ಧರ್ಮ ಬೆಳೆಯಲು ಸೌಹಾರ್ದತೆ ಅಗತ್ಯ: ನಾಗರಾಜ

KannadaprabhaNewsNetwork |  
Published : Apr 28, 2026, 02:30 AM IST
ಸಿದ್ದಾಪುರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಧರ್ಮಸ್ಥಾಪನೆಯಲ್ಲಿ ಎಲ್ಲರಿಗೂ ಸಹಭಾಗಿತ್ವವನ್ನು ಕೊಟ್ಟ ಬಸವೇಶ್ವರರು ಮಾರ್ಗದರ್ಶನ ಮಾಡಿದ ದಾರಿಯಲ್ಲಿ ನಾವೆಲ್ಲ ಸಾಗಬೇಕಾದ ಅನಿವಾರ್ಯತೆಯಿದೆ.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ವಿಶ್ವ ಮಾನವತೆ ಹೊಂದಿದ್ದ ಬಸವೇಶ್ವರರು ವಿಶ್ವಗುರು. ಧರ್ಮಸ್ಥಾಪನೆಯಲ್ಲಿ ಎಲ್ಲರಿಗೂ ಸಹಭಾಗಿತ್ವವನ್ನು ಕೊಟ್ಟ ಬಸವೇಶ್ವರರು ಮಾರ್ಗದರ್ಶನ ಮಾಡಿದ ದಾರಿಯಲ್ಲಿ ನಾವೆಲ್ಲ ಸಾಗಬೇಕಾದ ಅನಿವಾರ್ಯತೆಯಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅ.ಭಾ. ವೀರಶೈವ ಮಹಾಸಭಾದ ತಾಲೂಕು ಘಟಕ ಹಾಗೂ ಸ್ಥಳೀಯ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ಶ್ರೀ ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.

ನಿಜ ಜೀವನದಲ್ಲಿ ಕಂಡದ್ದರಲ್ಲಿ ದೇವರನ್ನು ಕಂಡವರು ಬಸವಣ್ಣ. ಸಮಾಜದ ಕೆಳಸ್ತರದಲ್ಲಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಅವರು ಸಮಾಜದ ಕಟ್ಟುಪಾಡುಗಳ ವಿರುದ್ಧ ಹೋರಾಡಿದವರು. 8 ಶತಮಾನಗಳ ಹಿಂದೆಯೇ ಸಂವಿಧಾನದ ರೀತಿಯಲ್ಲಿ ಸಾಮಾಜಿಕ ಅಭಿವೃದ್ಧಿಗೆ ವಿಚಾರಗಳನ್ನು ಅವರು ರೂಪಿಸಿದ್ದರು ಎಂದರು.

ನಮ್ಮದು ಸನಾತನ ಧರ್ಮ. ಬಹುತೇಕ ಧರ್ಮಗಳು ಉಗಮವಾದದ್ದು ಹಿಂದೂ ಧರ್ಮದ ಮೂಲಕ. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಇರುವ ಭಾರತ ಸಂಸ್ಕೃತಿಯ ವಿಶಾಲ ದೃಷ್ಟಿಯಿಂದ ಜಗತ್ತಿಗೆ ಕೊಟ್ಟ ಕೊಡುಗೆ ದೊಡ್ಡದು. ಆದರೆ ನಮ್ಮ ಸನಾತನದಲ್ಲಿ ಒಗ್ಗಟ್ಟಿಲ್ಲ. ನಮ್ಮ ಧರ್ಮ ಬೆಳೆಯಲು ಸೌಹಾರ್ದತೆ ಅಗತ್ಯ ಎಂದರು.

ತಹಸೀಲ್ದಾರ ಎಂ.ಆರ್. ಕುಲಕರ್ಣಿ ಮಾತನಾಡಿ, ಬಸವೇಶ್ವರರು ಶ್ರೇಷ್ಠ ಸಮಾಜ ಸುಧಾರಕರು. ಸಾಮಾಜಿಕ ಪಿಡುಗು, ಮೂಢನಂಬಿಕೆಗಳ ವಿರುದ್ಧ ಜಾಗೃತಿ ಮೂಡಿಸುತ್ತ ಜಾತಿ, ಲಿಂಗ ಬೇಧಗಳ ನಿವಾರಣೆಗೆ ಶ್ರಮಿಸಿದವರು. ಅನುಭವ ಮಂಟಪದ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಕಾರಣರಾದವರು. ಅವರ ವಿಚಾರಗಳು ಯಾವತ್ತಿಗೂ ಪ್ರಸ್ತುತ ಎಂದರು.

ಪಿ.ಎಸ್.ಐ. ನಾಗಪ್ಪ, ಪಪಂ ಮುಖ್ಯಾಧಿಕಾರಿ ಮಹ್ಮದ್ ಯಾಕೂಬ್ ಶೇಖ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ, ಸಾಮಾಜಿಕ ಕಾರ್ಯಕರ್ತ ಗುರುರಾಜ ಶಾನಭಾಗ, ಅ.ಭಾ.ವೀ. ಮಹಾಸಭಾ ಜಿಲ್ಲಾ ನಿರ್ದೇಶಕ ವೇ. ಪರಮೇಶ್ವರಯ್ಯ ಕಾನಳ್ಳಿಮಠ ಮುಂತಾದವರು ಮಾತನಾಡಿದರು. ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಕಾವ್ಯಾ ಅಶೋಕ ಮೆರವಣಿಗೆ ಉಪಸ್ಥಿತರಿದ್ದರು.

ಅ.ಭಾ. ವೀರಶೈವ ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್. ಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜ ಎಂ.ದೊಶೆಟ್ಟಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಅರಮೇರಿ ಶ್ರೀ
ಬಲ್ಲಮಾವಟಿ ನಾಲ್ನಾಡ ಹಾಕಿ ಕ್ಲಬ್‌ ತರಬೇತಿ ಶಿಬಿರ