ಕನ್ನಡಪ್ರಭ ವಾರ್ತೆ ತರೀಕೆರೆ
ಒಳ್ಳೆಯ ಆಹಾರ ಸೇವನೆ ಯಿಂದ ಆಸ್ಪತ್ರೆ ಸೇರುವುದು ತಪ್ಪುತ್ತದೆ, ಅಲ್ಲದೆ ಆಹಾರ ತಯಾರಿಸುವಾಗ ಶುಚಿತ್ವ ಕಾಪಾಡಬೇಕು, ಒಳ್ಳೆಯ ಆಹಾರ ಸೇವನೆ ಯಿಂದ ಆರೋಗ್ಯ ಆರೋಗ್ಯವಂತರು ದೇಶದ ಸಂಪತ್ತು, ಆಯುರ್ವೇದ ದಲ್ಲಿ ಬಹಳ ವರ್ಷಗಳ ಹಿಂದೆಯೇ ಆಹಾರ ಪದ್ಧತಿ ತಿಳಿಸಿದ್ದಾರೆ, ನಾವು ಪಾಲಿಸಬೇಕು ಎಂದು ಅವರು ಹೇಳಿದರು.
ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ, ಲಯನ್ಸ್ ಕ್ಲಬ್ ನಿರ್ದೇಶಕರು ಆದ ಡಾ.ಟಿ.ಎಂ. ದೇವರಾಜ್ ಅವರು ಮಾತನಾಡಿ, ಮಿತವಾದ ಶುದ್ಧ ಆಹಾರ ಸೇವನೆ, ಹಾಗೂ ಶುದ್ಧತೆಗೆ ಗಮನ ನೀಡಿದರೆ ಆಸ್ಪತ್ರೆ ನೋಡುವುದೇ ಬೇಡ, ಈ ಅರ್ಥಗರ್ಭಿತ ಕಾರ್ಯಕ್ರಮ ಇನ್ನು ಹೆಚ್ಚಾಗಿ ಲಯನ್ಸ್ ಕ್ಲಬ್ ನವರು ಮಾಡುವಂತಾಗಲಿ,. ಶಿಕ್ಷಣ, ಆರೋಗ್ಯ, ಆಹಾರ ಇದರಿಂದ ಕೋವಿಡ್ ಮಹಾಮಾರಿ ಯಿಂದ ಗೆದ್ದೆವು ಎಂದು ಅವರು ಹೇಳಿದರು,.ಲಯನ್ಸ್ ಕ್ಲಬ್ ನ ಕಾರ್ಯದರ್ಶಿಟಿ.ಎಂ. ಮುರಳಿ, ನಿರ್ದೇಶಕ ಪ್ರದೀಪ್, ಚಂದನ್, ಮುರುಗೇಶ್ ಭಾಗವಹಿಸಿದ್ದರು
.ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ತರೀಕೆರೆ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಏರ್ಪಾಡಾಗಿದ್ದ ವಿಶ್ವ ಆಹಾರ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ವಿಶ್ವ ಆಹಾರ ದಿನಾಚರಣೆ ಅಂಗವಾಗಿ ಆಸ್ಪತ್ರೆಯ ರೋಗಿ ಗಳಿಗೆ ಹಣ್ಣು ಬಿಸ್ಕತ್ ವಿತರಿಸಲಾಯಿತು.
---------------ಫೋಟೋ: ತರೀಕೆರೆಯಲ್ಲಿ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ವತಿಯಿಂದ ವಿಶ್ವ ಆಹಾರ ದಿನ ಆಚರಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್ ಅಧ್ಯಕ್ಷರು ಸಾಯಿಕುಮಾರ್ ಎ.ಎಸ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಟಿ.ಎಂ. ದೇವರಾಜ್ ಇದ್ದಾರೆ.
---16ಕೆಟಿಆರ್.ಕೆ.2ಃ