ಕನ್ನಡಪ್ರಭ ವಾರ್ತೆ ಬನ್ನೂರುಯಾಚೇನಹಳ್ಳಿ ಗ್ರಾಮ ಚಿಕ್ಕದಾದರು ಸಾಧನೆಯ ದೃಷ್ಟಿಯಿಂದ ಉತ್ತುಂಗದ ಸ್ಥಾನವನ್ನು ಅಲಂಕರಿಸುತ್ತಾ ಬಂದಿದೆ ಎಂದು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್. ರಾಮಸ್ವಾಮಿ ತಿಳಿಸಿದರು.ಪಟ್ಟಣದ ಎಂಎಂ ರಸ್ತೆಯಲ್ಲಿರುವ ಕಚೇರಿಯಲ್ಲಿ ಮೈಸೂರು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ವೈ.ಜಿ. ಮಹೇಂದ್ರ ತಮಗೆ ಗೆಲುವಿಗೆ ಸಹಕಾರ ನೀಡಿದವರನ್ನು ಸನ್ಮಾನಿಸಿದ ನಂತರ ಅವರು ಮಾತನಾಡಿದರು. ಸತತವಾಗಿ ಎರಡು ವರ್ಷಗಳಿಂದ ನಮ್ಮ ಗ್ರಾಮಕ್ಕೆ ಪದವಿಗಳು ಬರುತ್ತಿದ್ದು, ಆ ನಿಟ್ಟಿನಲ್ಲಿ ಇಂದು ತಮ್ಮ ಶ್ರಮದಿಂದ ವೈ.ಜಿ. ಮಹೇಂದ್ರ ಮೈಸೂರು ಜಿಲ್ಲಾ ತೋಟದ ಬೆಳೆಗಾರರ ಮಾರಾಟ ಸಂಸ್ಕರಣ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿ ಗ್ರಾಮಕ್ಕೆ ಹೆಸರು ತಂದಿದ್ದಾರೆ ಎಂದರು. ಈ ಹಿಂದೆ ವೈ.ಎನ್. ಶಂಕರೇಗೌಡ ಪಿಎಸಿಸಿಎಂಎಸ್ ನ ನಿರ್ದೇಶಕರಾಗಿ, ವೈ.ಎಸ್.ರಾಮಸ್ವಾಮಿ ಪಿಎಸಿಸಿಎಂಎಸ್ ನ ನಿರ್ದೇಶಕ ಮತ್ತು ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಗ್ರಾಮದ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು. ಮುಂದಿನ ದಿನದಲ್ಲಿ ಮತ್ತಷ್ಟು ಹೆಚ್ಚಿನ ಸೇವಾ ಕಾರ್ಯವನ್ನು ಮಾಡುವ ಮೂಲಕ ಗ್ರಾಮದ ಕೀರ್ತಿಯನ್ನು ಬೆಳಗೋಣ ಎಂದು ತಿಳಿಸಿದರು.ಕಿಶೋರ, ಮಹೇಶ್, ಟಿ. ನರಸೀಪುರದ ಪಿಎಲ್.ಡಿ ಬ್ಯಾಂಕಿನ ನಿರ್ದೇಶಕ ಟಿ. ಎಸ್. ತುರಗನೂರು ಪ್ರಸನ್ನ, ರವಿಕುಮಾರ್, ಯೋಗೇಶ್ ಇದ್ದರು.