ಬ್ಯಾಡಗಿ: ರಕ್ತದಾನವು ಸಮಾಜಮುಖಿ ಸೇವೆಯ ಪ್ರಮುಖ ಭಾಗವಾಗಿದ್ದು, ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ನೆರವಾಗಲು ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ವಾಲ್ಮೀಕಿ ಸಮಾಜದ ಅಧ್ಯಕ್ಷ ಹೊನ್ನೂರಪ್ಪ ಕಾಡಸಾಲಿ ಹೇಳಿದರು.
ಮೋಹನಕುಮಾರ ಹುಲ್ಲತ್ತಿ ಮಾತನಾಡಿ, ರಕ್ತದಾನವು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಮತ್ತೊಬ್ಬರ ಜೀವ ಉಳಿಸುವ ಮಹತ್ವದ ಸೇವೆಯಾಗಿದೆ. ರಕ್ತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಿಬಿರದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಶಹರ ಘಟಕದ ಅಧ್ಯಕ್ಷ ಕುಮಾರ ಮ್ಯಾಗೇರಿ, ಪುರಸಭೆ ಮಾಜಿ ಸದಸ್ಯ ರಾಮಣ್ಣ ಕೋಡಿಹಳ್ಳಿ, ಶಿವಾನಂದ ಯಮನಕ್ಕನವರ, ಮಂಜುನಾಥ ಕಳಗೂಂಡ, ಪರಶುರಾಮ ಓಲೇಕಾರ, ಆನಂದ ಮುದುಕಮ್ಮನವರ, ಮಲ್ಲೇಶಪ್ಪ ಒಳಗುಂದಿ, ನಾಗರಾಜ ರಾಮಣ್ಣನವರ, ನಿಂಗಪ್ಪ ಕೋಡಿಹಳ್ಳಿ, ನೀಲಕಂಠ ತರೇದಹಳ್ಳಿ, ಪ್ರಕಾಶ ಬಣಕಾರ, ಕಾಂತೇಶ, ವಿನಾಯಕ, ರಾಮಣ್ಣ ಬರದನಹಳ್ಳಿ, ಹುಲಗೆಪ್ಪ, ನಾಗರಾಜ ಕರ್ಚಡ, ಜಿಲ್ಲಾ ಆಸ್ಪತ್ರೆಯ ಡಾ. ರಶ್ಮಿ ಮಲ್ನಾಡದ ಆಪ್ತ ಸಮಾಲೋಚಕ ರೇವಣ್ಣ ತೆಂಬದ ಹಾಗೂ ಆಸ್ಪತ್ರೆ ಸಿಬ್ಬಂದಿ ಇದ್ದರು.