ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದಲ್ಲಿ ನಡೆದ ಹಿಂದೂ ಸಮಾಜೋತ್ಸವದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತರೆ ಧರ್ಮದಲ್ಲಿ ಕಂಡು ಬರುವಂತ ಶಿಸ್ತು, ಪ್ರಜ್ಞೆ ನಮ್ಮಲ್ಲಿ ಕಾಣದಿರುವುದು ವಿಷಾದಕರ. ಭಾರತೀಯ ಸನಾತನ ಹಿಂದೂ ಧರ್ಮವನ್ನು ಎಲ್ಲರೂ ಪ್ರೀತಿ , ವಿಶ್ವಾಸದಿಂದ ಕಂಡು ಉಳಿಸಿ ಬೆಳಸಬೇಕು. ಮನೆಗಳಲ್ಲಿ ತಮ್ಮ ಮಕ್ಕಳಿಗೆ ಮಹಾಭಾರತ ,ರಾಮಾಯಾಣ ಹಾಗೂ ಭಗವದ್ಗೀತೆ ಓದಿಸಿ ಮಕ್ಕಳಲ್ಲಿ ಹಿಂದೂ ಸಮಾಜದ ಬಗ್ಗೆ ಜಾಗೃತಿ ಮೂಡಿಸಬೇಕು. ಇಂತಹ ಸಮಾವೇಶಗಳು ಮೂರು ತಿಂಗಳಿಗೊಮ್ಮೆ ನಡೆದರೆ ಜನರಲ್ಲಿ ಧರ್ಮ ಜಾಗೃತಿ ಪಸರಿಸುತ್ತದೆ ಎಂದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥ ಸ್ವಾಮಿಜಿ ಮಾತನಾಡಿ, ಹಲವು ಮಹಾತ್ಮರ ತ್ಯಾಗ ಬಲಿದಾನದಿಂದ ಹಿಂದೂ ಧರ್ಮ ಜೀವಂತವಾಗಿದೆ. ಪ್ರಸ್ತುತ ಧರ್ಮ ಉಳಿಸುವ ಕೆಲಸವನ್ನು ಆರ್‌ಎಸ್‌ಎಸ್ ಸಂಘಟನೆ ಮಾಡುತ್ತಿರುವುದು ಶ್ಲಾಘನೀಯ, ಧರ್ಮ ತಾಯಿ ಇದ್ದಂತೆ ಆ ತಾಯಿ ಬಗ್ಗೆ ಮಾತನಾಡಲು ಹೆದರಬಾರದು. ನಮ್ಮ ಧರ್ಮದ ಬಗ್ಗೆ ಅರಿವಿರಬೇಕು. ವಿಶ್ವದಲ್ಲಿ ಹಿಂದೂ ಸ್ಥಾನವನ್ನು ಕರ್ಮಭೂಮಿಯಾಗಿ ನೋಡುತ್ತಿದ್ದು, ಪ್ರತಿ ಜೀವಿಯಲ್ಲೂ ದೇವರನ್ನು ಕಾಣುವ ದರ್ಮ ನಮ್ಮದು ಇಂತಹ ಪುಣ್ಯಭೂಮಿಯ ಧರ್ಮವನ್ನು ಕಾಪಾಡಲು ಎಲ್ಲರೂ ಒಟ್ಟಾಗಬೇಕು ಎಂದರು.ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ನಮ್ಮನ್ನು ಹಿಂದೂ ಧರ್ಮ ದೇಶದಲ್ಲಿ ಒಟ್ಟಾಗಿಸಿದ್ದು,ವಿಶ್ವದಲ್ಲೇ ಇಂದೂ ಸ್ಥಾನವು ದೇವರ ಗುಡಿಯಂತಿದೆ. ನಮ್ಮನ್ನು ಒಗ್ಗೂಡಿಸುವ ಧರ್ಮವೇ ಹಿಂದೂ ಧರ್ಮ ನಮ್ಮ ದೇಶದ ಪಂರಪರೆ,ಸಂಸ್ಕೃತಿ ಉಳಿಸಿ ನಮ್ಮ ಮುಂದಿನ ಮಕ್ಕಳಿಗೆ ಧರ್ಮ ಜಾಗೃತಿ ಮೂಡಿಸಬೇಕು ಎಂದರು.
ಅಧ್ಯಕ್ಷ ಡಾ.ಎಂಜಿ.ಶ್ರೀನಿವಾಮೂರ್ತಿ ಮಾತನಾಡಿ,ಜಗತ್ತಿಗೆ ಶಾಂತಿ ಸಾರುತ್ತಿರುವುದು ನಮ್ಮ ಹಿಂದೂಸ್ಥಾನ ದೇಶದ ಆದರ್ಶ ಸಮಾಜಗಳು ಹಿಂದೂ ಧರ್ಮದ ಭಾಗವಾಗಿದ್ದು ನಾವೆಲ್ಲ ಒಂದೇ ಎಂದರು.