ಹಾವೇರಿ: ರಾಜ್ಯದ ವಿವಿಧ ಸಹಕಾರ ಮಹಾ ಮಂಡಳಗಳ, ಜಿಲ್ಲೆಯ ವಿವಿಧ ಸಹಕಾರಿ ಸಂಘಗಳ ಸಹಯೋಗದಲ್ಲಿ ರಾಜ್ಯಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ-2025 ಅನ್ನು ನಗರದ ರಜನಿ ಸಭಾಂಗಣದಲ್ಲಿ ನ.18ರಂದು ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದ್ದು, ರಾಜ್ಯದ ಸಹಕಾರಿಗಳ ಸ್ವಾಗತಕ್ಕೆ ಹಾವೇರಿ ಸಜ್ಜಾಗಿದೆ.ಈ ವರ್ಷ `ಆತ್ಮನಿರ್ಭರ ಭಾರತ ಸಾಧನೆಗೆ ವಾಹಕಗಳಾಗಿ ಸಹಕಾರ ಸಂಸ್ಥೆಗಳು'''''''' ಎಂಬ ಧ್ಯೇಯ ವಾಕ್ಯದೊಂದಿಗೆ, `ಸಹಕಾರ ಉದ್ಯಮಶೀಲತೆಯಿಂದ ಯುವಜನ, ಮಹಿಳಾ ಮತ್ತು ಅಬಲ ವರ್ಗದ ಸಬಲೀಕರಣ'''''''' ಎಂಬ ವಿಷಯವನ್ನಿಟ್ಟುಕೊಂಡು ಸಪ್ತಾಹ ಆಚರಿಸಲಾಗುತ್ತಿದೆ. ಪ್ರತಿಯೊಂದು ವಿಭಾಗದಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಗಾವಿ ವಿಭಾಗದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಹಾವೇರಿಯಲ್ಲಿ ಆಯೋಜಿಸಲಾಗಿದ್ದು, 3 ಸಾವಿರಕ್ಕೂ ಅಧಿಕ ಸಹಕಾರಿಗಳು ಆಗಮಿಸಲಿದ್ದಾರೆ.ಸಹಕಾರಿ ಕ್ಷೇತ್ರಕ್ಕೆ ಜಿಲ್ಲೆಯ ಕೊಡುಗೆ: ಸಹಕಾರಿ ಕ್ಷೇತ್ರಕ್ಕೆ ಜಿಲ್ಲೆ ವಿಶಿಷ್ಟ ಕೊಡುಗೆ ನೀಡಿದೆ. ಸಹಕಾರ ಸಂಘಗಳ ಕಾಯ್ದೆಯಡಿ ಜಿಲ್ಲೆಯಲ್ಲಿ ಒಟ್ಟಾರೆ 1423 ಸಹಕಾರ ಸಂಘಗಳಿದ್ದು, 9,14,316 ಜನರು ಸದಸ್ಯತ್ವ ಹೊಂದಿದ್ದಾರೆ. ಸಂಘಗಳ ನೋಂದಣಿ ಕಾಯ್ದೆಯಡಿಯಲ್ಲಿ ಒಟ್ಟು 22,412 ಸಂಘ, ಸಂಸ್ಥೆ (ಎನ್‌ಜಿಒ) ನೋಂದಾಯಿಸಲ್ಪಟ್ಟಿವೆ. ಜಿಲ್ಲೆಯಲ್ಲಿ 1 ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ. 483 ಹಾಲು ಉತ್ಪಾದಕರ ಸಹಕಾರ ಸಂಘಗಳು, 1 ಹಾಲು ಉತ್ಪಾದಕರ ಸಹಕಾರ ಒಕ್ಕೂಟ ಕಾರ್ಯನಿರ್ವಹಿಸುತ್ತಿದೆ. 2023-24ನೇ ಸಾಲಿನಲ್ಲಿ 3,94,04,808 ಲೀಟರ್ ಹಾಲು ಸರಬರಾಜು ಮಾಡಿದ್ದು, ಈ ಪೈಕಿ ರೈತರಿಗೆ ಸರ್ಕಾರದಿಂದ 19.49 ಕೋಟಿ ರು. ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ. 2024-25ನೇ ಸಾಲಿನಲ್ಲಿ 4,76,71,141 ಲೀಟರ್ ಹಾಲು ಸರಬರಾಜು ಮಾಡಿದ್ದು, ಈ ಪೈಕಿ ರೈತರಿಗೆ ಸರ್ಕಾರದಿಂದ 16.50 ಕೋಟಿ ಪ್ರೋತ್ಸಾಹ ಧನ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 3 ನೂಲಿನ ಗಿರಣಿಗಳು, 21 ಕೆಸಿಸಿ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತವೆ. ಇದರಲ್ಲಿ 2024-25ನೇ ಸಾಲಿನಲ್ಲಿ 32,995 ಸದಸ್ಯರಿಗೆ 228ಕೋಟಿ ರು. ಅಲ್ಪಾವಧಿ ಸಾಲ ವಿತರಿಸಲಾಗಿದೆ. 449 ಸದಸ್ಯರಿಗೆ 35.89 ಲಕ್ಷ ರು. ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ಸನ್ 2025-26ನೇ ಸಾಲಿನಲ್ಲಿ 17747 ಸದಸ್ಯರಿಗೆ 135.00 ಕೋಟಿ ರು. ಅಲ್ಪಾವಧಿ ಸಾಲ ವಿತರಿಸಲಾಗಿದೆ. 314 ಸದಸ್ಯರಿಗೆ 19ಕೋಟಿ ರು. ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ.ಜಿಲ್ಲೆಯಲ್ಲಿ 2025-26ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಮಹಿಳೆಯರು, ವಿಕಲಚೇತರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಜನರನ್ನು ವಿವಿಧ ಸಹಕಾರ ಸಂಘಗಳಲ್ಲಿ ಸದಸ್ಯರನ್ನಾಗಿ ನೋಂದಾಯಿಸುವ ಯೋಜನೆಯಡಿ ಒಟ್ಟಾರೆ 590 ಜನರನ್ನು ಸದಸ್ಯರನ್ನಾಗಿ ನೋಂದಾಯಿಸುವ ಗುರಿ ಹೊಂದಲಾಗಿದೆ.