ಕಠಿಣ ಪರಿಶ್ರಮ, ಅಭ್ಯಾಸ ಕಾರಣ: ಶ್ವೇತಾ

KannadaprabhaNewsNetwork |  
Published : Feb 21, 2026, 01:15 AM IST
ಷ | Kannada Prabha

ಸಾರಾಂಶ

ಚಿಕ್ಕಮಗಳೂರುಪಾಲಕರ ಪ್ರೋತ್ಸಾಹ, ಕಠಿಣ ಪರಿಶ್ರಮದ ಹಾಗೂ ಅಭ್ಯಾಸದಿಂದ ನ್ಯಾಯಾಧೀಶರಾಗಲು ಸಾಧ್ಯವಾಯಿತು ಎಂದು ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿರೇಮಗಳೂರಿನ ಎಚ್‌.ಇ.ಶ್ವೇತಾ ಹೇಳಿದರು.

ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಗೌರವ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಪಾಲಕರ ಪ್ರೋತ್ಸಾಹ, ಕಠಿಣ ಪರಿಶ್ರಮದ ಹಾಗೂ ಅಭ್ಯಾಸದಿಂದ ನ್ಯಾಯಾಧೀಶರಾಗಲು ಸಾಧ್ಯವಾಯಿತು ಎಂದು ನ್ಯಾಯಾಂಗ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಿರೇಮಗಳೂರಿನ ಎಚ್‌.ಇ.ಶ್ವೇತಾ ಹೇಳಿದರು.

ನಗರದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಗೌರವ ಸ್ವೀಕರಿಸಿ ಮಾತನಾಡಿ ಪಿಯುಸಿ, ಪದವಿ ವೇಳೆ ಜಿಲ್ಲಾಧಿಕಾರಿ ಆಗಬೇಕೇಂಬ ಕಸನು ಇತ್ತು. ಆ ನಂತರ ದಿನಗಳಲ್ಲಿ ಜಿಲ್ಲಾಧಿಕಾರಿಗಿಂತ ಹೆಚ್ಚು ಶಕ್ತಿ ನ್ಯಾಯಾಧೀಶರ ಹುದ್ದೆಯಲ್ಲಿ ಇರುವುದು ಗೊತ್ತಾಯಿತು. ಹಾಗಾಗಿ, ನ್ಯಾಯಾಧೀಶೆ ಆಗಬೇಕೆಂದು ಈ ನಿಟ್ಟಿನಲ್ಲಿ ವ್ಯಾಸಂಗ ಮಾಡಿದೆ ಎಂದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ಮಾತನಾಡಿ, ಜಿಲ್ಲೆಯ ಯುವತಿ ಪವಿತ್ರ ನ್ಯಾಯಾಧೀಶರ ಹುದ್ದೆ ಅಲಂಕರಿಸುತ್ತಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ. ಈ ಯುವತಿ ಸಾಧನೆ ಮುಂದಿನ ದಿನಗಳಲ್ಲಿ ಸಮಾಜದ ಪ್ರತಿ ಯುವಪೀಳಿಗೆಗೆ ಆದರ್ಶವಾಗಬೇಕು. ನ್ಯಾಯಾಧೀಶರ ಸ್ಥಾನ ಪ್ರಜಾಪ್ರಭುತ್ವದಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಅಂಬೇಡ್ಕರ್‌ ಸಂವಿಧಾನವನ್ನು ಎತ್ತಿಹಿಡಿಯುವಂತೆ ಪ್ರಮುಖ ಹುದ್ದೆಯಾಗಿದೆ. ಆ ನಿಟ್ಟಿನಲ್ಲಿ ಹಿರೇಮಗಳೂರಿನ ಶ್ವೇತಾ ತರಬೇತಿ ಪೂರ್ಣಗೊಳಿಸಿ ನ್ಯಾಯಪೀಠ ಅಲಂಕರಿಸುವ ಮೂಲಕ ಸಮಾಜದಲ್ಲಿ ಶೋಷಿತರ ಬಾಳಿಗೆ ಬೆಳಕಾಗುವ ತೀರ್ಪುಗಳನ್ನು ನೀಡಲಿ ಎಂದು ಹಾರೈಸಿದರು.

ಸಮಾಜಸೇವಕಿ ಪಲ್ಲವಿ ಸಿ.ಟಿ.ರವಿ ಮಾತನಾಡಿ, ಜಿಲ್ಲೆಯ ಪ್ರತಿಭಾವಂತೆ ಶ್ವೇತಾ ಅವರು ನ್ಯಾಯಾಧೀಶ ಪರೀಕ್ಷೆಯಲ್ಲಿ 59ನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಪ್ರೀತಿ, ಗೀತಾ, ಅಂಕಿತಾ, ಸುಜಾತಾ, ಸಂಗೀತಾ, ಪ್ರಸಾದ್, ಇಂದ್ರಾ, ವಿಶಾಲ, ಕೋಮಲ, ಮುಖಂಡರಾದ ಕೇಶವ, ಶಿವು, ಧರ್ಮರಾಜ್, ಉದಯ್ಉಪಸ್ಥಿತರಿದ್ದರು.

ಫೋಟೋ

ಸಿವಿಲ್‌ ನ್ಯಾಯಾಧೀಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹೀರೇಮಗಳೂರಿನ ಎಚ್‌.ಇ.ಶ್ವೇತಾರನ್ನು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಗೌರವಿಸಲಾಯಿತು. ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಸಮಾಜಸೇವಕಿ ಪಲ್ಲವಿ ಸಿ.ಟಿ,ರವಿ, ಪದಾಧಿಕಾರಿಗಳಾದ ಪ್ರೀತಿ, ಗೀತಾ, ಅಂಕಿತಾ, ಸುಜಾತಾ, ಸಂಗೀತಾ, ಪ್ರಸಾದ್, ಇಂದ್ರಾ ಮೊದಲಾದವರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದಿನಿಂದ ಸಫಾರಿ ಪುನಾರಂಭ: ಸಚಿವ ಖಂಡ್ರೆ
ವಿಬಿ ಜಿ ರಾಮ್ ಜಿ ಯೋಜನೆ ರದ್ದುಗೊಳಿಸಲು ಆಗ್ರಹ