ಚಿಕ್ಕ ವಯಸ್ಸಿನವರ ಹೃದಯಘಾತ ಕುರಿತು ಸಮೀಕ್ಷೆ

KannadaprabhaNewsNetwork |  
Published : Jun 25, 2025, 11:47 PM IST
37 | Kannada Prabha

ಸಾರಾಂಶ

ಹೃದಯಾಘಾತಕ್ಕೆ ಕೋವಿಡ್ ಬಂದಿವುದಾ, ಬದಲಾದ ಜೀವನ ಶೈಲಿಯಾ ಅಥವಾ ಹೆಚ್ಚು ಶುಗರ್ ಇರುವುದಾ ಎಂದು ತಿಳಿದಿಕೊಳ್ಳವ ಅತ್ಯವಶ್ಯಕವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರುಚಿಕ್ಕವಯಸ್ಸಿನಲ್ಲಿಯೇ ಅಗುತ್ತಿರುವ ಹೃದಯಾಘಾತಗಳ ಕುರಿತು ವರದಿ ಸಿದ್ಧ ಪಡಿಸಲು ಸಮೀಕ್ಷೆ ನಡೆಸಲಾಗುವುದು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ ತಿಳಿಸಿದರು.ಮೈಸೂರು ಪತ್ರಕರ್ತರು ಹಾಗೂ ಅವರ ಕುಟುಂಬಸ್ಥರಿಗೆ ಜಯದೇವ ಹೃದ್ರೋಗ ಆಸ್ಪತ್ರೆಯಿಂದ ಬುಧವಾರ ಆಯೋಜಿಸಿದ್ದ ಹೃದಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೇ ಹೃದಯಾಘಾತ ಹೆಚ್ಚುತ್ತಿದೆ. ನಿತ್ಯ 3-4 ಜನರು ಅಂಜಿಯೋಗ್ರಾಂ ಮಾಡಿ ಚಿಕಿತ್ಸೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಏನೆಂದು ತಿಳಿಯಬೇಕಿದೆ ಎಂದರು.ಹೃದಯಾಘಾತಕ್ಕೆ ಕೋವಿಡ್ ಬಂದಿವುದಾ, ಬದಲಾದ ಜೀವನ ಶೈಲಿಯಾ ಅಥವಾ ಹೆಚ್ಚು ಶುಗರ್ ಇರುವುದಾ ಎಂದು ತಿಳಿದಿಕೊಳ್ಳವ ಅತ್ಯವಶ್ಯಕವಾಗಿದೆ. ಇದಕ್ಕಾಗಿ ಬೆಂಗಳೂರಿನಲ್ಲಿ ಈಗಾಗಲೇ ಸರ್ವೇ ಕಾರ್ಯ ನಡೆಯುತ್ತಿದೆ ಎಂದು ಹೇಳಿದರು. ಅದರಂತೆ ಮೈಸೂರಿನಲ್ಲಿಯೂ ನಾವು ವೈದ್ಯರ ಅಸೋಸಿಯೇಷನ್‌ನಿಂದ ಹೃದಯಾಘಾತಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಹೃದಯಾಘಾತಕ್ಕೆ ಒಳಗಾದ 40 ವರ್ಷದೊಳಗಿನವರ ಚಿಕಿತ್ಸೆ, ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಲ್ಲಿ ಹೃದಯಾಘಾತಕ್ಕೆ ನಿಖರ ಕಾರಣ ಪತ್ತೆಯ ವರದಿ ತಯಾರಿಸಲು ಪ್ರಾರಂಭಿಸಲಿದ್ದು, ಒಂದು ವರ್ಷದಲ್ಲೇ ವರದಿ ತಯಾರಿಸಿ ಸೂಕ್ತ ಚಿಕಿತ್ಸೆ ನೀಡಲು ಕ್ರಮವಹಿಸಲಾಗುವುದು ಎಂದು ಹೇಳಿದರು. ಹೃದಯಾಘಾತ ಎನ್ನುವುದು ಕೊನೆ ಕ್ಷಣದ ವರೆವಿಗೂ ತಿಳಿಯುವುದಿಲ್ಲ. ಏಕಾಏಕಿ ಸಂಭವಿಸಿದಾಗ ಅಗುವ ಹಾನಿ ತಪ್ಪಿಸಲು ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಅದಕ್ಕಾಗಿ ಜಯದೇವ ಆಸ್ಪತ್ರೆಯಿಂದಲೂ ಜನರಿಗೆ ಉಪಯೋಗವಾಗುವ ದೃಷ್ಠಿಯಿಂದ ಉಚಿತ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಈ ಮೂಲಕ ಹೃದಯಾಘಾತ ಕಡಿಮೆ ಮಾಡಿಕೊಳ್ಳಲು ಸಹಕಾರಿ ಅಗುತ್ತಿದೆ ಎಂದರು. ಹಿರಿಯ ಪತ್ರಕರ್ತ ಕೂಡ್ಲಿ ಗುರುರಾಜ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಎಸ್‌.ಟಿ. ರವಿಕುಮಾರ್ ಮಾತನಾಡಿದರು.ಆಸ್ಪತ್ರೆಯ ವೈದ್ಯರಾದ ಡಾ.ಶಾಂಭವಿ, ಡಾ.ಪ್ರಭುಚಂದ್ರ, ನರ್ಸಿಂಗ್ ಸೂಪರಿಂಟೆಂಡೆಂಟ್ ಯೋಗಾನಂದ, ಪಿಆರ್‌ಒ ಪ್ರಿಯಾ, ಪತ್ರಕರ್ತರಾದ ಎಂ.ಆರ್.ಸತ್ಯನಾರಾಯಣ, ಸಿ.ಎಂ.ಕಿರಣ್‌ಕುಮಾರ್, ಆರ್.ಕೃಷ್ಣ, ಎಂ.ಸುಬ್ರಹ್ಮಣ್ಯ, ಬಿ. ರಾಘವೇಂದ್ರ, ನೇರಳೆ ಬಸವರಾಜು, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಿ. ಸುರೇಶ್‌, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ಅಧಿಕೃತ ಏಜೆಂಟರ ಸಂಘದ ಶಾಂತೇಶ್ ಇತರರು ಇದ್ದರು. ಶಿಬಿರದಲ್ಲಿ 160ಕ್ಕೂ ಹೆಚ್ಚು ಜನರ ಶಿಬಿರದ ಪ್ರಯೋಜನ ಪಡೆದುಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ