ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ
ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಗ್ಗೆ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷ ತಹಸೀಲ್ದಾರ್ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನೆರವೇರಿತು. ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ತಾಲೂಕು ವೇದಮಾತಾ ಗಾಯತ್ರಿ ಬ್ರಾಹ್ಮಣರ ಸಂಘದ ಅಧ್ಯಕ್ಷ ನರಸಿಂಹ ಪ್ರಸಾದ್ ಮಾತನಾಡಿ, ಕ್ರಿಸ್ತಶಕ 78ರಲ್ಲಿ ಶಂಕರಾಚಾರ್ಯರು ಕೇರಳದಲ್ಲಿ ಜನ್ಮ ತಾಳಿದರು. ಇವರು ಬಾಲ್ಯದಲ್ಲಿಯೇ ಪ್ರಾವೀಣ್ಯತೆ ಹೊಂದಿದ್ದರು. ತಮ್ಮ 7ನೇ ವಯಸ್ಸಿನಲ್ಲಿ ವೇದಾಧ್ಯಾಯನವಲ್ಲದೆ ಸಂಸ್ಕೃತವನ್ನು ತಿಳಿದಿದ್ದರು. ತಮ್ಮ 12ನೇ ವಯಸ್ಸಿನಲ್ಲಿ ದೀಕ್ಷೆ ಪಡೆದರು.ಇವರು ಈಶ್ವರನ ಅಪಾವತಾರವಾಗಿದ್ದು, ಹಿಂದೂ ಧರ್ಮದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಭಾರತದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು. ಇವರು ಜಾತಿ ವ್ಯವಸ್ಥೆಯನ್ನು ಒಗ್ಗೂಡಿಸಿದ್ದಾರೆ. ತಮ್ಮ ಅದ್ವೈತ ಸಿದ್ದಾಂತದ ಮೂಲಕ ಹಿಂದೂ ಸಮಾಜದ ಏಳಿಗೆಗೆ ಸಮಾಜವನ್ನು ಒಗ್ಗೂಡಿಸುವುದಕ್ಕೆ ಶ್ರಮಿಸಿದ್ದಾರೆ ಎಂದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಭಾರತದಲ್ಲಿ ಹಿಂದೂ ಧರ್ಮ ಸ್ಥಾಪನೆಗೆ ಹೋರಾಟ ನಡೆಸಿದರು. ಹಿಂದೂ ಸಂಸ್ಕೃತಿ ಪುನರ್ ಸ್ಥಾಪಿಸಲು ಶ್ರಮಿಸಿದರು. ಹಿಂದೂ ಧರ್ಮಕ್ಕೆ ಪುನರ್ ಜೀವನ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಧರ್ಮದ ಬಗ್ಗೆ ಜನತೆಯಲ್ಲಿ ಅರಿವು ಮೂಡಿಸಿದರು. ಹಿಂದೂ ಧರ್ಮದ ಬಗ್ಗೆ ಕಾಳಜಿ ವಹಿಸಿದ್ದಾಗಿ ಹೇಳಿದರು.ಎಚ್.ಡಿ. ಕೋಟೆ ಕೋದಂಡರಾಮ ದೇವಾಲಯದ ಪ್ರಧಾನ ಕಾರ್ಯದರ್ಶಿ ಅನಂತರಾಮು, ತಾಲೂಕು ವೇದಮಾತಾ ಗಾಯತ್ರಿ ಬ್ರಾಹ್ಮಣರ ಸಂಘದ ಗೌರವಾಧ್ಯಕ್ಷ ಎಚ್.ವಿ. ಭುಜಂಗ ರಾವ್, ಮಾಜಿ ಉಪಾಧ್ಯಕ್ಷ ಸೋಮಸುಂದರ್, ಸಂತೋಷ್ ನಾಗ್, ಚಂದ್ರಮೌಳಿ, ಶ್ರೀಕಂಠ ಶರ್ಮ, ವೈದ್ಯನಾಥ ರಘುನಾಥ್, ಪ್ರಕಾಶ್, ನಾಗೇಂದ್ರ , ಡಾಕ್ಟರ್ ಚಂದ್ರಶೇಖರ್ ಉಪಾಧ್ಯಕ್ಷರಾದ ವೇಣುಗೋಪಾಲ್, ಶ್ರೀನಿವಾಸ್, ರಘು, ಸುನಿಲ್, ನಾಗಸುಂದರ್, ಶರತ್ ಸೇರಿದಂತೆ ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಮುಖಂಡರು ಹ ಭಾಗವಹಿಸಿದ್ದರು.