ಶರಣರ ವಚನ ಸಾಹಿತ್ಯ ಪ್ರೇರಣಾದಾಯಕ

KannadaprabhaNewsNetwork |  
Published : Apr 28, 2026, 02:15 AM IST
ಕೊಟ್ಟೂರಿನಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ ನ  ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ.ಎಂ ವೀರೇಶ್ ಉದ್ಗಾಟಿಸಿ ಮಾತನಾಡಿದರು  | Kannada Prabha

ಸಾರಾಂಶ

ಸಂಸ್ಕೃತಿಗೆ ಶರಣರ ಜೀವನ ಸಾಧನೆ, ನಡೆ ನುಡಿಗಳು ಖಂಡಿತ ಪ್ರತಿಯೊಬ್ಬರಿಗೆ ಸ್ಫೂರ್ತಿಯಾಗಿವೆ

ಕೊಟ್ಟೂರು: ನಾಡಿನ ಸಂಸ್ಕೃತಿಗೆ ಶರಣರ ಜೀವನ ಸಾಧನೆ, ನಡೆ ನುಡಿಗಳು ಖಂಡಿತ ಪ್ರತಿಯೊಬ್ಬರಿಗೆ ಸ್ಫೂರ್ತಿಯಾಗಿವೆ ಎಂದು ಚಿತ್ರದುರ್ಗ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ಹೇಳಿದರು.ಕೊಟ್ಟೂರು ತಾಲೂಕು ಶರಣ ಸಾಹಿತ್ಯ ಪರಿಷತ್‌ ನಿಂದ ಹಮ್ಮಿಕೊಂಡಿದ್ದ ಎಚ್.ಎಂ. ಅಮೃತ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

12ನೇ ಶತಮಾನ ನಾಡುಕಂಡ ವಚನ ಸಾಹಿತ್ಯದ ಕ್ರಾಂತಿಯುಗ. ಶರಣ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರಸಾರ ಮಾಡುವ ಮೂಲಕ ನಾಡಿನ ಮಠಗಳು ಮತ್ತು ಶರಣ ಸಾಹಿತ್ಯ ಪರಿಷತ್ ಒಟ್ಟುಗೂಡಿ ಕೆಲಸ ಮಾಡುತ್ತಿದ್ದು, ಇದರ ಸಾರ್ಥಕ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದರು.

ವಿಜಯನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಎನ್.ಎಂ. ರವಿಕುಮಾರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಮೂಲಕ ಸಮಾಜ ಸೇವೆ ಮಾಡುತ್ತಿದ್ದು, ಯುವ ಪೀಳಿಗೆಗೆ ಶರಣರ ವಚನಗಳನ್ನು ತಿಳಿಸಿ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ಉತ್ತಮ ಸಮಾಜ ನಮ್ಮದಾಗಬಲ್ಲದು ಎಂದು ಮನವರಿಕೆ ಮಾಡಿಕೊಡಬಹುದಾಗಿದೆ ಎಂದರು.

ದತ್ತಿ ದಾಸೋಹಿ ಡಾ.ಎಚ್.ಎಂ. ಹರೀಶ, ಎಚ್.ಎಂ. ಸುರೇಶ್ ಮಾತನಾಡಿದರು. ಶಿಕ್ಷಕ ಸಿ.ಲೋಕೇಶ, ಶರಣ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಕೊಟ್ಟೂರು ಥಿಯೋಸಾಫಿಕಲ್ ಕಾರ್ಯದರ್ಶಿ ಜೆ.ಎಂ. ಧನುಂಜಯ ಮಾತನಾಡಿದರು. ತಾಲೂಕು ಅಧ್ಯಕ್ಷ ದೇವರಮನಿ ಕರಿಯಪ್ಪ, ಖಜಾಂಚಿ ಅಂಗಡಿ ಚಂದ್ರಣ್ಣ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಸುಜಾತ, ದೇವರಮನಿ ಮಂಗಳ, ಜೆ.ಎಂ. ಸುಧೀಂದ್ರ ಮಾತನಾಡಿದರು. ಟಿ.ಕೆ. ಸಿದ್ದರಾಮೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿ.ಮಲ್ಲಿಕಾರ್ಜುನ, ಜಿ.ಷಡಕ್ಷರಿಗೌಡ, ಜೆ.ಎಂ. ರೇವಣಾರಾಧ್ಯ, ಬಿ.ಹನುಮಂತಪ್ಪ, ಡಿ.ಕೊಟ್ರೇಶ್, ಗಂಡಿ ವಿರುಪಾಕ್ಷಪ್ಪ, ಟಿ.ಕೊಟ್ರೇಶಪ್ಪ, ಕೆ.ಜೆ. ಪೂರ್ಣಿಮಾ, ಎಚ್.ಪೂರ್ಣಿಮಾ, ಜಲಜಾಕ್ಷಿ, ಪಿ.ಕೊಟ್ರಪ್ಪ ದೇವೇಂದ್ರಪ್ಪ ಇದ್ದರು. ಹೋಬಳಿ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವಣ್ಣ ನಾನು ಲಿಂಗಾಯತ ಧರ್ಮದವನು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ
ಜಿಂದಾಲ್‌ಗೆ ಭೂಮಿ ಮಾರಾಟ ವಿರೋಧಿಸಿ ರೈತರ ಹೋರಾಟ: 180 ಮಂದಿ ಬಂಧನ