ಹರಿಹರ ಕಲಾವಿದ ಅಣ್ಣಪ್ಪ ಅಜ್ಜೇರಗೆ ಭಕ್ತ ಶ್ರೇಷ್ಠ ಕನಕಶ್ರೀ ಪ್ರಶಸ್ತಿ

KannadaprabhaNewsNetwork |  
Published : Sep 09, 2026, 02:00 AM IST
ಕನ್ನಡ ಪ್ರಭ ವಾರ್ತೆ ಹರಿಹರ | Kannada Prabha

ಸಾರಾಂಶ

Harihar artist Annappa Ajjera receives Bhakta Shrestha Kanakashree Award

-ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆ ಪರಿಗಣಿಸಿ ಪುರಸ್ಕಾರ

--

ಕನ್ನಡಪ್ರಭ ವಾರ್ತೆ ಹರಿಹರ80ನೇ ಸ್ವಾತಂತ್ರ‍್ಯೋತ್ಸವ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಂದೇಮಾತರಂ ಸಾಂಸ್ಕೃತಿಕ ವೇದಿಕೆಯಿಂದ, ಬೆಂಗಳೂರು ನಗರದ ಲಲಿತಕಲಾ ಆಡಿಟೋರಿಯಂನಲ್ಲಿ, ನಾಡಿನ ಸಾಧಕರಿಗೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆ ಪರಿಗಣಿಸಿ ಹರಿಹರ ನಗರದ ನಿವಾಸಿ, ಗಾಯಕ ಅಣ್ಣಪ್ಪ ಅಜ್ಜೇರ ಅವರಿಗೆ ಭಕ್ತ ಶ್ರೇಷ್ಠ ಕನಕಶ್ರೀ ಪ್ರಶಸ್ತಿ ಹಾಗೂ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಗಾಯಕ, ಅಣ್ಣಪ್ಪ ಅಜ್ಜೇರ ಅವರು ಕಳೆದ 22 ವರ್ಷಗಳಿಂದ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ತಮ್ಮ ಜೀವಮಾನ ಸಾಧನೆ ಮಾಡಿದ್ದಾರೆ.

ಜನಪದ ಹಾಡು, ಭಜನೆ, ಸುಗಮಸಂಗೀತ, ಹಾಗೂ ಜನ ಜಾಗೃತಿ ಬೀದಿ ನಾಟಕ, ಕಲೆಗಳ ಮೂಲಕ ಸಮಾಜದ ಜನ ಮನದಲ್ಲಿ ಉಳಿಯುವ ಕಲೆಯನ್ನು ಪ್ರದರ್ಶನದೊಂದಿಗೆ ಸಲ್ಲಿಸಿದ ಸೇವೆಗೆ, ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಬೆಂಗಳೂರಿನ ವಂದೇಮಾತರಂ ಸಾಂಸ್ಕೃತಿಕ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಡಾ. ಕೃಷ್ಣಾ .ಟಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದ್ದಾರೆ.

ದಾರಿ ದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಸುಜಾತ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ಕಲಾವಿದ ಎಂದಿಗೂ ಬಡವನೇ ಹೊರತು ಶ್ರೀಮಂತನಲ್ಲ, ಕಲೆ ಕಲಾವಿದನಿಂದಲ್ಲ ಕಲೆಯಿಂದ ಕಲಾವಿದನೆಂದು, ತಮ್ಮ ಕಲೆಯ ಮೂಲಕ ಜನಮಾನಸದಲ್ಲಿ ಉಳಿದ ಕಲಾವಿದನಿಗೆ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.

ವೈದ್ಯ ಡಾ. ಆಂಜನಪ್ಪ. ಚಲನಚಿತ್ರ ಹಾಸ್ಯ ನಟಿ ರೇಖಾದಾಸ್, ಮೈಸೂರು ರೆಹಮಾನ್, ಬಿರಾದರ್, ಡಾ. ವೆಂಕಟೇಶ್, ಆರ್ ಚೌತಾಯಿ, ಚಿತ್ರ ಹಾಗೂ ಕಿರುತೆರೆ ನಟ, ನಟಿಯರು ಇದ್ದರು.

ಪೋಟೊ

ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ನ ಸಂಸ್ಥಾಪಕ, ಗಾಯಕ, ಅಣ್ಣಪ್ಪ ಅಜ್ಜೇರ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಾವಿತ್ರ್ಯತೆಯಿಂದ ಗಣೇಶೋತ್ಸವ ಆಚರಿಸಿ
72 ಸಾವಿರ ಹುದ್ದೆ ಭರ್ತಿ, ಕೆಪಿಎಸ್ಸಿ ಭ್ರಷ್ಟಾಚಾರ ತಡೆಗೆ ಆಗ್ರಹ