ಬಿ.ರಾಮಪ್ರಸಾದ್ ಗಾಂಧಿ
ನ.20ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಹಿಂದಿನ ಶಾಸಕರು ಪ್ರಯತ್ನ ನಡೆಸಿದರೂ ಸಾಧ್ಯವಾಗಿರಲಿಲ್ಲ. ಆದರೆ ಈಗಿನ ಶಾಸಕಿ ಎಂ.ಪಿ. ಲತಾ ಬಿಗಿ ಪಟ್ಟು ಹಿಡಿದು ರಾಜ್ಯ ಸರ್ಕಾರದಿಂದ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಹರಪನಹಳ್ಳಿ ಪುರಸಭೆ ವ್ಯಾಪ್ತಿ ಬರುವ ಪ್ರದೇಶಗಳನ್ನು ಮಾತ್ರ ಒಳಗೊಂಡ ನಗರಸಭೆಯಾಗಿದೆ. 25.36 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಪಟ್ಟಣದಲ್ಲಿ ಅಂದಾಜು 56 ಸಾವಿರ ಜನಸಂಖ್ಯೆ ಇದೆ.ಮುಂದಿನ ದಿನಗಳಲ್ಲಿ ನಗರಕ್ಕೆ ಸಮೀಪದ ದೇವರ ತಿಮಲಾಪುರ, ಅನಂತನಹಳ್ಳಿ ಶೃಂಗಾರ ತೋಟ ಮುಂತಾದ ಗ್ರಾಮಗಳನ್ನು ಸೇರಿಸಿಕೊಳ್ಳುವ ಚಿಂತನೆ ಇದೆ.
ಸದ್ಯ ಪುರಸಭೆಯಲ್ಲಿ 27 ಸದಸ್ಯ ಸ್ಥಾನಗಳಿವೆ. ಇನ್ನು ಮುಂದೆ 31 ಅಥವಾ 32 ಸದಸ್ಯರು ಚುನಾಯಿತರಾಗುತ್ತಾರೆ. ವಾರ್ಡಗಳನ್ನು ವಿಂಗಡಣೆ ಮಾಡಿ ಹೆಚ್ಚಿಸಲು ಶೀಘ್ರ ಆದೇಶ ಹೊರ ಬೀಳುವ ನಿರೀಕ್ಷೆ ಇದೆ.
ಈಗಿನ ಕೌನ್ಸಿಲರ್‌ಗಳ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ನಗರಸಭೆಯಾಗಿಯೇ ಚುನಾವಣೆ ಜರುಗುತ್ತದೆ. ಪುರಸಭೆ ಹೆಸರನ್ನು ಬದಲಿಸಿ ನಗರಸಭೆ ಎಂದು ನಾಮಫಲಕ ಅನಾವರಣ ಸಮಾರಂಭ ನ.24ರಂದು ನಡೆಸಲು ನಿಗದಿಯಾಗಿದೆ. ಒಟ್ಟಿನಲ್ಲಿ ಪುರಸಭೆಯಿಂದ ನಗರಸಭೆಯಾಗಿದ್ದು ಎಲ್ಲರಿಗೂ ಖುಷಿ ಸಂಗತಿಯಾಗಿದೆ. ಹೆಚ್ಚಿನ ರೀತಿಯಲ್ಲಿ ನಗರದ ಅಭಿವೃದ್ಧಿಯಾಗಬೇಕೆಂಬುದು ನಗರದ ಜನತೆಯ ನಿರೀಕ್ಷೆಯಾಗಿದೆ.
ಜನರ ಬಹುದಿನಗಳ ಬೇಡಿಕೆಯಂತೆ ಹರಪನಹಳ್ಳಿ ಪುರಸಭೆ ಇದೀಗ ನಗರಸಭೆಯಾಗಿದೆ. ಹೆಚ್ಚು ಅನುದಾನ, ಹೆಚ್ಚಿನ ಸಿಬ್ಬಂದಿ ಬರ್ತಾರೆ. ಈಗಿನಕ್ಕಿಂತ ಹೆಚ್ಚಿನ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಹರಪನಹಳ್ಳಿ ಹಿರಿಯ ಪುರಸಭಾ ಸದಸ್ಯ ಎಂ.ವಿ.ಅಂಜಿನಪ್ಪ.