ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರಾ ಮಹೋತ್ಸವವು ಮಾ.8ರಿಂದ ಆರಂಭಗೊಳ್ಳಲಿದ್ದು, ಮಾ.16ರವರೆಗೆ ನಡೆಯಲಿದೆ ಎಂದು ಸರ್ವೋದಕ ಕರ್ನಾಟಕ ಪಕ್ಷದ ಅಧ್ಯಕ್ಷ ಕೆ.ಎಸ್.ದಯಾನಂದ್ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತ್ರೆಗೆ ಮಾ.8ರಂದು ಸಂಜೆ 4 ಗಂಟೆಗೆ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಬೇಬಿ ಗ್ರಾಮದ ದುರ್ದಂಡೇಶ್ವರ ಮಠದ ಪೀಠಾಧ್ಯಕ್ಷ ಡಾ.ತ್ರಿನೇತ್ರಮಹಂತ ಶಿವಯೋಗಿ ಸ್ವಾಮೀಜಿ, ಶ್ರೀರಾಮಯೋಗಿಶ್ವರದ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.ಮಾ.9ರಂದು ಮಹಿಳಾ ಸಾಂಸ್ಕೃತಿಕ ಉತ್ಸವ, ಮಹಿಳಾ ಕ್ರೀಡಾಕೂಟಕ್ಕೆ ರೈತ ಮುಖಂಡರಾದ ಸುನೀತ ಪುಟ್ಟಣ್ಣಯ್ಯ ಚಾಲನೆ ನೀಡುವರು. ಮಾ.10ರಂದು ಪುರುಷರ ವಾಲಿಬಾಲ್ ಕ್ರೀಡಾಕೂಟವನ್ನು ಕಾಂಗ್ರೆಸ್ ಮುಖಂಡ ಆರ್.ಎ.ನಾಗಣ್ಣ ಉದ್ಘಾಟಿಸಲಿದ್ದಾರೆ. ಮಾ.11ರಂದು ಪುರುಷರ ಕಬಡ್ಡಿ ಪಂದ್ಯಾವಳಿಗೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಚಾಲನೆ ನೀಡಲಿದ್ದಾರೆ. ಮಾ.13ರಂದು ಪುರುಷರ ಕುಸ್ತಿ ಪಂದ್ಯಾವಳಿಗೆ ರಾಘವಪ್ರಕಾಶ್ ಚಾಲನೆ ನೀಡುವರು ಎಂದರು.
ಮಾ.13 ರಂದು ಉಚಿತ ಸರಳ ವಿವಾಹ ಮಹೋತ್ಸವಕ್ಕೆ ಮೈಸೂರು ಅರಸ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡುವರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಿವಬಸವ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಹಿರಿಯ ಸಾಹಿತಿ ದೇವನೂರು ಮಹದೇವ, ಚಿತ್ರನಟ ದರ್ಶನ್ ತೂಗದೀಪ್, ಪದ್ಮಶ್ರೀ ಪುರಸ್ಕೃತೆ ಸಾಲಮರದ ತಿಮ್ಮಕ್ಕ, ನಂದಿನಿ ಜಯರಾಮು, ಸುನೀತ ಪುಟ್ಟಣ್ಣಯ್ಯ, ಸ್ಮಿತ ಪುಟ್ಟಣ್ಣಯ್ಯ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.ಮಾ.14ರಂದು ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಲಿದೆ. ಮಾ15 ರಂದು ಸಿದ್ದೇಶ್ವರ ಮತ್ತು ಮಹದೇಶ್ವರಸ್ವಾಮಿ ರಥೋತ್ಸವ, ಮಾ.16 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ. ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಜಾತ್ರಾ ಮಹೋತ್ಸವದ ಬಹುಮಾನ ಸ್ಪರ್ಧೆಗೆ ಭಾಗವಹಿಸುವ ರಾಸುಗಳು ಮಾ.11 ರಾತ್ರಿ 8 ಗಂಟೆಯವರ ಒಳಗೆ ನೋಂದಾಯಿಸಿಕೊಳ್ಳಬೇಕು. ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಉಮಾಶಂಕರ್, ಚಿಕ್ಕಾಡೆ ವಿಜಿಕುಮಾರ್, ಯೋಗೇಶ್, ಯುವರಾಜ್,ಪಾಂಡುರಂಗ, ಶಿವಕುಮಾರ್ ಇದ್ದರು.