ಶಾಲಾ ಕಾಲೇಜುಗಳಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮ ಅವಶ್ಯಕ

KannadaprabhaNewsNetwork |  
Published : Nov 05, 2026, 02:00 AM IST
ಕ್ಯಾಪ್ಷನ2ಕೆಡಿವಿಜಿ39, 40 ದಾವಣಗೆರೆಯಲ್ಲಿಂದು ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ರಕ್ತದೊತ್ತಡ: ವಾಸ್ತವ ಮತ್ತು ಪರಿಣಾಮಗಳು ವಿಷಯ ಕುರಿತು ಡಾ.ಮಾಲತೇಶ ಕಲ್ಲಿಂಗಪ್ಪ ಮಂಡಲೂರು ಮಾತನಾಡಿದರು. | Kannada Prabha

ಸಾರಾಂಶ

ಈಗಿನ ಕಾಲದಲ್ಲಿ ಸಣ್ಣ ವಯಸ್ಸಿನವರಲ್ಲೂ ರಕ್ತದ ಒತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಶಾಲಾ ಕಾಲೇಜುಗಳಲ್ಲಿ ರಕ್ತದೊತ್ತಡ (ಬಿಪಿ) ಮತ್ತಿತರ ಕಾಯಿಲೆಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮಾಲತೇಶ ಕಲ್ಲಿಂಗಪ್ಪ ಮಂಡಲೂರು ಹೇಳಿದ್ದಾರೆ.

- ಉಪನ್ಯಾಸ ಕಾರ್ಯಕ್ರಮದಲ್ಲಿ ಬಾಪೂಜಿ ಆಸ್ಪತ್ರೆ ಹೃದ್ರೋಗ ತಜ್ಞ ಡಾ.ಮಾಲತೇಶ ಕಲ್ಲಿಂಗಪ್ಪ ಅಭಿಮತ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಈಗಿನ ಕಾಲದಲ್ಲಿ ಸಣ್ಣ ವಯಸ್ಸಿನವರಲ್ಲೂ ರಕ್ತದ ಒತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಶಾಲಾ ಕಾಲೇಜುಗಳಲ್ಲಿ ರಕ್ತದೊತ್ತಡ (ಬಿಪಿ) ಮತ್ತಿತರ ಕಾಯಿಲೆಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಬಾಪೂಜಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಮಾಲತೇಶ ಕಲ್ಲಿಂಗಪ್ಪ ಮಂಡಲೂರು ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದಿಂದ ವಿವೇಕ್ ಪೋಷಕರ ಆರೋಗ್ಯ ಕಾರ್ಯಕ್ರಮದಡಿ ಇತ್ತೀಚೆಗೆ ಕಾಲೇಜಿನ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ "ರಕ್ತದೊತ್ತಡ: ವಾಸ್ತವ ಮತ್ತು ಪರಿಣಾಮಗಳು " ವಿಷಯ ಕುರಿತು ಅವರು ಮಾತನಾಡಿದರು.

ರಕ್ತದೊತ್ತಡ ಎಂದರೆ ರಕ್ತವು ರಕ್ತನಾಳಗಳ ಗೋಡೆಗಳ ಮೇಲೆ ಉಂಟು ಮಾಡುವ ಬಲವಾಗಿದೆ. ಇದು ದೇಹದಾದ್ಯಂತ ರಕ್ತವನ್ನು ಪಂಪ್ ಮಾಡುವುದರಿಂದ ಉಂಟಾಗುತ್ತದೆ. ರಕ್ತದೊತ್ತಡವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಎಲ್ಲ ಅಂಗಗಳಿಗೆ ತಲುಪಿಸಲು ಅಗತ್ಯವಾಗಿದೆ. ರಕ್ತದೊತ್ತಡವನ್ನು ಎರಡು ಸಂಖ್ಯೆಗಳಿಂದ ಅಳೆಯಲಾಗುತ್ತದೆ. ಸಿಸ್ಟೊಲಿಕ್ (ಮೇಲಿನ ಸಂಖ್ಯೆ) ಎಂಬ ಒತ್ತಡವು ಹೃದಯ ಸಂಕುಚಿತಗೊಂಡಾಗ (ಬಡಿತವಾದಾಗ) ರಕ್ತನಾಳಗಳ ಮೇಲೆ ಉಂಟಾಗುವ ಗರಿಷ್ಠ ಒತ್ತಡವಾಗಿದೆ. ಡಯಾಶ್ಟೊಲಿಕ್ ಒತ್ತಡವು ಪ್ರತಿ ಬಡಿತದ ನಡುವೆ ಹೃದಯವು ವಿಶ್ರಾಂತಿ ಪಡೆದಾಗ ಅಪಧಮನಿಳಲ್ಲಿನ ಒತ್ತಡವಾಗಿರುತ್ತದೆ ಎಂದರು.

ಸಾಮಾನ್ಯ ರಕ್ತದೊತ್ತಡ ಓದುವಿಕೆ ಸಾಮಾನ್ಯವಾಗಿ (120/80) ಎಂಎಂಎಚ್‌ಜಿ ಕಡಿಮೆ ಇರುತ್ತದೆ. ಅಧಿಕ ರಕ್ತದೊತ್ತಡವು ಸ್ಥಿರವಾಗಿ ಹೆಚ್ಚಾಗಿರುವ ಸ್ಥಿತಿಯಾಗಿದೆ. ಇದು ದೀರ್ಘ ಕಾಲದವರೆಗೆ ಅಧಿಕವಾಗಿದ್ದರೆ, ಹೃದಯ, ಮೂತ್ರಪಿಂಡ ಮತ್ತು ಮೆದುಳಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಕಡಿಮೆ ರಕ್ತದೊತ್ತಡವು ತುಂಬಾ ಕಡಿಮೆಯಾಗಿದ್ದರೆ ಅದು ಸಹಾ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಜಿ.ಗುರುಪ್ರಸಾದ್, ಹಿರಿಯ ಮಕ್ಕಳ ತಜ್ಞರಾದ ಡಾ.ಬಾಣಪುರ ಮಠ್, ಡಾ.ಸುರೇಶ್ ಬಾಬು, ಬಾಪೂಜಿ ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕ ಗುಬ್ಬಿ, ಡಾ.ಕೌಜಲಗಿ, ಡಾ.ಮೃತ್ಯುಂಜಯ, ಡಾ. ಎಸ್.ಎಸ್. ಪ್ರಕಾಶ್, ಡಾ.ರೇವಪ್ಪ, ಡಾ.ನವೀನ್ ನಾಡಿಗ್, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಇದ್ದರು.

- - -

(ಕೋಟ್‌)

ರಕ್ತದೊತ್ತಡ ಸಮಸ್ಯೆಯಿಂದ ಮುಕ್ತರಾಗಿರಲು ವಿಷ ಪದಾರ್ಥಗಳಿಂದ ದೂರವಿರಬೇಕು. ಒತ್ತಡ ನಿಯಂತ್ರಣ, ತಂತ್ರಜ್ಞಾನ ಬಳಕೆಯಲ್ಲಿ ಮಿತ, ಸಮತೋಲನಯುತ ಆಹಾರ ಪದ್ಧತಿ, ನಿತ್ಯ ವ್ಯಾಯಾಮ, ತೂಕ ನಿಯಂತ್ರಣ, ಸಮರ್ಪಕ ನಿದ್ರೆ ಮಾಡುವುದರಿಂದ ರಕ್ತದೊತ್ತಡ ಸಮಸ್ಯೆಯಿಂದ ದೂರವಿರಲು ಸಾಧ್ಯ.

- ಡಾ.ಮಾಲತೇಶ ಕಲ್ಲಿಂಗಪ್ಪ, ಹೃದ್ರೋಗ ತಜ್ಞ.

- - -

-2ಕೆಡಿವಿಜಿ39, 40:

ಆರೋಗ್ಯ ಕಾರ್ಯಾಗಾರದಲ್ಲಿ ರಕ್ತದೊತ್ತಡ: ವಾಸ್ತವ ಮತ್ತು ಪರಿಣಾಮಗಳು ವಿಷಯ ಕುರಿತು ಡಾ.ಮಾಲತೇಶ ಕಲ್ಲಿಂಗಪ್ಪ ಮಂಡಲೂರು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ