ಬಸವಧರ್ಮದ ಮಹಾನ್ ಶರಣ ಸಮಗಾರ ಹರಳಯ್ಯ

KannadaprabhaNewsNetwork |  
Published : Apr 14, 2025, 01:22 AM IST
ಬನಹಟ್ಟಿಯಲ್ಲಿ ಜರುಗಿದ ಶಿವಶರಣ ಸಮಗಾರ ಹರಳಯ್ಯ ಜಯಂತಿಯಲ್ಲಿ ಗುರುಸಿದ್ಧೇಶ್ವರಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ಜನರಲ್ಲಿರುವ ಜಾತಿ, ಬೇಧ-ಭಾವ ತೊಡೆದು ಹಾಕಲು ಶರಣರು ಅಂತರ್ಜಾತಿ ವಿವಾಹ ಮಾಡಿದ ಕಾರಣ ಕಲ್ಯಾಣ ಕ್ರಾಂತಿ ನಡೆಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

೧೨ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ದಿಯೋಗಿ ಸಂಕಲ್ಪ ಸಾಧಕ ಶರಣವೆನಿಸಿಕೊಂಡ ಸಮಗಾರ ಹರಳಯ್ಯ ಬಸವರ್ಧಮವನ್ನು ಎತ್ತಿ ಹಿಡಿದ ಮಹಾಮಾನವತಾವಾದಿ ಶರಣಾದರೆಂದು ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.

ಬನಹಟ್ಟಿಯ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶನಿವಾರ ನಡೆದ ತಾಲೂಕುಮಟ್ಟದ ಸಮಗಾರ ಹರಳಯ್ಯ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬಾಲ್ಯದಲ್ಲಿಯೇ ಅನೇಕ ಪವಾಡ ಮಾಡಿರುವ ಹರಳಯ್ಯನವರು ಬಾಯಿಂದ ಬಂದ ಮಾತು ದಿಟವಾಗುವಂಥ ಮಹಾನ್ ಚೇತನ ಶಕ್ತಿಯೆಂಬ ಸಂಗತಿ ಜನಪದ ಗೀತೆಗಳಲ್ಲಿ ದೊರಕುವದೆಂದ ಅವರು, ಸಮಗಾರ ಸಮಾಜ ಅಭಿವೃದ್ಧಿ ಹೊಂದಲು ಶಿಕ್ಷಣದೊಂದಿಗೆ ಸಮಾಜದ ಒಗ್ಗಟ್ಟು ಪ್ರದರ್ಶನದಿಂದ ಮಾತ್ರ ಸಾಧ್ಯವೆಂದು ಶ್ರೀಗಳು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಬಸವಣ್ಣನವರ ಸ್ಥಾಪಿತ ಅನುಭವ ಮಂಟಪದಲ್ಲಿ ಅನೇಕ ತತ್ವ, ವಿಚಾರಗಳ ಕುರಿತು ನಡೆಯುತ್ತಿದ್ದ ಚರ್ಚೆ, ಜನರಲ್ಲಿರುವ ಜಾತಿ, ಬೇಧ-ಭಾವ ತೊಡೆದು ಹಾಕಲು ಶರಣರು ಅಂತರ್ಜಾತಿ ವಿವಾಹ ಮಾಡಿದ ಕಾರಣ ಕಲ್ಯಾಣ ಕ್ರಾಂತಿ ನಡೆಯಿತು. ಅದರಂತೆ ಸಮಗಾರ ಹರಳಯ್ಯನವರೂ ಸಹಿತ ಅಂತರಂಗ-ಬಹಿರಂಗದ ಶುದ್ಧ ಕಾಯಕದಿಂದ ಭಕ್ತಿಯ ಮಾರ್ಗ ತೋರಿಸಿದರು. ಬಸವಣ್ಣನ ದಾರಿಯಲ್ಲಿಯೇ ಜೀವನ ನಡೆಸಿದ ಅನೇಕ ಶರಣರು ಇಂದಿಗೂ ನಮಗೆ ಮಾರ್ಗದರ್ಶನ. ಅವರ ವಚನಗಳನ್ನು ಓದಿ ಜೀವನ ನಡೆಸಿದರೆ ಸಮಾಜ ಸುಸ್ಥಿರವಾಗಿರುತ್ತದೆ ಎಂದರು.

ಗಿರಮಲ್ಲಪ್ಪ ಕಬಾಡೆ, ಸಚಿನ ಕೊಡತೆ, ಪ್ರಶಾಂತ ಹೊಸಮನಿ, ಯಲ್ಲಪ್ಪ ಬೆಂಡಿಗೇರಿ, ಸದಾಶಿವ ಕಾಂಬಳೆ, ಉಮೇಶ ಹೊಣಮೋರೆ, ಸಂತೋಷ ಹಂಜಗಿ, ಜಯಶ್ರೀ ಜೋರಾಪೂರ, ಲಕ್ಕಣ್ಣ ಸಣ್ಣಕ್ಕಿ, ಶಿವರಾಜ ದಾನವಾಡಕರ, ಸಾವಿತ್ರಿ ಸಪ್ತಾಳಕರ, ಮಹಾದೇವ ಸಣ್ಣಕ್ಕಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಗಿರಮಲ್ಲಪ್ಪ ಮಹಾಲಿಂಗಪೂರ, ನಾಗೇಶ ಚಾಂಬಾರ, ರವಿ ಸಣ್ಣಕ್ಕಿ, ಮಹಾದೇವ ಹಂಜಗಿ, ಸುಧಾಕರ ಸಣ್ಣಕ್ಕಿ, ಸಂಜು ಕೊಡತೆ, ಬಸವರಾಜ ಮಡ್ಡೇನ್ನವರ, ಶಿವಾನಂದ ಹೊನ್ನಕಡಬಿ, ಆನಂದ ಪಾಂಡವ, ಅರುಣ ಸಣ್ಣಕ್ಕಿ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ