ಮಳೆಯ ಅಬ್ಬರ: ತುಂಗೆಯಲ್ಲಿ ಪ್ರವಾಹ

KannadaprabhaNewsNetwork |  
Published : Aug 01, 2026, 01:15 AM IST
ೇಿಿಿ | Kannada Prabha

ಸಾರಾಂಶ

ಶೃಂಗೇರಿತಾಲೂಕಿನಾದ್ಯಂತ ಶುಕ್ರವಾರ ಹಗಲಿಡೀ ಎಡಬಿಡದೆ ಪುಷ್ಯ ಮಳೆ ಅಬ್ಬರಿದುತ್ತಿದ್ದು ತುಂಗಾ ನದಿಯ ಪ್ರವಾಹದಲ್ಲಿ ಶ್ರೀಮಠದ ತುಂಗಾ ನದಿ ತೀರದಲ್ಲಿರುವ ಕಪ್ಪೆಶಂಕರ ದೇಗುಲ ಮುಳುಗಡೆಯಾಗಿದೆ, ವಿವಿಧ ತಗ್ಗು ಪ್ರದೇಶಗಳಿಗೂ ನೀರು ನುಗ್ಗುತ್ತಿದೆ.

ಹೊಂಡಕ್ಕುರುಳಿದ ಲಾರಿ; ಮೂವರಿಗೆ ಗಾಯ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಶುಕ್ರವಾರ ಹಗಲಿಡೀ ಎಡಬಿಡದೆ ಪುಷ್ಯ ಮಳೆ ಅಬ್ಬರಿದುತ್ತಿದ್ದು ತುಂಗಾ ನದಿಯ ಪ್ರವಾಹದಲ್ಲಿ ಶ್ರೀಮಠದ ತುಂಗಾ ನದಿ ತೀರದಲ್ಲಿರುವ ಕಪ್ಪೆಶಂಕರ ದೇಗುಲ ಮುಳುಗಡೆಯಾಗಿದೆ, ವಿವಿಧ ತಗ್ಗು ಪ್ರದೇಶಗಳಿಗೂ ನೀರು ನುಗ್ಗುತ್ತಿದೆ.

ಕಿಗ್ಗಾ ಸುತ್ತಮುತ್ತಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಿ ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತದೆ. ಗುರುವಾರ ರಾತ್ರಿಯಿಡೀ ಒಂದೇ ಸಮನೆ ಸುರಿಯುತ್ತಿದ್ದ ಮಳೆ ಶುಕ್ರವಾರವೂ ಗಾಳಿ ಸಹಿತ ಆರ್ಭಟಿಸಲಾರಂಬಿಸಿತು. ಒಂದೇ ಸಮನೆ ಮಳೆ ಸುರಿಯುತ್ತಿರುವುದರಿಂದ ಮಂಗಳೂರು ಶಿವಮೊಗ್ಗ ರಾ.ಹೆದ್ದಾರಿ 169 ರ ನೆಮ್ಮಾರು ಸಾಲ್ಮರ, ತ್ಯಾವಣ,ಆನೆಗುಂದ ರಸ್ತೆಯಂಚಿನಲ್ಲಿ ಗುಡ್ಡಕುಸಿದು ಬೀಳುತ್ತಿದೆ. ಇನ್ನು ಕೆಲವೆಡೆ ಭೂಕುಸಿತ ಉಂಟಾಗುತ್ತಿದೆ.

ಮಣ್ಣು ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಕೆಲವೆಡೆ ಚರಂಡಿ, ಡ್ರೈನೆಜ್‌ ನೀರೆಲ್ಲ ಕಾಲುವೆಯಂತೆ ರಸ್ತೆಯ ಮೇಲೆಯೇ ಹರಿಯುತ್ತಿದೆ.

-- ಬಾಕ್ಸ್--

ಕೆರೆಕಟ್ಟೆ ಬಳಿ ಹೊಂಡಕ್ಕುರುಳಿದ ಲಾರಿ ಮೂವರಿಗೆ ಗಾಯ

ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169 ರ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕೆರೆಕಟ್ಟೆ ಕೊರ್ಕನಹಳ್ಳ ಸೇತುವೆ ಬಳಿ ಗುರುವಾರ ತಡರಾತ್ರಿ ಲಾರಿಯೊಂದು ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಕಾರ್ಕಳದಿಂದ ಶೃಂಗೇರಿಯತ್ತ ಮೆಕ್ಕೆಜೋಳ ತುಂಬಿಸಿಕೊಂಡು ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಹೊಂಡಕ್ಕುರುಳಿದೆ. ಸಮೀಪದಲ್ಲಿಯೇ ತುಂಬಿ ಹರಿಯುತ್ತಿದ್ದ ನದಿಯಿದ್ದು ಭಾರೀ ಅನಾಹುತ ತಪ್ಪಿದೆ. ಲಾರಿಯಲ್ಲಿದ್ದವರು ಗಾಯಗೊಂಡಿದ್ದರೂ ಅದೃಷ್ಟವತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ರಾತ್ರಿಯೇ ಚಿಕಿತ್ಸೆಗೆ ಶೃಂಗೇರಿ ಆಸ್ಪತ್ರೆಗೆ ದಾಖಲಿಸ ಲಾಗಿದೆ.ಸಂಜೆವರೆಗೂ ಮಳೆಯ ಆರ್ಭಟ ಮುಂದುವರಿದಿತ್ತು.

31 ಶ್ರೀ ಚಿತ್ರ 3-

ಶೃಂಗೇರಿ ಸುತ್ತಮುತ್ತ ಭಾರೀ ಮಳೆಯಾಗುತ್ತಿರುವುದರಿಂದ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ತುಂಗಾ ನದಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಡ್ರೋನ್ ಪ್ರಯೋಗಾಲಯ
ತಮಿಳುನಾಡಿಗೆ ನೀರು ಹರಿಸುವುದು ಬೇಡ