ಬಿ.ರಾಮಪ್ರಸಾದ್ ಗಾಂಧಿ ಹರಪನಹಳ್ಳಿ
ಅಲಗಿಲವಾಡ, ಚಿರಸ್ತಹಳ್ಳಿ ಜಿ.ದಾದಾಪುರ, ಶಿವಪುರ, ಚಿಗಟೇರಿ, ಬಾಗಳಿ, ಕಾಯಕದಹಳ್ಳಿ, ಮುತ್ತಿಗಿ, ಲೋಲೇಶ್ವರ, ನಜೀರನಗರ, ಬೆಣ್ಣಿಹಳ್ಳಿ, ನೀಲವಂಜಿ, ನಂದಿಬೇವೂರು, ನೀಲಗುಂದ, ಬಿ.ಕೊರಚರಹಟ್ಟಿ, ಕುಮಾರನಹಳ್ಳಿ, ಅಡವಿಮಲ್ಲಾಪುರ, ವಡ್ಡಿನಹಳ್ಳಿ, ಸತ್ತೂರು ಗೊಲ್ಲರಹಟ್ಟಿ, ಎನ್. ಶೀರನಹಳ್ಳಿ, ಮಾಡಲಗೇರಿ, ವಡ್ಡಿನದಾದಾಪುರ, ಸೇವಾನಗರ, ಬಿಕ್ಕಿಕಟ್ಟಿ, ಹೊಂಬಳಗಟ್ಟಿ, ಹಲುವಾಗಲು, ಮತ್ತೂರು, ಕಂಚಿಕೇರಿ, ಅರಸನಾಳು, ಕುಂಚೂರು, ಕೂಲಹಳ್ಳಿ, ಕೆ.ಕಲ್ಲಹಳ್ಳಿ, ಕಡಬಗೇರಿ, ಕಡತಿ, ದುಗ್ಗಾವತಿ, ಅರಸೀಕೆರೆ, ಅಣಜಿಗೆರೆ, ಪವನಪುರ, ಹುಣಸಿಕಟ್ಟೆ, ರಾಮಘಟ್ಟ ಸೇರಿದಂತೆ ಒಟ್ಟು75 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.
ಒಟ್ಟು 37 ಗ್ರಾಪಂ ಹೊಂದಿರುವ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆಯಲ್ಲಿಯೇ ದೊಡ್ಡದು, ಇಲ್ಲಿ 229 ಹಳ್ಳಿಗಳಿದ್ದು, 3.5ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ, 1200ಕ್ಕೂ ಹೆಚ್ಚು ಸಾರ್ವಜನಿಕ ಕೊಳವೆಬಾವಿಗಳಿದ್ದು, ಇದರಲ್ಲಿ ಈಗಾಗಲೇ 200 ಕ್ಕೂ ಹೆಚ್ಚು ಕೊಳವೆಬಾವಿಗಳು ನೀರು ಇಲ್ಲದೆ ಬತ್ತಿ ಹೋಗಿರುವ ಪರಿಣಾಮ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಖಾಸಗಿ ಕೊಳವೆಬಾವಿಯಿಂದ ನೀರು ಪೂರೈಕೆ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ 75 ಗ್ರಾಮಗಳ ಪೈಕಿ 41 ಗ್ರಾಮಗಳಿಗೆ ಈಗಾಗಲೇ ಖಾಸಗಿ ಕೊಳವೆಬಾವಿ ಮಾಲೀಕರಿಂದ ಬಾಡಿಗೆ ಆಧಾರದಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ, ಇನ್ನು ಉಳಿದ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಇನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ವಿವಿಧ ಗ್ರಾಮಗಳಿಗೆ ನೀರು ಸರಬರಾಜು ಆಗುತ್ತಿದ್ದು, ಸದ್ಯದ ಪರಿಸ್ಥಿಯಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪರಿಣಾಮ ಕೆಲ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು ಎಂದು ಗುರುತಿಸಲಾಗಿದೆ.
ಚಿಗಟೇರಿ-ನಿಚ್ಚವನಹಳ್ಳಿ ಮತ್ತು ಇತರೆ 105 ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಪೂರ್ಣಗೊಂಡರೆ ಮಾತ್ರ ಇದಕ್ಕೆ ಒಳಪಡುವ ಹಳ್ಳಿಗಳಿಗೆ ನೀರು ಪೂರೈಕೆಯಾಗುತ್ತದೆ, ಇಲ್ಲದಿದ್ದರೆ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಇನ್ನು ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಭತ್ತ ನಾಟಿ ಮಾಡದಂತೆ ತಾಲೂಕಾಡಳಿತ ರೈತರಿಗೆ ಸೂಚನೆ ನೀಡಿದೆ, ಚಳಿಗಾಲದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಇನ್ನು ಬೇಸಿಗೆಯಲ್ಲಿ ಹೇಗೆ ಎಂಬ ಆತಂಕ ಜನರಿಗೆ ಕಾಡುತ್ತಿದೆ, ಟ್ಯಾಂಕರ್ ಮೂಲಕ ಸೇರಿದಂತೆ ಏನೇನು ಸಾಧ್ಯತೆ ಇವೆಯೊ ಅವುಗಳ ಮೂಲಕ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕೆಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ಕಳೆದ 20 ದಿನಗಳಿಂದ ನಮ್ಮ ಕಂಚಿಕೆರೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ, ರೈತರ ಜಮೀನುಗಳಿಗೆ ಹೋಗಿ ನೀರು ತಂದು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಶೀಘ್ರವೇ ಪರಿಹರಿಸುವ ಭರವಸೆ ನೀಡಿದ್ದಾರೆ ಎಂದು