ಬಿಡದಿ ಬಗ್ಗೆ ಎಚ್‌ಡಿಕೆ ಮಾತಲ್ಲಿ ಅರ್ಥವಿದೆ: ವಿ.ಸೋಮಣ್ಣ

KannadaprabhaNewsNetwork |  
Published : Jun 28, 2026, 02:30 AM IST
ಕ್ಯಾಪ್ಷನ27ಕೆಡಿವಿಜಿ31 ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಬಸವಂತಪ್ಪನವರು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.........ಕ್ಯಾಪ್ಷನ27ಕೆಡಿವಿಜಿ32 ದಾವಣಗೆರೆಯಲ್ಲಿ ಜಿಲ್ಲಾಡಳಿತದಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮವನ್ನು ಶಾಸಕ ಕೆ.ಎಸ್.ಬಸವಂತಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳುವುದರಲ್ಲಿ ಅರ್ಥವಿದೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸ್ಪಂದಿಸಿ, ತೀರ್ಮಾನ ಮಾಡುವುದು ಉತ್ತಮ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

- ತನ್ನದೇ ನಡೆಯಬೇಕೆಂಬುದನ್ನು ಬಿಟ್ಟು, ಜನರ ಭಾವನೆಗೆ ತಕ್ಕಂತೆ ಡಿಕೆಶಿ ತೀರ್ಮಾನ ಕೈಗೊಳ್ಳಲಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಡದಿ ಟೌನ್‌ಶಿಪ್‌ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳುವುದರಲ್ಲಿ ಅರ್ಥವಿದೆ. ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸ್ಪಂದಿಸಿ, ತೀರ್ಮಾನ ಮಾಡುವುದು ಉತ್ತಮ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಿರುವುದರಲ್ಲಿ ಅರ್ಥವಿದೆ. ಇದಕ್ಕೆ ಡಿ.ಕೆ.ಶಿವಕುಮಾರ ಸ್ಪಂದಿಸಿ, ತೀರ್ಮಾನ ಮಾಡುವುದು ಸೂಕ್ತ. ಯಾವುದೇ ಟೌನ್‌ಶಿಪ್ ಮಾಡುವುದು ಆ ಭಾಗದ ಅನುಕೂಲಕ್ಕೆ ಎಂದರು.

ವಸತಿ ಸಚಿವನಾಗಿ ನಾನೂ 12 ವರ್ಷ ಕೆಲಸ ಮಾಡಿದ್ದೇನೆ. ನಾವು ಸೂರ್ಯ ನಗರ 1, 2, 3 ಹಾಗೂ 4ನೇ ಫೇಸ್ ಮಾಡಿದ್ದೇವೆ. ಆದರೆ, ಯಾವೊಬ್ಬ ರೈತರೂ ರಸ್ತೆಗೆ ಬಾರದಂತೆ ಕೆಲಸ ಮಾಡಿದ್ದೆವು. ಜನರು ಬೇಡ ಅಂದ ಮೇಲೆ ಇನ್ನೂ ಸ್ವಲ್ಪ ದೂರ ಹೋಗಿ ಟೌನ್‌ಶಿಪ್ ಮಾಡಲಿ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಿಡದಿ ಪ್ರದೇಶದ ವಾಸ್ತವ ಮಾಹಿತಿಯನ್ನು ತರಿಸಿಕೊಂಡು,ನೋಡಲಿ. ಯಾವುದೋ ಒಂದು ವಿಚಾರಕ್ಕೆ ಜೋತು ಬೀಳುವುದಲ್ಲ. ಮಾಡಬೇಕಾದ ಅನೇಕ ಯೋಜನೆಗಳಿವೆ, ಕೆಲಸ ಕಾರ್ಯಗಳೂ ಇವೆ. ಜನರ ಭಾವನೆಯನ್ನು ಅರ್ಥ ಮಾಡಿಕೊಂಡು, ಬಿಡದಿ ಟೌನ್‌ಶಿಪ್‌ ಕೈಬಿಟ್ಟು, ಬೇರೆಡೆ ಟೌನ್‌ಶಿಪ್ ಮಾಡುವುದು ಒಳ್ಳೆಯದು ಎಂದು ಅವರು ಹೇಳಿದರು.

ರಾಜ್ಯದ ಮುಖ್ಯಮಂತ್ರಿಯಾಗಿ ತನ್ನದೇ ನಡೆಯಬೇಕೆಂಬುದನ್ನು ಬಿಟ್ಟು, ಆ ಭಾಗದ ಜನರು, ರೈತರ ಭಾವನೆಗೆ ಅನಾನುಕೂಲ ಆಗದಂತೆ ಡಿ.ಕೆ.ಶಿವಕುಮಾರ ನಡೆದುಕೊಳ್ಳುತ್ತಾರೆ ಎಂದುಕೊಂಡಿದ್ದೇನೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಹ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಮ್ಮಿಬ್ಬರ ಕೆಸರು ಎರಚಾಟದಲ್ಲಿ ಜನಸಾಮನ್ಯರಿಗೆ ಬೇಕಾಗಿದ್ದನ್ನೂ ಮೊದಲಿ ಮಾಡಿ. ಎಚ್.ಡಿ.ಕುಮಾರಸ್ವಾಮಿ ಬಿಡದಿ ವಿಚಾರವಾಗಿ ಹೇಳುವುದರಲ್ಲೂ ಅರ್ಥವಿದೆ ಎಂದು ಅವರು ಪುನರುಚ್ಛರಿಸಿದರು.

ಇಂತಹ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ ಉತ್ತಮ ತೀರ್ಮಾನ ಮಾಡಿದರೆ ಅವರಿಗೂ ಕ್ಷೇಮ, ರಾಜ್ಯಕ್ಕೂ ಕ್ಷೇತ್ರ, ಆ ಭಾಗದ ರೈತರು, ಜನಸಾಮಾನ್ಯರಿಗೂ ಕ್ಷೇಮ. ಈ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ ಅಲ್ಲಿನ ವಾಸ್ತವಾಂಶವನ್ನು ಅರಿತು, ಜನರ ಭಾವನೆಗೆ ಧಕ್ಕೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರಗೆ ಹೇಳಿದರು.

- - -

(ಕೋಟ್‌)

ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರದ ದೇಣಿಗೆ ಹಗರಣದ ವಿಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಡೀ ಪ್ರಕರಣ ಎಸ್ಐಟಿ ತನಿಖೆಗೆ ಕೊಟ್ಟಿದ್ದಾರೆ. ರಾಮನ ಹೆಸರನ್ನು ಹೇಳಿಕೊಂಡು, ಯಾರೇ ಅಪಚಾರ ಮಾಡಿದರೂ ಅಂತಹವರಿಗೆ ರಾಮನೇ ಶಿಕ್ಷೆ ಕೊಡುತ್ತಾನೆ.

- ವಿ.ಸೋಮಣ್ಣ, ಕೇಂದ್ರ ಸಚಿವ.

- - - (ಟಾಪ್‌ ಕೋಟ್‌)

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲ ಶಾಸಕರು ಅಡ್ಡ ಮತದಾನ ಮಾಡಿದ ವಿಚಾರ ಪಕ್ಷದ ವರಿಷ್ಠರ ಗಮನಕ್ಕೆ ಬಂದಿದ್ದು, ಈ ಪ್ರಕರಣ‍ವನ್ನು ಅತ್ಯಂತ ತೀಕ್ಷ್ಣವಾಗಿ ತೆಗೆದುಕೊಂಡಿದ್ದಾರೆ. ಅಡ್ಡ ಮತದಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಅಡ್ಡ ಮತದಾನದ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದಾರೆ, ಅವರಿಗೆ ಒಳ್ಳೆಯದಾಗಲಿ.

- ವಿ.ಸೋಮಣ್ಣ, ಸಚಿವ.

- - -

-27ಕೆಡಿವಿಜಿ1:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡೂರಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ: ಶಾಸಕ ಕೆ.ಎಸ್. ಆನಂದ್
ನಾಡಪ್ರಭುವಿಗೆ ನಮಿಸಿದ ಮುಖ್ಯಮಂತ್ರಿ ಡಿಕೆಶಿ