಗಿದ ಸಾಮೂಹಿಕ ಪ್ರಾರ್ಥನೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಅವರು ಭಾಗವಹಿಸಿ, ಮುಸ್ಲಿಂ ಸಮಾಜದವರಿಗೆ ಹಬ್ಬದ ಶುಭಾಶಯ ಕೋರಿದರು. ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಸೇರಿದಂತೆ ಸಮಾಜದ ಹಿರಿಯರು, ಯುವಕರು ಇದ್ದರು.

ಮುಂಡರಗಿಯಲ್ಲಿ ಸಾಮೂಹಿಕ ಪ್ರಾರ್ಥನೆ

ಮುಂಡರಗಿ: ಪಟ್ಟಣದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಶನಿವಾರ ಬೆಳಗ್ಗೆ ಮುಸ್ಲಿಂ ಸಮುದಾಯದವರು ಪಟ್ಟಣದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು ರಂಜಾನ್ ಹಬ್ಬವನ್ನು ಆಚರಿಸಿದರು.

ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್ ಎ ಇಸ್ಲಾಂ ಕಮಿಟಿ ಅಧ್ಯಕ್ಷ ಮೈಬೂಬಸಾಬ್ ಹವಾಲ್ದಾರ್, ಅಲ್ಲಾಭಕ್ಷಿ ಬನ್ನಿಗೋಳ, ಎಸ್.ಡಿ. ಮಕಾಂದಾರ, ಡಿ.ಎಂ. ನಾಗರಳ್ಳಿ, ಎ.ಪಿ. ದಂಡೀನ, ಅಮೀನಸಾಬ್ ಬಿಸನಳ್ಳಿ, ಆರ್.ಎಂ. ತಪ್ಪಡಿ, ನಬೀಸಾಬ್ ಕೆಲೂರ, ರಾಜಾಭಕ್ಷಿ ಬೆಟಗೇರಿ, ಕರೀಂಸಾಬ್ ಮುಲ್ಲಾ, ಬಾಬಾಜಾನ್ ಗದಗ, ಎ.ಎಸ್. ಮಕಾಂದಾರ, ಅಲ್ಲಾವುದ್ದೀನ್ ಬನ್ನಿಗೊಳ, ಎಂ.ಜಿ. ವಡ್ಡಟ್ಟಿ, ಆರ್.ಎಂ. ಸೈದರ, ಫರೀದಸಾಬ್ ಲೈನದ್, ಅಬ್ದುಲ್ ಖುರೇಶಿ, ಅನ್ವರಬಾಷಾ ಹಣಗಿ, ಎಂ.ಬಿ. ತಾಂಬೋಟಿ, ಚಾಂದಸಾಬ್ ಭಾಗವಾನ್, ಕಬಲಾಸಾಬ್ ಆಲೂರ, ದಸಗೀರಸಾಬ್ ಹೊಸಮನಿ, ಎ.ಕೆ. ಮುಲ್ಲಾನವರ, ಡಿ.ಎಂ. ಕಾತರಕಿ, ಮೌಲಾಸಾಬ್ ಬಾಗವಾನ, ಎಂ.ಎಂ. ಸರಗಿ, ಬಾಬುಜಾನ್ ನಾಸಿಪುಡಿ, ಇಸ್ಮಾಯಿಲ್ ನಮಾಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ತಾಲೂಕು ಪಂಚಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ಮುಖಂಡರಾದ ಡಾ. ಬಿ.ಎಸ್. ಮೇಟಿ, ವಿನೋದ ವಡ್ಡರ ಸರ್ವರಿಗೂ ರಂಜಾನ ಹಬ್ಬದ ಶುಭಾಶಯ ಕೋರುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಘಟಗಿ ಬಳಿ ಟ್ಯಾಂಕರ್‌ನಿಂದ ಭಾರೀ ಪ್ರಮಾಣದಲ್ಲಿ ಗ್ಯಾಸ್‌ ಸೋರಿಕೆ
ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಸಂಕಲ್ಪ